ಶುಂಠಿ ಬೆಳೆಗಾರರಿಗೆ ಬಂಪರ್

ಬೆಂಗಳೂರು: ಶುಂಠಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ರಂಜಾನ್ ಇರುವುದರಿಂದ ಶುಂಠಿಗೆ ಬೇಡಿಕೆ ಹೆಚ್ಚಿದ್ದು, ಬೆಲೆ ಹೆಚ್ಚಳವಾಗಿದೆ.

ಹಾಸನ, ಮಡಿಕೇರಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಹೆಚ್ಚು ಶುಂಠಿ ಬೆಳೆಯಲಾಗುತ್ತಿದೆ. ಆದರೆ, ಅತಿವೃಷ್ಟಿ ಪರಿಣಾಮ ಶೇ. 30 ಮಾತ್ರ ಇಳುವರಿ ಬಂದಿದೆ. ಒಂದು ಚೀಲ ಶುಂಠಿ ಬಿತ್ತನೆಗೆ 20-25 ಚೀಲ ಬರಬೇಕು. ಆದರೆ ಈ ವರ್ಷ 10-12 ಚೀಲ

ಗಳಷ್ಟು ಮಾತ್ರ ಬಂದಿದೆ. ಇದಕ್ಕೆ ಅತಿವೃಷ್ಟಿ ಕಾರಣವಾಗಿದೆ. ಹೆಚ್ಚು ಮಳೆಯಾಗಿದ್ದರಿಂದ ಹೂವಿನಲ್ಲೇ ಶುಂಠಿ ಕೊಳೆತುಹೋಗಿದೆ. ಈಗ ಹೆಚ್ಚು ಬೆಲೆ ಬಂದ ಹಿನ್ನೆಲೆಯಲ್ಲಿ ಶೇ. 80 ಬಿತ್ತನೆಯಾಗಿದ್ದು, ರೈತರು ಮಳೆಯನ್ನು ಅವಲಂಬಿಸಬೇಕಿದೆ. ಉತ್ತಮ ಮಳೆ ಬಂದರೆ ಎಕರೆಗೆ (60 ಕೆ. ಜಿ. ಚೀಲ) 300-400 ಚೀಲಗಳಷ್ಟು ಬರುತ್ತದೆ. ಇಲ್ಲವಾದರೆ 100- 150 ಚೀಲಗಳಷ್ಟು ಬಂದರೆ ಹೆಚ್ಚು ಎನ್ನುತ್ತಾರೆ ಬೇಲೂರು ತಾಲೂಕಿನ ಶುಂಠಿ ಬೆಳೆಗಾರ ಬಿ.ಎಂ. ರಮೇಶ್.

ಅಸ್ಸಾಂ, ಪಂಜಾಬ್​ಗಳಲ್ಲೂ ಈ ವರ್ಷ ಶುಂಠಿ ಇಳುವರಿ ಕಡಿಮೆ ಇದೆ. ಮುಂಬೈ, ದೆಹಲಿ, ಕೋಲ್ಕತ, ಅಹಮದಾಬಾದ್ ಮಾರುಕಟ್ಟೆಗಳಿಗೆ ಕರ್ನಾಟಕದಿಂದ ದಿನಂಪ್ರತಿ 15-20 ಲಾರಿ ರವಾನೆಯಾಗುತ್ತಿದೆ. ಚಿಲ್ಲರೆ ದರ 200 ರೂ.ಗೂ ಹೆಚ್ಚು ಬೆಲೆಗೆ ಮಾರಾಟವಾಗುತ್ತಿದೆ.

ಕೈಸುಟ್ಟುಕೊಂಡ ರೈತ: ಸಣ್ಣ ರೈತರು ಮುಂದಿನ ದಿನಗಳಲ್ಲಿ ಬೆಲೆ ಸಿಗುತ್ತದೋ ಇಲ್ಲವೋ ಎಂಬ ಆತಂಕದಿಂದ 6 ತಿಂಗಳ ಹಿಂದೆ ಹಸಿಶುಂಠಿ 60 ಕೆ.ಜಿ.ಗೆ ಸಗಟು 1,500- 2,200 ರೂ.ಗೆ ಮಾರಾಟ ಮಾಡಿದ್ದರು. ಈಗ ದಾಸ್ತಾನು ಕಡಿಮೆಯಾಗಿದ್ದರಿಂದ ಬೆಲೆ ಏರಿಕೆಯಾಗಿದೆ. 60 ಕೆ.ಜಿ.ಗೆ ಕಳೆದೆರಡು ವಾರದ ಹಿಂದೆ 3,500- 4,500 ರೂ. ಇತ್ತು. ಈಗ 5,500- 6,500 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆಯಲ್ಲಿ 60-70 ರೂ. ಇದ್ದ ಬೆಲೆ ಈಗ 120-140 ರೂ. ಆಗಿದೆ. ಕಡಿಮೆ ಬೆಲೆಗೆ ಮಾರಾಟ ಮಾಡಿಕೊಂಡ ರೈತರು ಈಗ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

ರಂಜಾನ್ ಸೀಜನ್ ಇರುವುದ ರಿಂದ ಹಾಗೂ ಹೊಸ ಶುಂಠಿ ಬರಲು ಕನಿಷ್ಠ 2 ತಿಂಗಳು ಬೇಕಿರುವುದರಿಂದ ಶುಂಠಿಗೆ ಬೇಡಿಕೆ ಹೆಚ್ಚಿದೆ. ಸದ್ಯಕ್ಕೆ ಬೆಲೆ ಇಳಿಕೆಯಾಗುವ ಸಂಭವ ಕಡಿಮೆ.

| ಜಿ. ಮಂಜು, ಬೆಂಗಳೂರು ಎಪಿಎಂಸಿ ಶುಂಠಿ ವ್ಯಾಪಾರಿ

Leave a Reply

Your email address will not be published. Required fields are marked *