ಬುರಾರಿ ಮೋಕ್ಷದ ಮನೆಯಲ್ಲಿ 12ನೇ ಸಾವು!

Latest News

ಕರ್ನಾಟಕದ 250 ಥಿಯೇಟರ್​ಗಳಲ್ಲಿ ದಬಂಗ್ ರಿಲೀಸ್!

ಡಿಸೆಂಬರ್ 20ಕ್ಕೆ ಸಲ್ಮಾನ್ ಖಾನ್ ನಟನೆಯ ‘ದಬಂಗ್ 3’ ಸಿನಿಮಾ ಬಿಡುಗಡೆ ಆಗುತ್ತಿದೆ. ಇಷ್ಟು ದಿನ ಹಿಂದಿ ಭಾಷೆಯಲ್ಲಷ್ಟೇ ಅಬ್ಬರಿಸುತ್ತಿದ್ದ ಸಲ್ಮಾನ್, ಈ...

ಕಾರು-ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಮದುಮಗ ಸ್ಥಳದಲ್ಲೇ ಸಾವು: ನಾಲ್ವರಿಗೆ ಗಾಯ

ಉತ್ತರಕನ್ನಡ: ಟ್ಯಾಂಕರ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಲ್ಲಿ ಮದುಮಗ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಲ್ಲಾಪುರ-ಹುಬ್ಬಳ್ಳಿ ರಸ್ತೆಯ ಕೆ.ಮಿಲನ್ ಹೊಟೆಲ್ ಬಳಿ ಭಾನುವಾರ ದುರ್ಘಟನೆ ಸಂಭವಿಸಿದೆ. ಅಫ್ರೋಜ್...

ಬಾಳಾಠಾಕ್ರೆಗೆ ಮೊದಲಬಾರಿಗೆ ಶ್ರದ್ಧಾಂಜಲಿ ಅರ್ಪಿಸಿದ ಕಾಂಗ್ರೆಸ್ ಮತ್ತು ಎನ್​ಸಿಪಿ

ಮುಂಬೈ: ಶಿವಸೇನೆ ಸಂಸ್ಥಾಪಕ ಹಾಗೂ ಪ್ರಖರ ಹಿಂದುತ್ವವಾದಿ ದಿವಂಗತ ಬಾಳಾಠಾಕ್ರೆಗೆ ಕಾಂಗ್ರೆಸ್​ ಹಾಗೂ ಎನ್​ಸಿಪಿ ಮೊದಲಬಾರಿಗೆ ಶ್ರದ್ಧಾಂಜಲಿ ಸಲ್ಲಿಸಿವೆ. ಬಾಳಾಠಾಕ್ರೆ ಅವರ 7 ನೇ...

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಸರ್ಕಾರ ರಚನೆ ಪಕ್ಕಾ? ಕುತೂಹಲಕ್ಕೆ ಕಾರಣವಾಯ್ತು ಅಮಿತ್​ ಷಾ ಮಾತು…

ನವದೆಹಲಿ: ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಬಗ್ಗೆ ಯಾವುದೇ ಆತಂಕ ಬೇಡ. ಅಲ್ಲಿ ಬಿಜೆಪಿ ಶಿವಸೇನೆಯೊಂದಿಗೆ ಸೇರಿ ಸರ್ಕಾರ ರಚನೆ ಮಾಡಲಿದೆ ಎಂದು ರಾಷ್ಟ್ರೀಯ ಅಧ್ಯಕ್ಷ ಅಮಿತ್​...

ಚಾಂಪಿಯನ್ ಪಟ್ಟ ಅಲಂಕರಿಸಿದ ಆರು ತಂಡ

ಸಣ್ಣುವಂಡ ಕಿಶೋರ್ ನಾಚಪ್ಪ ಪೊನ್ನಂಪೇಟೆಕೋದಂಡ ಎ.ಪೂವಯ್ಯ ಜ್ಞಾಪಕಾರ್ಥ ಹಾಕಿಕೂರ್ಗ್ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಪ್ರಾಥಮಿಕ, ಪ್ರೌಢಶಾಲಾ ಬಾಲಕ, ಬಾಲಕಿಯರ...

ನವದೆಹಲಿ: ದೆಹಲಿಯ ಬುರಾರಿಯಲ್ಲಿ ಮೋಕ್ಷಕ್ಕಾಗಿ ಸಾಮೂಹಿಕವಾಗಿ ಸಾವಿಗೆ ಶರಣಾದ 11 ಮಂದಿಯ ಮನೆಯಿಂದ ರಕ್ಷಿಸಲ್ಪಟ್ಟಿದ್ದ ಏಕೈಕ ಜೀವ ಭಾನುವಾರ ಸಂಜೆ ಹೃದಯಾಘಾತದಿಂದ ಸಾವಿಗೀಡಾಗಿದೆ.

ಹೌದು, ಬುರಾರಿಯ ಮನೆಯಿಂದ ರಕ್ಷಿಸಲ್ಪಟ್ಟಿದ್ದ ಏಕೈಕ ಜೀವ ಈ ಟಾಮಿ (6) ಎಂಬ ಹೆಸರಿನ ಶ್ವಾನ ಮಾತ್ರ ಆಗಿತ್ತು. 11 ಮಂದಿಯೂ ನೇಣಿಗೆ ಶರಣಾದ ನಂತರ ಮನೆಯ ಪ್ರಾಂಗಣವನ್ನು ಪೊಲೀಸರು ಶೋಧ ನಡೆಸುವಾಗ ಸರಪಳಿಯಿಂದ ಬಿಗಿದ ಸ್ಥಿತಿಯಲ್ಲಿ ಟಾಮಿ ಪತ್ತೆಯಾಗಿತ್ತು. 108 ಡಿಗ್ರಿಯಷ್ಟು ತೀವ್ರ ಜ್ವರ ಮತ್ತು ಹಸಿವಿನಿಂದ ಬಳಲುತಿದ್ದ ಟಾಮಿಗೆ ನೋಯ್ಡಾ ಬಳಿಯ ಪ್ರಾಣಿಗಳ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಟಾಮಿಯ ಆರೋಗ್ಯದಲ್ಲಿ ಸುಧಾರಣೆ ಕಾಣಿಸಿತ್ತು.

ಟಾಮಿಯ ಪಾಲನೆಯ ಜವಾಬ್ದಾರಿಯನ್ನು ಹೌಸ್​ ಆಫ್​ ಸ್ಟ್ರೇ ಅನಿಮಲ್ಸ್​ ಎಂಬ ಪ್ರಾಣಿ ಪಾಲನಾ ಸಂಸ್ಥೆಯ ಮುಖ್ಯಸ್ಥ, ಪ್ರಾಣಿ ಹಕ್ಕುಗಳ ಹೋರಾಟಗಾರ ಸಂಜಯ್​ ಮಹೋಪಾತ್ರ ವಹಿಸಿಕೊಂಡಿದ್ದರು.

“ಟಾಮಿ ಗುಣಮುಖನಾಗಿದ್ದ. ಇಂದು ಬೆಳಗ್ಗೆ ಕೂಡ ಟಾಮಿ ಚಟುವಿಟಕೆಯಿಂದಲೇ ಇದ್ದ. ವಾಕಿಂಗ್​ಗೆ ಕೂಡ ಹೊರಗೆ ಕರೆದೊಯ್ಯಲಾಗಿತ್ತು. ಮರಳಿ ಕರೆತರುವಾಗ ಟಾಮಿ ಕುಸಿದು ಬಿದ್ದ. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಟಾಮಿ ಕೊನೆಯುಸಿರೆಳೆಯಿತು,”ಎಂದು ಮಹೋಪಾತ್ರ ತಿಳಿಸಿದ್ದಾರೆ.

“11 ಮಂದಿಯ ಸಾವಿನ ಘಟನೆ ನಂತರ ಸಿಕ್ಕಿದ್ದ ಟಾಮಿಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು. ಅದರ ಚರ್ಮದ ಅಲರ್ಜಿ ಕೂಡ ವಾಸಿಯಾಗಿತ್ತು. ಟಾಮಿಯನ್ನು ನಮ್ಮ ಕುಟುಂಬದ ಸದಸ್ಯನಂತೆ ನಾವು ಕಾಣುತ್ತಿದ್ದೆವು. ಕುಸಿದು ಬಿದ್ದ ಕೇವಲ 5 ನಿಮಿಷಗಳಲ್ಲೇ ಟಾಮಿ ಕೊನೆಯುಸಿರೆಳೆದ. ನಾವು ಎಷ್ಟೇ ಪ್ರಯತ್ನಿಸಿದರೂ ಅದರ ಜೀವ ಉಳಿಯಲಿಲ್ಲ. ಟಾಮಿ ಅಗಲಿಕೆ ನಮಗೆ ಅತೀವ ದುಃಖ ತರಿಸಿದೆ,” ಎಂದು ಮಹೋಪಾತ್ರ ನೋವಿನಿಂದ ನುಡಿದರು.

ಬುರಾರಿ ಮನೆಯ ಬಳಿ ಅಂದು ಪತ್ತೆಯಾಗಿದ್ದ ಟಾಮಿ ತೀವ್ರ ಆಕ್ರಮಣಕಾರಿಯಾಗಿತ್ತು. ಭಾರಿ ಅರಚಾಟ ಮಾಡುತ್ತಿದ್ದ ಟಾಮಿಯನ್ನು ಸುಧಾರಿಸಿ ವಾಹನದಲ್ಲಿ ಹತ್ತಿಸಿಕೊಳ್ಳುವ ಹೊತ್ತಿಗೆ ಒಂದೂವರೆ ಗಂಟೆಗಳೇ ಬೇಕಾಯಿತು. ಆದರೆ, ನಂತರದಲ್ಲಿ ಟಾಮಿಯಲ್ಲಿ ಅಂಥ ಆಕ್ರಮಣಶೀಲತೆ ಕಂಡಿರಲಿಲ್ಲ ಎಂದೂ ಮಹೋಪಾತ್ರ ತಿಳಿಸಿದ್ದಾರೆ.

ಟಾಮಿ ಸಾವಿಗೀಡಾದ ನಂತರ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದ್ದು, ಸೋಮವಾರ ಬೆಳಗ್ಗೆ ಅದರ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗಿದೆ.

ಟಾಮಿಯ ನೆನಪಿನಲ್ಲಿ ಹೌಸ್​ ಆಫ್​ ಸ್ಟ್ರೇ ಅನಿಮಲ್ಸ್​ ಸಂಸ್ಥೆಯಲ್ಲಿ ಪ್ರಾಣಿಗಳಿಗಾಗಿ ಒಪಿಡಿಯೊಂದನ್ನು ತೆರಯಲು ನಾವು ನಿರ್ಧರಿಸಿದ್ದೇವೆ ಎಂದು ಮಹೋಪಾತ್ರ ತಿಳಿಸಿದ್ದಾರೆ.

- Advertisement -

Stay connected

278,530FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....