Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಬುರಾರಿ ಆತ್ಮಹತ್ಯೆ ಪ್ರಕರಣ: ಸಾಕು ನಾಯಿ ಟಾಮಿಯನ್ನು ಕಟ್ಟಿ ಹಾಕದಿದ್ದರೆ…!

Wednesday, 04.07.2018, 3:40 PM       No Comments

ನವದೆಹಲಿ: ಬುರಾರಿ ಪ್ರದೇಶದಲ್ಲಿ ಶನಿವಾರ ಮಧ್ಯರಾತ್ರಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ 11 ಮಂದಿ ಕುಟುಂಬಕ್ಕೆ ಸೇರಿದ ಸಾಕುನಾಯಿ ಟಾಮಿ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಪ್ರಾಣಿಹಕ್ಕುಗಳ ಕಾರ್ಯಕರ್ತ ತಿಳಿಸಿದ್ದಾರೆ.

ಭಾಟಿಯಾ ಕುಟುಂಬ ಆತ್ಮಹತ್ಯೆ ಮಾಡಿಕೊಂಡ ನಂತರ ಟಾಮಿಯನ್ನು ಮಾಧ್ಯಮಗಳಲ್ಲಿ ನೋಡಿದ ಸಂಜಯ್​ ಮೋಹಪಾತ್ರ ಟಾಮಿಯನ್ನು ನೋಡಿಕೊಳ್ಳುವುದರ ಕುರಿತು ಪೊಲೀಸರನ್ನು ಸಂಪರ್ಕಿಸಿ ತಮ್ಮ ಕೇರ್​ ಸೆಂಟರ್​ಗೆ ಕರೆದೊಯ್ದಿದ್ದರು.

ಮೊದಲ ಬಾರಿ ಕೇರ್​ ಸೆಂಟರ್​ಗೆ ಕರೆದುಕೊಂಡು ಬಂದಾಗ ಟಾಮಿಗೆ 108 ಡಿಗ್ರಿ ಜ್ವರವಿತ್ತು. ತುಂಬಾ ಆಕ್ರಮಣಕಾರಿಯಾಗಿದ್ದ ಟಾಮಿ ಯಾರೇ ಹತ್ತಿರ ಹೋದರೂ ಕಚ್ಚಲು ಬರುತ್ತಿದ್ದ. ಆದರೆ, ಪ್ರೀತಿ ಮತ್ತು ಕಾಳಜಿ ತೋರಿಸುತ್ತಿದ್ದಂತೇ ಟಾಮಿಯ ನಡವಳಿಕೆಯಲ್ಲಿ ಚೇತರಿಕೆ ಕಂಡಿದೆ ಎಂದು ಮೊಹಪಾತ್ರ ತಿಳಿಸಿದ್ದಾರೆ.

ಹತ್ತಿರದವರನ್ನು ಕಳೆದುಕೊಂಡರೆ ಮನುಷ್ಯರಿಗೆ ಹೇಗೆ ನೋವುಂಟಾಗುತ್ತದೆಯೋ, ಅದೇರೀತಿ ಪ್ರಾಣಿಗಳಿಗೂ ಆಗುತ್ತದೆ. ಆದರೆ, ಅವುಗಳಿಗೆ ಪ್ರೀತಿ ಮತ್ತು ಕಾಳಜಿ ತೋರಿಸಿದರೆ ನಿಧಾನವಾಗಿ ಆ ನೋವಿನಿಂದ ಹೊರಬರಲು ಸಾಧ್ಯ. ಈಗ ಟಾಮಿಯ ಆರೋಗ್ಯದಲ್ಲಿಯೂ ಸುಧಾರಣೆಯಾಗಿದ್ದು, ಊಟ ತಿನ್ನಲು ಆರಂಭಿಸಿದ್ದಾನೆ. ಆದರೆ, ಟಾಮಿಗೆ ಲಿವರ್​ ಸಮಸ್ಯೆ ಇದ್ದು, ಪ್ಲೇಟ್​ಲೆಟ್​ ಸಂಖ್ಯೆಯೂ ಕಡಿಮೆಯಿದೆ. ಆದಷ್ಟು ಬೇಗ ಈ ಸಮಸ್ಯೆಯನ್ನೂ ಗುಣಪಡಿಸಲಾಗುವುದು ಎಂದಿದ್ದಾರೆ.

ಟಾಮಿಯನ್ನು ಕಟ್ಟಿ ಹಾಕದಿದ್ದರೆ…
ಒಂದು ವೇಳೆ ಟಾಮಿಯನ್ನು ಅಂದು ಕಟ್ಟಿಹಾಕದಿದ್ದರೆ ಭಾಟಿಯಾ ಕುಟುಂಬದವರು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಬಿಡುತ್ತಿರಲಿಲ್ಲವೆಂದೆನಿಸುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *

Back To Top