ಚಾರ್ಮಾಡಿಯಲ್ಲಿ ಮತ್ತೆ ಟ್ರಾಫಿಕ್ ಜಾಮ್

ಬಣಕಲ್: ಚಾರ್ಮಾಡಿ ಘಾಟಿಯ ಎರಡನೇ ತಿರುವಿನಲ್ಲಿ ಗುರುವಾರ ಮಧ್ಯರಾತ್ರಿ ರಾಜಹಂಸ ಬಸ್ ಕೆಟ್ಟು ನಿಂತಿದ್ದರಿಂದ ಗಂಟೆಗಟ್ಟಲೇ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಗುರುವಾರ ರಾತ್ರಿ 2 ಗಂಟೆಗೆ ಆ್ಯಕ್ಸೆಲ್ ಕಟ್ ಆಗಿ ಬಸ್ ರಸ್ತೆಯಲ್ಲೇ ನಿಂತಿತ್ತು. ಶುಕ್ರವಾರ ಬೆಳಗ್ಗೆ 7ರವರೆಗೆ ವಾಹನ ಸಂಚಾರ ಸ್ಥಗಿತತೊಂಡಿತ್ತು. ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಸಂಚಾರ ಸ್ಥಗಿತಗೊಂಡ ವಿಚಾರ ತಿಳಿಯುತ್ತಿದ್ದಂತೆ ಕೊಟ್ಟಿಗೆಹಾರದ ತನಿಖಾ ಠಾಣೆಯಲ್ಲಿ ಪೊಲೀಸರು ವಾಹನಗಳನ್ನು ತಡೆದರು. ಘಾಟಿಯಲ್ಲಿ ಬಸ್ ತೆರವುಗೊಳಿಸಿದ ನಂತರ ಕೊಟ್ಟಿಗೆಹಾರದಲ್ಲಿ ವಾಹನಗಳನ್ನು ಬಿಡಲಾಯಿತು.