ಬನ್ನಿ ಗಿಡ ನೆಡುವ ಕಾರ್ಯಕ್ರಮ

ಮಡಿಕೇರಿ: ದಸರಾ ದಶಮಂಟಪ ಸಮಿತಿ ವತಿಯಿಂದ ನಗರದ ಬನ್ನಿ ಮಂಟಪದಲ್ಲಿ ಶನಿವಾರ ಬನ್ನಿ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಳೆದ ಬಾರಿ ವರುಣನ ಅಬ್ಬರಕ್ಕೆ ಬನ್ನಿ ಮರ ನೆಲಕಚ್ಚಿತ್ತು. ಈ ಹಿನ್ನೆಲೆಯಲ್ಲಿ ದಸರಾ ದಶಮಂಟಪ ಸಮಿತಿಯ ಅಧ್ಯಕ್ಷ ಸಿ.ಎಸ್.ರಂಜಿತ್ ಕುಮಾರ್ ನೇತೃತ್ವದಲ್ಲಿ ಬನ್ನಿ ಗಿಡ ನೆಡಲಾಯಿತು. ಇದಕ್ಕೂ ಮುನ್ನ ವಿವಿಧ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ದಸರಾ ಉತ್ಸವ ಸಮೀಪಿಸುತ್ತಿರುವ ಹಿನ್ನೆಲೆ ದಶಮಂಟಪ ಹಾಗೂ ದೇವಾಲಯ ಸಮಿತಿ ತಯಾರಿಯಲ್ಲಿ ತೊಡಗಿಕೊಳ್ಳುತ್ತಿದೆ. ಮಹಾನವಮಿ ಹಬ್ಬದಂದು ಮಂಟಪಕ್ಕೆ ಹೋಗಿ ಅಲ್ಲಿಯ ಬನ್ನಿ ಮರವನ್ನು ಪೂಜಿಸುವುದು ವಾಡಿಕೆ ಇದೆ.

ಬಾರಾದ ಅನುದಾನ: ಕಳೆದ ಬಾರಿ ಪ್ರಕೃತಿ ವಿಕೋಪ ಹಿನ್ನೆಲೆ ದಸರಾ ಉತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು. ಅಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್ ಘೋಷಿಸಿದ್ದ 50 ಲಕ್ಷ ರೂ. ಅನುದಾನ ಇನ್ನೂ ಬಂದಿಲ್ಲ. ಈ ಬಾರಿಯೂ ಜಿಲ್ಲೆಯ ಕೆಲವೆಡೆ ಪ್ರಕೃತಿ ವಿಕೋಪ ಸಂಭವಿಸಿದ್ದು, ದಸರಾ ಉತ್ಸವ ಹೇಗೆ ಆಚರಣೆಯಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ದಶಮಂಟಪಗಳ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹಾಗೂ ದೇವಸ್ಥಾನಗಳ ಅರ್ಚಕರು ಇದ್ದರು.

 

Leave a Reply

Your email address will not be published. Required fields are marked *