ಚಳ್ಳಕೆರೆ: ಚಳ್ಳಕೆರೆ ಡಿಪೋದಿಂದ ದೊಡ್ಡ ಉಳ್ಳಾರ್ತಿ ಮಾರ್ಗವಾಗಿ ಮಿಟ್ಲಕಟ್ಟೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಮರಿಸ್ವಾಮಿ ಮೇಲೆ ಸ್ಥಳೀಯರು ಹಲ್ಲೆ ಮಾಡಿದ್ದಾರೆ.
ಪ್ರಯಾಣದ ಶುಲ್ಕ ಸಂಬಂಧ ಗಲಾಟೆ ನಡೆದಿದ್ದು, ಮಂಗಳವಾರ ರಾತ್ರಿ ಮಿಟ್ಲಕಟ್ಟೆಯಲ್ಲಿ ಬಸ್ ನಿಲುಗಡೆ ಮಾಡಿದ್ದ ಸಂದರ್ಭ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಬೋಗನಹಳ್ಳಿಯ ಇಬ್ಬರ ವಿರುದ್ಧ ತಳಕು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.