Saturday, 17th November 2018  

Vijayavani

ಮೈಸೂರು ಪಾಲಿಕೆಯಲ್ಲಿ ದೋಸ್ತಿ ತಂತ್ರ - ಮಾತುಕತೆ ಯಶಸ್ವಿ - 2 ವರ್ಷ ಕಾಂಗ್ರೆಸ್, 3 ವರ್ಷ ಜೆಡಿಎಸ್​​ಗೆ        ಮೀಸಲಾತಿ ವಿಚಾರದಲ್ಲಿ ದೋಸ್ತಿಗಳೇ ಗರಂ - ಸಿಎಂ ಎಚ್​​ಡಿಕೆಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ        ಅನಂತ್ ನಿಧನದಿಂದಾಗಿರೋ ನಷ್ಟ ಭರಿಸಲು ಸರ್ಕಸ್ - ರಾಜ್ಯ ಬಿಜೆಪಿ ಸಂಸದರಿಗೆ ಸಿಗುತ್ತಾ ಸಚಿವ ಭಾಗ್ಯ        ಇಂದು ಮಹದಾಯಿ ಕುರಿತು ಸರ್ವಪಕ್ಷ ಸಭೆ - ಮುಂದಿನ ಕ್ರಮದ ಬಗ್ಗೆ ನಡೆಯಲಿದೆ ಮಹತ್ವದ ಚರ್ಚೆ        ಇಂದು ಶಬರಿಮಲೆ ಬಾಗಿಲು ಮತ್ತೆ ಓಪನ್ - ಮಹಿಳೆಯರಿಗೆ ದರ್ಶನ ಸಿಗುತ್ತೋ? ಸಿಗಲ್ವೋ..?       
Breaking News

ಬುರಾರಿ ಪ್ರಕರಣ: ಭಾಟಿಯಾ ಕುಟುಂಬದೊಂದಿಗೆ ತಾಂತ್ರಿಕ್​ನ ತಳುಕು

Wednesday, 11.07.2018, 8:14 PM       No Comments

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಂಭವಿಸಿದ ಒಂದೇ ಕುಟುಂಬದ 11 ಜನರ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾಟಿಯಾ ಕುಟುಂಬ ತಾಂತ್ರಿಕ್‌ ಜತೆ ಸಂಪರ್ಕ ಹೊಂದಿತ್ತು ಎಂದು ಹೊಸ ವಿಚಾರ ಕೇಳಿ ಬಂದಿದೆ.

ಈ ಕುರಿತಂತೆ ಕುಲದೀಪ್‌ ರಾಣಾ ಎಂಬಾತ ದೆಹಲಿ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ತಾಂತ್ರಿಕ್‌ ಚಂದ್ರ ಪ್ರಕಾಶ್‌ ಪಾಠಕ್ ಅಕಾ (ದಾದಿ ವಾಲೆ ಬಾಬಾ) ಎಂಬಾತನ ಜತೆ ಕುಟುಂಬ ಸಂಪರ್ಕವನ್ನು ಹೊಂದಿತ್ತು ಎಂದು ಬಹಿರಂಗ ಪಡಿಸಿದ್ದಾರೆ.

ದೆಹಲಿಯ ಕರಾಲಾದಲ್ಲಿ ವಾಸವಿರುವ ಚಂದ್ರ ಪ್ರಕಾಶ್‌ ಪಾಠಕ್​ ಅಕಾ ಖಾಸಗಿ ಇಂಗ್ಲಿಷ್‌ ಸುದ್ದಿವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ್ದು, ನಾನು ತಾಂತ್ರಿಕನಲ್ಲ. ಹನುಮನ ಪರಮ ಭಕ್ತ. ಭಾಟಿಯ ಕುಟುಂಬದ ಬಗ್ಗೆ ನನಗೆ ಏನೂ ತಿಳಿದಿಲ್ಲ ಎಂದು ತಿಳಿಸಿದ್ದಾರೆ.

ಇದಲ್ಲದೆ ಮಂಗಳಮುಖಿ ಗುಡ್ಡಿ ಎಂಬಾಕೆ ಪ್ರತಿಕ್ರಿಯಿಸಿ, ಭಾಟಿಯಾ ಕುಟುಂಬದ ಜತೆ ಹಲವು ವರ್ಷಗಳಿಂದ ಸಂಪರ್ಕ ಹೊಂದಿದ್ದು, ಕೊನೆಯ ಬಾರಿ ಜೂನ್‌ 23ರಂದು ಅವರನ್ನು ಭೇಟಿ ಮಾಡಿದ್ದೆ. ಅದನ್ನು ಹೊರತು ಪಡಿಸಿ ಅವರು ನೆರೆ ಹೊರೆಯವರಿಗೆ ಪ್ರಸಾದ ಹಂಚಲು ನನಗೆ ಹೇಳುತ್ತಿದ್ದರು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)

Leave a Reply

Your email address will not be published. Required fields are marked *

Back To Top