ಬೆಂಗಳೂರು: ದೇಶದ ಪ್ರಮುಖ ಖಾದ್ಯ ತೈಲಗಳ ಬ್ರ್ಯಾಂಡ್ ಆಗಿರುವ “ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ಸ್ ಸಂಸ್ಥೆ’ ನಗರದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ “ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್’ನ ಬಂಪರ್ ಡ್ರಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟಿ ಆಶಿಕಾ ರಂಗನಾಥ್, ಓರ್ವ ಅದೃಷ್ಟಶಾಲಿ ವಿಜೇತರಿಗೆ 50 ಗ್ರಾಂ ಚಿನ್ನದ ನಾಣ್ಯ ಮತ್ತು ಇಬ್ಬರಿಗೆ ತಲಾ 10 ಗ್ರಾಂ ಚಿನ್ನದ ನಾಣ್ಯ ನೀಡಿ ಸನ್ಮಾನಿಸಿದರು. ಹಬ್ಬದ ಋತುವಿನಲ್ಲಿ ಗ್ರಾಹಕರೊಂದಿಗೆ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ “ಗೋ ಫಾರ್ ಫ್ರೀಡಂ ಗೋಲ್ಡ್ ಆಫರ್-2024′ ಅಭಿಯಾನ ಪರಿಚಯಿಸಲಾಗಿತ್ತು. ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ಮತ್ತು ಛತ್ತೀಸ್ಗಢ ರಾಜ್ಯಗಳನ್ನು ಒಳಗೊಂಡಿತ್ತು. ಈ ರಾಜ್ಯಗಳಲ್ಲಿ 100 ಗ್ರಾಹಕರು ಪ್ರತಿನಿತ್ಯ 1 ಗ್ರಾಂ ಚಿನ್ನ ಗೆದ್ದು ಬಂಪರ್ ಡ್ರಾದಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದರು.
ಅಲ್ಲದೆ, ಸ್ಪರ್ಧೆಯಲ್ಲಿ ಭಾಗವಹಿಸಲು ಗ್ರಾಹಕರು ಮಾರುಕಟ್ಟೆಗಳಲ್ಲಿ 1 ಲೀಟರ್ 2 ಫ್ರೀಡಂ ರಿಫೈನ್ಡ್ ಸೂರ್ಯಕಾಂತಿ ಎಣ್ಣೆ ಖರೀದಿಸಬೇಕಿತ್ತು. ಯೋಜನೆಗೆ ರಾಜ್ಯಗಳಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಯೋಜನೆ ಭಾಗವಾಗಿ ಐವರು ಅದೃಷ್ಟಶಾಲಿ ವಿಜೇತರು (ಪ್ರತಿ ರಾಜ್ಯದಿಂದ ಒಬ್ಬರು) 50 ಗ್ರಾಂ ಚಿನ್ನದ ನಾಣ್ಯ, 10 ವಿಜೇತರು (ಪ್ರತಿ ರಾಜ್ಯದಿಂದ ಇಬ್ಬರು) 10 ಗ್ರಾಂ ಚಿನ್ನದ ನಾಣ್ಯ ಪಡೆಯಲಿದ್ದಾರೆ. ಫ್ರೀಡಂ ಹೆಲ್ತಿ ಕುಕಿಂಗ್ ಆಯಿಲ್ಸ್ನ ಮಾರ್ಕೆಟಿಂಗ್ನ ಜಿಎಂ ಚೇತನ್ ಪಿಂಪಲ್ಕುಟೆ ಮತ್ತಿತರರಿದ್ದರು.
ವಿಶಿಷ್ಟ ಯೋಜನೆ ಮೂಲಕ ಗುಣಮಟ್ಟ, ಸುರತ ಉತ್ಪನ್ನ ನೀಡುವ ಜತೆಗೆ ಆಕರ್ಷಕ ಕೊಡುಗೆ ಮೂಲಕ ನಮ್ಮ ಗ್ರಾಹಕರನ್ನು ಖುಷಿಪಡಿಸಿದ್ದೇವೆ. ವಿವಿಧ ಹಿನ್ನೆಲೆ ಹೊಂದಿರುವ ಜನರು ಬಹುಮಾನ ಸ್ವೀಕರಿಸಿದ್ದು, ಎಲ್ಲ ಅದೃಷ್ಟಶಾಲಿ ವಿಜೇತರನ್ನು ಅಭಿನಂದಿಸುತ್ತೇವೆ.
ಪಿ.ಚಂದ್ರಶೇಖರ ರೆಡ್ಡಿ, ಜೆಮಿನಿ ಎಡಿಬಲ್ಸ್ ಮತ್ತು ಫ್ಯಾಟ್ಸ್ ಇಂಡಿಯಾ ಲಿ. ಹಿರಿಯ ಉಪಾಧ್ಯಕ್ಷ.