ಮಂಗಳೂರು : ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅಡ್ಯಾರ್‌ನ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಬಂಟ್ಸ್ ಪ್ರೀಮಿಯರ್ ಲೀಗ್ ಸೀಸನ್ 2 ಕ್ರಿಕೆಟ್ ಪಂದ್ಯಾಟದಲ್ಲಿ ಎ.ಜೆ.ಗ್ರೂಪ್‌ನ ಪ್ರಶಾಂತ್ ಶೆಟ್ಟಿ ಅವರ ಮಾಲೀಕತ್ವದ ಎ.ಜೆ. ರಾಯಲ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ವಕೀಲ ರವೀಂದ್ರನಾಥ ರೈ, ಸಂತೋಷ್ ಶೆಟ್ಟಿ ಮತ್ತು ವಕೀಲ ಬಿಪಿನ್ ರೈ ಅವರ ಮಾಲೀಕತ್ವದ ರಾಯಲ್ ಸುರಗಿರಿ ಬಂಟ್ಸ್ ತಂಡ ರನ್ನರ್ ಆಪ್ ಸ್ಥಾನ ಪಡೆಯಿತು. ಶರತ್ ಶೆಟ್ಟಿ ಅವರು ಸರಣಿ ಶ್ರೇಷ್ಠ, ಪ್ರದೀಪ ಶೆಟ್ಟಿ ಅತ್ಯುತ್ತಮ ಬ್ಯಾಟ್ಸ್‌ಮನ್ ಆಗಿ, ಪೃಥ್ವಿರಾಜ್ ಶೆಟ್ಟಿ
ಅತ್ಯುತ್ತಮ ಬೌಲರ್ ಹಾಗೂ ರಕ್ಷತ್ ಶೆಟ್ಟಿ ಉದಯೋನ್ಮುಖ ಆಟಗಾರ ವೈಯಕ್ತಿಕ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು , ಮಾಜಿ ಸಂಸದ ನಳಿನ್‌ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯರಾದ ಕಿಶೋರ್‌ಕುಮಾರ್ ಪುತ್ತೂರು ಮತ್ತು ಮಂಜುನಾಥ ಭಂಡಾರಿ ಅವರು ಪಾಲ್ಗೊಂಡು ಸಂಘಟಕರನ್ನು ಅಭಿನಂದಿಸಿದರು. ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ರಾಜಗೋಪಾಲ್ ರೈ , ಬಂಟ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ಸಂಘಟಕರಾದ ಸಚಿನ್‌ರಾಜ್ ರೈ ಮತ್ತು ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
