ದ. ಆಫ್ರಿಕಾದ ಪ್ರಮುಖ 5 ವಿಕೆಟ್​​ಗಳನ್ನು ಕಬಳಿಸಿದ ಟೀಂ ಇಂಡಿಯಾ

ಸೌಂಥಾಪ್ಟನ್​​: ವೇಗಿ ಜಸ್ಪ್ರೀತ್​​ ಬುಮ್ರಾ ಹಾಗೂ ಸ್ಪಿನ್ನರ್​​​​​ ಯಜುವೇಂದ್ರ ಚಾಹಲ್​​ ಮತ್ತು ಕುಲ್​​ದೀಪ್​​​​​ ಯಾದವ್​​​ ಅವರ ಅದ್ಭುತ ಬೌಲಿಂಗ್​​ ದಾಳಿಯಿಂದ ಐಸಿಸಿ ವಿಶ್ವಕಪ್​​ನ 8ನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 4 ಪ್ರಮುಖ ಬ್ಯಾಟ್ಸ್​ಮನ್​ಗಳ ವಿಕೆಟ್​​ ಕಬಳಿಸಿದ್ದಾರೆ.

ಇಲ್ಲಿನ ದಿ ರೋಸ್ ಬೌಲ್​​​ ಕ್ರೀಡಾಂಗಣದಲ್ಲಿ ಟಾಸ್​​ ಗೆದ್ದು ಬ್ಯಾಟಿಂಗ್​​ ಆಯ್ಕೆ ಮಾಡಿಕೊಂಡ ಆಫ್ರಿಕಾ ಆರಂಭದಲ್ಲಿಯೇ ಟೀಂ ಇಂಡಿಯಾ ಬೌಲಿಂಗ್​​ ದಾಳಿಗೆ ಸಿಲುಕಿ ಆಘಾತಕ್ಕೊಳಗಾಗಿದೆ. ತಂಡ 23 ಓವರ್​ಗಳಲ್ಲಿ 5 ವಿಕೆಟ್​​ ನಷ್ಟಕ್ಕೆ ಕೇವಲ 89 ರನ್​​ ಗಳಿಸಿ ಆಟವಾಡುತ್ತಿದೆ.

ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಹಶೀಮ್​​ ಅಮ್ಲಾ(6), ಕ್ವಿಂಟನ್​​ ಡಿಕಾಕ್​​​ (10) ಭಾರತದ ಅಗ್ರ ಬೌಲರ್​​​ ಬುಮ್ರಾ ಯಾರ್ಕರ್​​​​​​​​​​ ದಾಳಿಗೆ ಸಿಲುಕಿ ವಿಕೆಟ್​​ ಕಳೆದುಕೊಂಡರೆ, ನಾಯಕ ಫಾಫ್​​​ ಡುಪ್ಲಿಸಿಸ್​​​ (38) ಮತ್ತು ರಸ್ಸೆ ವಾನ್​​​ ಡೆರ್​​​​​​​​​​​​​​​ ದುಸಾನ್​​​​​(22) ಚಾಹಲ್​​​ ಸ್ಪಿನ್​​ ಮೋಡಿಗೆ ವಿಕೆಟ್​​ ಒಪ್ಪಿಸಿ ಪೆವಿಲಿಯನ್​​​ ದಾರಿ ಹಿಡಿದರು.

ನಂತರ ಕ್ರೀಸ್​ಗೆ ಬಂದ ಜೆಪಿ ಡುಮಿನಿ(3) ಕುಲ್​​ದೀಪ್​​​​​​​​​​​ ಎಸೆತದಲ್ಲಿ ಎಲ್​​ಬಿಡಬ್ಲ್ಯೂಗೆ ಬಲಿಯಾದರು. ಈ ಮೂಲಕ ದ. ಆಫ್ರಿಕಾ ಪ್ರಮುಖ ಐದು ವಿಕೆಟ್​​​​​​​​​​​ ಗಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದೆ.

ಭಾರತ ಪ್ರಸಕ್ತ ಆವೃತ್ತಿಯ ವಿಶ್ವಕಪ್​​​ನಲ್ಲಿ ಮೊದಲ ಪಂದ್ಯವಾಡುತ್ತಿದ್ದು, ಗೆಲ್ಲುವ ವಿಶ್ವಾಸದಲ್ಲಿದೆ. ಆಫ್ರಿಕನ್ನರು ಈಗಾಗಲೇ ಎರಡು ಪಂದ್ಯಗಳಲ್ಲಿ ಸೋಲನುಭವಿಸಿದೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *