More

    ಬೆಂಗಳೂರು, ವಾರಾಣಸಿಗೂ ಬರುತ್ತೆ ಬುಲೆಟ್​ ರೈಲು : ಆರು ಮಾರ್ಗಗಳಲ್ಲಿ ಸಂಚಾರ

    ನವದೆಹಲಿ: ಭಾರತಕ್ಕೆ 2023ರ ವೇಳೆಗೆ ಬುಲೆಟ್​ ರೈಲು​ ತರಲು ಸಕಲ ಸಿದ್ಧತೆಗಳು ನಡೆಯುತ್ತಿದ್ದು, ವಿಸ್ತೃತ ಪ್ರಾಜೆಕ್ಟ್​ ವರದಿ (ಡಿಪಿಆರ್​) ಅನ್ನು ಸಿದ್ಧ ಮಾಡಲಾಗುತ್ತಿದೆ. ದೇಶದಲ್ಲಿ ಒಟ್ಟು ಆರು ಮಾರ್ಗಗಳಲ್ಲಿ ಬುಲೆಟ್​ ರೈಲು​ ಬಿಡುವ ಚಿಂತನೆ ನಡೆಸಲಾಗಿದ್ದು, ಅದರಲ್ಲಿ ಮೈಸೂರು, ಬೆಂಗಳೂರು ಮತ್ತು ವಾರಾಣಸಿಯ ಹೆಸರೂ ಸಹ ಕೇಳಿಬಂದಿದೆ.

    ಒಟ್ಟು ಆರು ಬುಲೆಟ್​ ರೈಲು​ಗಳು ಭಾರತಕ್ಕೆ ಬರಲಿವೆ. ಡಿಪಿಆರ್​ ಸಿದ್ಧವಾದ ನಂತರ ಅದಕ್ಕೆ ಹಣ ಮಂಜೂರು ಮಾಡುವುದಾಗಿ ಸರ್ಕಾರ ತಿಳಿಸಿದೆ. ಇಲಾಖೆಯ ವತಿಯಿಂದ ಡಿಪಿಆರ್​ ಸಿದ್ಧವಾಗುತ್ತಿದ್ದು, ಹೆಚ್ಚಿನ ಜನ ಸಂಚಾರ ಇರುವ ಆರು ಪ್ರಮುಖ ಮಾರ್ಗಗಳಲ್ಲಿ ರೈಲನ್ನು ಬಿಡುವುದಾಗಿ ತಿಳಿಸಲಾಗಿದೆ. ಈಗಾಗಲೇ ಬುಲೆಟ್​ ರೈಲು ಸಂಚಾರಕ್ಕೆ ನಿಗದಿ ಮಾಡಲಾಗಿರುವ ಮಾರ್ಗಗಳು ಇಂತಿವೆ.

    1) ದೆಹಲಿ – ನೊಯ್ಡಾ – ಆಗ್ರಾ – ಲಖನೌ – ವಾರಾಣಸಿ (865 ಕಿ.ಮೀ)
    2) ದೆಹಲಿ – ಜೈಪುರ – ಉದಯಪುರ – ಅಹಮದಾಬಾದ್​ (886 ಕಿ.ಮೀ)
    3) ಮುಂಬೈ – ನಾಸಿಕ್​ – ನಾಗಪುರ​ (753 ಕಿ.ಮೀ)
    4) ಮುಂಬೈ – ಪುಣೆ – ಹೈದರಾಬಾದ್​ (711 ಕಿ.ಮೀ)
    5) ಚೆನ್ನೈ – ಬೆಂಗಳೂರು – ಮೈಸೂರು (435 ಕಿ.ಮೀ)
    6) ದೆಹಲಿ – ಚಂಡೀಗಢ – ಲುಧಿಯಾನಾ – ಜಲಾಂಧರ್​ – ಅಮೃತ​ಸರ​ ( 459 ಕಿ.ಮೀ)

    ಈ ಎಲ್ಲ ಮಾರ್ಗಗಳಲ್ಲಿ ಸಂಚಾರ ಮಾಡಲಿರುವ ರೈಲುಗಳು ಹೈ-ಸ್ಪೀಡ್​ (ಗಂಟೆಗೆ 300 ಕಿ.ಮೀ) ಅಥವಾ ಸೆಮಿ ಹೈ ಸ್ಪೀಡ್​ (ಗಂಟೆಗೆ 160-250 ಕಿ.ಮೀ) ವೇಗದಲ್ಲಿ ಸಂಚರಿಸಲಿವೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts