ಪಾದಚಾರಿಗಳ ಮೇಲೆ ಹರಿದ ಕೆಎಸ್​ಆರ್​ಟಿಸಿ ಬಸ್​: ಓರ್ವ ಸಾವು, ಇಬ್ಬರಿಗೆ ಗಂಭೀರ ಗಾಯ

ಹಾಸನ: ಚಿಕ್ಕಬ್ಯಾಡಗೆರೆ ಗ್ರಾಮದ ಬಳಿ ಕೆಎಸ್​ಆರ್​ಟಿಸಿ ಬಸ್​ ಮೂವರು ಪಾದಚಾರಿಗಳ ಮೇಲೆ ಹರಿದು, ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಣ್ಣಪ್ಪ (40) ಮೃತ.

ಬಸ್​ ಬೆಣ್ಣೂರಿನಿಂದ ಬೇಲೂರಿಗೆ ಬರುತ್ತಿತ್ತು. ಆದರೆ ತಾಂತ್ರಿಕ ದೋಷದಿಂದ ಹೆಡ್​ಲೈಟ್​ ಹೊತ್ತಿಕೊಂಡಿರಲಿಲ್ಲ. ಚಿಕ್ಕಬ್ಯಾಡಗೆರೆ ಗ್ರಾಮದ ಬಳಿ ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ಹರಿದಿದ್ದರಿಂದ ಅಪಘಾತ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.