2ನೇ ಹಂತದ ಮೆಟ್ರೋ ನಿಲ್ದಾಣಗಳಲ್ಲಿ ಬಸ್ ಪಥ

ಬೆಂಗಳೂರು: ಸಮೂಹ ಸಾರಿಗೆಗೆ ಒತ್ತು ನೀಡಲು ಬಿಎಂಆರ್​ಸಿಎಲ್ 2ನೇ ಹಂತದ ಮೆಟ್ರೋ ನಿಲ್ದಾಣಗಳ ಹೊರಭಾಗದಲ್ಲಿ ಬಿಎಂಟಿಸಿ ಬಸ್​ಗಳ ನಿಲುಗಡೆಗೆ ಪ್ರತ್ಯೇಕ ಪಥ ನಿರ್ವಿುಸಲು ನಿರ್ಧರಿಸಲಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚುತ್ತಿದ್ದು, ಅದನ್ನು ತಡೆಯುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಗಳು

ಸಮೂಹ ಸಾರಿಗೆ ಬಳಕೆಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಸ್ವಂತ ವಾಹನ ಬದಲು ಮೆಟ್ರೋ ರೈಲು, ಬಿಎಂಟಿಸಿ ಬಸ್ ಬಳಸುವಂತೆ ಮನವಿ ಮಾಡಿಕೊಳ್ಳಲಾಗುತ್ತಿದೆ.

ಈ ಸಂಬಂಧ ಬಿಎಂಆರ್​ಸಿಎಲ್ ಮೆಟ್ರೋ 2ನೇ ಹಂತದಲ್ಲಿ ನಿರ್ವಣವಾಗಲಿರುವ ಎಲ್ಲ ನಿಲ್ದಾಣಗಳ ಹೊರಭಾಗದಲ್ಲಿ ಬಸ್​ಗಳ ಓಡಾಟಕ್ಕೆ ಅನುಕೂಲವಾಗಲು ಪ್ರತ್ಯೇಕ ಪಥ ನಿರ್ವಿುಸಲಿದೆ. 2ನೇ ಹಂತದಲ್ಲಿ ಒಟ್ಟು 137 ಕಿ.ಮೀ. ಉದ್ದದ ಮಾರ್ಗ ನಿರ್ವಿುಸಲಾಗುತ್ತಿದೆ. ಅದರಲ್ಲಿ ಮೊದಲ ಹಂತದ ಮಾರ್ಗದ ವಿಸ್ತರಣೆ ಜತೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂರ್ಪಸುವ ಮೆಟ್ರೋ ಮಾರ್ಗ ನಿರ್ವಣವೂ ಸೇರಿದೆ. ಅಷ್ಟು ಉದ್ದದ ಮೆಟ್ರೋ ಮಾರ್ಗದಲ್ಲಿ 62 ನಿಲ್ದಾಣಗಳು ಬರಲಿದೆ. ಅವುಗಳಲ್ಲೆಲ್ಲ ಬಸ್ ಬೇ, ಟ್ಯಾಕ್ಸಿ, ಆಟೋ ನಿಲ್ದಾಣಗಳನ್ನು ನಿರ್ವಿುಸಲಾಗುತ್ತದೆ.

ಪಾಲಿಕೆಗೆ ನೋಟಿಸ್

ಬೆಂಗಳೂರು: ವಿಜಯನಗರ ಮೆಟ್ರೋ ರೈಲು ನಿಲ್ದಾಣದ ಬಳಿ ಬೀದಿ ಬದಿಯ ವ್ಯಾಪಾರಿಗಳಿಂದಾಗಿರುವ ಪಾದಚಾರಿ ಮಾರ್ಗ ಹಾಗೂ ಸರ್ವೀಸ್ ರಸ್ತೆಗಳ ಒತ್ತುವರಿ ತೆರವು ಮಾಡದ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ನ್ಯಾಯಾಂಗ ನಿಂದನೆ ಅರ್ಜಿ ಸಂಬಂಧ ಬಿಬಿಬಿಎಂಪಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಕೋರ್ಟ್ ಆದೇಶದ ಹೊರತಾಗಿಯೂ ಒತ್ತುವರಿ ತೆರವು ಗೊಳಿಸಿಲ್ಲ ಎಂದು ಆರೋಪಿಸಿ ವಿಜಯನಗರ ನಿವಾಸಿ ದೇಸಾಯಿ ಡಿ. ಹೇಮೇಶ್ ಬಾಬು ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ರಜಾ ಕಾಲದ ಪೀಠ ಬಿಬಿಎಂಪಿ ವಿಜಯನಗರ ಉಪ ವಿಭಾಗದ ಸಹಾಯಕ ಕಾರ್ಯಕಾರಿ ಇಂಜಿನಿಯರ್ ವಸಂತ್ ಕುಮಾರ್​ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.

Leave a Reply

Your email address will not be published. Required fields are marked *