ಹುನಗುಂದ-ಮಾಪಸಾ ಬಸ್ ಸೇವೆಗೆ ಚಾಲನೆ

ಹುನಗುಂದ: ಪಟ್ಟಣದ ಸಾರಿಗೆ ಘಟಕದಿಂದ ಹುನಗುಂದ-ಮಾಪಸಾ ಮಾರ್ಗಕ್ಕೆ ನೂತನ ಬಸ್ ಸೇವೆಗೆ ಡಿಟಿಒ ಪಿ.ವಿ.ಮೇತ್ರಿ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ನೂತನ ಹುನಗುಂದ ಸಾರಿಗೆ ಘಟಕ ಆರಂಭದಲ್ಲಿಯೇ ಉತ್ತಮ ಆದಾಯದಲ್ಲಿ ಮುನ್ನುಗ್ಗುತ್ತಿದೆ. ಈಗಾಗಲೇ 39 ಮಾರ್ಗಗಳನ್ನು ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಾರ್ಗ ನೀಡಲಾಗುವುದು ಎಂದರು.

ಘಟಕ ವ್ಯವಸ್ಥಾಪಕ ಬಿ.ಬಿ. ಚಿತ್ತವಾಡಗಿ ಮಾತನಾಡಿ, ಪ್ರತಿದಿನ ಮಧ್ಯಾಹ್ನ 1.15ಕ್ಕೆ ಹುನಗುಂದದಿಂದ ಹೊರಡುವ ಬಸ್ ಕರಡಿ, ನಾರಾಯಣಪುರ, ನಾಲತವಾಡ, ಮುದ್ದೇಬಿಹಾಳ, ಆಲಮಟ್ಟಿ, ಬಾಗಲಕೋಟೆ, ಲೋಕಾಪುರ ಮಾರ್ಗವಾಗಿ ಮರುದಿನ ನಸುಕಿನ ಜಾವ 4 ಗಂಟೆಗೆ ಮಾಪಸಾ ತಲುಪುವುದು. ಅದೇ ದಿನ ಸಂಜೆ 7.30ಕ್ಕೆ ಮಾಪಸಾದಿಂದ ಹೊರಟು ಅದೇ ಮಾರ್ಗವಾಗಿ ಹುನಗುಂದ ತಲುಪುವುದು ಎಂದು ಘಟಕ ವ್ಯವಸ್ಥಾಪಕ ಮಾಹಿತಿ ನೀಡಿದರು.

ರಾಜ್ಯ ರೈತ ಸಂಘದ ತಾಲೂಕಾಧ್ಯಕ್ಷ ಮಲ್ಲನಗೌಡ ತುಂಬದ, ಹುನಗುಂದ ನಗರಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಾ ಜಾಲಿಹಾಳ, ಕಾರ್ಯದರ್ಶಿ ಅಶೋಕ ಹಂದ್ರಾಳ, ಜಿ.ಬಿ. ಕಂಬಾಳಿಮಠ, ಬಸವರಾಜ ಕಮ್ಮಾರ, ಮಲ್ಲಿಕಾರ್ಜುನ ದರಗಾದ, ಬಸವರಾಜ ಮುರನಾಳ, ಮಹಾಂತೇಶ ತೋಪಲಕಟ್ಟಿ, ಮಲ್ಲಿಕಾರ್ಜುನ ಬಂಡರಗಲ್ಲ, ಮಹಾಂತೇಶ ಪಾಟೀಲ, ಶೇಖರ ಕೋಟಿ ಇತರರಿದ್ದರು.