ಬುಲೆಟ್​ ಟ್ರೈನ್​ ಕನಸು ನನಸಾಗುವುದಿಲ್ಲ: ರಾಹುಲ್​ ಗಾಂಧಿ

ಅಮೇಥಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ಬುಲೆಟ್​ ಟ್ರೈನ್​ ಯೋಜನೆ ‘ಮ್ಯಾಜಿಕ್​ ಟ್ರೈನ್​’ ಇದ್ದಂತೆ ಇದು ಎಂದಿಗೂ ಕಾರ್ಯಗತವಾಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಸ್ವಂತ ಕ್ಷೇತ್ರ ಅಮೇಥಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಡೋಕ್ಲಾಂ ಗಡಿ ವಿವಾದ ಭುಗಿಲೆದ್ದಿದ್ದ ಸಂದರ್ಭದಲ್ಲೂ ಸಹ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷರೊಂದಿಗೆ ಆರಾಮವಾಗಿ ಉಯ್ಯಾಲೆಯಲ್ಲಿ ಕುಳಿತು ಮಾತನಾಡಿದ್ದರು. ಕೇಂದ್ರ ಸರ್ಕಾರದ ನೋಟ್​ ಬ್ಯಾನ್​ ನಿರ್ಧಾರದಿಂದಾಗಿ ದೇಶಕ್ಕೆ ಯಾವುದೇ ಉಪಯೋಗವಾಗಿಲ್ಲ. ನೋಟ್​ ಬ್ಯಾನ್​ ದೇಶದ ವ್ಯಾಪಾರ ಚಟುವಟಿಕೆಗಳನ್ನು ಹಳಿ ತಪ್ಪಿಸಿದೆ ಎಂದು ರಾಹುಲ್​ ಪ್ರಧಾನಿ ನಿರ್ಧಾರವನ್ನು ಟೀಕಿಸಿದ್ದಾರೆ. (ಏಜೆನ್ಸೀಸ್​)