22.5 C
Bengaluru
Sunday, January 19, 2020

ಬುಲಂದ್​ಶೆಹರ್​ ಇನ್ಸ್​ಪೆಕ್ಟರ್​ ಹತ್ಯೆ ಪ್ರಕರಣದಲ್ಲಿ ಶಂಕೆ ಮೇರೆಗೆ ಯೋಧ ವಶಕ್ಕೆ: ಆತ ಕೊಲೆ ಮಾಡಿಲ್ಲ ಎಂದ ಸೋದರ

Latest News

ಕುಸಿದು ಬಿದ್ದ ಕಾಲುವೆ ಸಂಪರ್ಕ ಸೇತುವೆ ಪರಿಶೀಲನೆ

ಮುದ್ದೇಬಿಹಾಳ: ತಾಲೂಕಿನ ಸರೂರ, ಕವಡಿಮಟ್ಟಿ, ನೆರಬೆಂಚಿ ಗ್ರಾಮದ ಭಾಗದಲ್ಲಿ ಹಾಯ್ದು ಹೋಗಿರುವ ಕಾಲುವೆ ಕಾಮಗಾರಿ ಕಳಪೆಮಟ್ಟದಿಂದ ಕೂಡಿದ್ದು, ಕೂಡಲೇ ದುರಸ್ತಿಗೆ ಅಧಿಕಾರಿಗಳು ಕ್ರಮ...

400 ಲೀಟರ್ ಹಾಲು ಮಣ್ಣು ಪಾಲು

ಬಸರಾಳು: ಚಾಲಕನ ನಿಯಂತ್ರಣ ತಪ್ಪಿ ಹಾಲಿನ ಲಾರಿ ಉರುಳಿಬಿದ್ದ ಪರಿಣಾಮ 300 ರಿಂದ 400 ಲೀಟರ್ ಹಾಲು ಮಣ್ಣುಪಾಲಾಗಿದೆ.ನಾಗಮಂಗಲ, ಬಸರಾಳು ಹೋಬಳಿಯ ವಿವಿಧ...

ಪಲ್ಸ್ ಪೋಲಿಯೋದಲ್ಲಿ ಶೇ.95ರಷ್ಟು ಸಾಧನೆ

ಮಂಡ್ಯ: ಜಿಲ್ಲಾದ್ಯಂತ ಭಾನುವಾರ ಜಿಲ್ಲಾ ಆರೋಗ್ಯ ಇಲಾಖೆಯಿಂದ ಮೊದಲ ದಿನವೇ 1,18663 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಾಗಿದೆ. ಜ.19ರಿಂದ 22ರವರೆಗೆ ಪಲ್ಸ್ ಪೋಲಿಯೋ...

ಬಲೆಯಲ್ಲಿ ಸಿಲುಕಿದ್ದ ಹೆಬ್ಬಾವು ರಕ್ಷಣೆ

ಕೆ.ಎಂ.ದೊಡ್ಡಿ: ಕೆರೆಯಲ್ಲಿ ಮೀನು ಹಿಡಿಯಲು ಹಾಕಿದ್ದ ಬಲೆಯಲ್ಲಿ ಹೆಬ್ಬಾವು ಸಿಲುಕಿ ಹಾಕಿಕೊಂಡಿದ್ದ ಹಿನ್ನೆಲೆಯಲ್ಲಿ ಮದ್ದೂರಿನ ಉರಗ ಸಂರಕ್ಷಕ ಮಾ.ನ. ಪ್ರಸನ್ನಕುಮಾರ್ ಹಾವನ್ನು ರಕ್ಷಿಸಿ...

ವೇಮನ ಒಬ್ಬ ಸಮಾಜ ಸುಧಾರಕ

ವಿಜಯಪುರ : ಜೀವನವೆಂಬ ಸಂತೆಯೊಳಗಿದ್ದುಕೊಂಡೇ ಸಂತನಾಗಿ ಬೆಳೆದ ಮಹಾಯೋಗಿ ವೇಮನ ಅವರು ಒಬ್ಬ ಸಮಾಜ ಸುಧಾರಕ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು. ನಗರದ ಕಂದಗಲ್...

ಬುಲಂದ್​ಶಹರ್​: ಉತ್ತರಪ್ರದೇಶದ ಬುಲಂದ್​ಶೆಹರ್​ನ ಗಲಭೆಯಲ್ಲಿ ನಡೆದಿದ್ದ ಇನ್ಸ್​ಪೆಕ್ಟರ್​ ಸುಬೋಧ್​ ಕುಮಾರ್​ ಸಿಂಗ್​ ಹತ್ಯೆ ಪ್ರಕರಣದಲ್ಲಿ ಯೋಧ ಜಿತೇಂದ್ರ ಮಲೀಕ್​ (ಜಿತು ಫೌಜಿ) ಎಂಬವರನ್ನು ಸೇನೆ ವಶಕ್ಕೆ ಪಡೆದಿದ್ದು, ಅವರನ್ನು ಉತ್ತರ ಪ್ರದೇಶದ ವಿಶೇಷ ತನಿಖಾ ದಳಕ್ಕೆ ಒಪ್ಪಿಸಿದೆ.

ಉತ್ತರ ಪ್ರದೇಶ ಮೂಲದವರದಾದ ಜಿತು ಫೌಜಿ ಸೇನೆಯ ’22 ರಾಷ್ಟ್ರೀಯ ರೈಫಲ್​ ಪಡೆ’ ಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಬುಲಂದ್​ಶೆಹರ್​ನಲ್ಲಿ ನಡೆದಿದ್ದ ಇನ್ಸ್​ಪೆಕ್ಟರ್​ ಮತ್ತು 22 ವರ್ಷದ ವಿದ್ಯಾರ್ಥಿ ಸುಮಿತ್​ ಕುಮಾರ್​ ಹತ್ಯೆಯಲ್ಲಿ ಜಿತು ಫೌಜಿ ಅವರ ಕೈವಾಡವಿರುವ ಬಗ್ಗೆ ಉತ್ತರ ಪ್ರದೇಶದ ಎಸ್​ಐಟಿ ಶಂಕೆ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ರಾಜ್ಯಕ್ಕೆ ಕರೆತರುವ ಉದ್ದೇಶದಿಂದ ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ ತಂಡ ತೆರಳಿ ಅಲ್ಲಿಂದ ರಾಜ್ಯಕ್ಕೆ ಅವರನ್ನು ಕರೆತರಲಾಗಿದೆ.

ಎಸ್​ಐಟಿ ಪ್ರಕಾರ ಗಲಭೆಯಲ್ಲಿ ಹತ್ಯೆಗೀಡಾದ ಇಬ್ಬರಿಗೂ ತಗುಲಿದ್ದ ಗುಂಡು ಒಂದೇ ಪಿಸ್ತೂಲಿನಿಂದ ಚಿಮ್ಮಿದ್ದಾಗಿತ್ತು. ಈ ಪಿಸ್ತೂಲ್​ ಯೋಧ ಜಿತು ಫೌಜಿ ಅವರದ್ದೇ ಎಂಬುದು ಎಸ್​ಐಟಿ ಶಂಕೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆಗಾಗಿ ಯೋಧನನ್ನು ವಶಕ್ಕೆ ಪಡೆಯಲಾಗಿದೆ.

ಇನ್ನೊಂದೆಡೆ, ತನ್ನ ಜಿತು ಫೌಜಿ ಇನ್ಸ್​ಪೆಕ್ಟರ್​ ಹತ್ಯೆ ಮಾಡಿಲ್ಲ ಎಂದು ಸೋದರ ಧರ್ಮೇಂದ್ರ ಮಲೀಕ್​ ಹೇಳಿಕೆ ನೀಡಿದ್ದಾರೆ. “ನನ್ನ ಸೋದರನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇನ್ಸ್​ಪೆಕ್ಟರ್​ ಹತ್ಯೆಯಲ್ಲಿ ನನ್ನ ಸೋದರನ ಪಾತ್ರವಿಲ್ಲ. ಘಟನೆ ನಡೆದಾಗ ಆತ ಅಲ್ಲಿ ಇರಲೇ ಇಲ್ಲ ಎಂಬುದಕ್ಕೆ ನನ್ನ ಬಳಿ ಸಾಕ್ಷಿಗಳಿವೆ. ನಮಗೆ ನೆರವು ನೀಡುವಂತೆ ಮುಖ್ಯಮಂತ್ರಿಗಳಲ್ಲಿ ಕೋರುತ್ತೇನೆ,” ಎಂದು ಹೇಳಿದ್ದಾರೆ.

ಜೀತು ತಾಯಿ ರತನ್ ಕೌರ್ ಬುಲಂದಶಹರ್​ನಲ್ಲಿ ನೆಲೆಸಿದ್ದಾರೆ. ಹಿಂಸಾಚಾರ ಸಂದರ್ಭ ಜೀತು ಸ್ಥಳದಲ್ಲಿದ್ದ. ಬಳಿಕ ಆತನೇ ಮನೆಗೆ ಬಂದು ಇನ್ಮುಂದೆ ತಮಾಷೆ ನೋಡುತ್ತಿರಿ ಎಂದು ಹೇಳಿದ. ಸಂಜೆ ವೇಳೆ ಕೆಲಸದ ನಿಮಿತ್ತ ಕಾರ್ಗಿಲ್​ಗೆ ತೆರಳಿದ’ ಎಂದು ಚಿಕ್ಕಮ್ಮ ಚಂದ್ರಾವತಿ ಹೇಳಿದ್ದಾರೆ. ಆದರೆ, ಹಿಂಸಾಚಾರದ ವಿಡಿಯೋಗಳಲ್ಲಿ ಮಗನನ್ನು ಗುರುತು ಹಿಡಿಯಲಾಗುತ್ತಿಲ್ಲ ಎಂದು ಅವರ ತಾಯಿ ರತನ್​ ಕೌರ್​ ಹೇಳಿದ್ದಾರೆ.
ಗೋಹತ್ಯೆ ವಿರೋಧಿಸಿ ಡಿ. 3ರಂದು ಬುಲಂದ್​ಶೆಹರ್​ನಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ವೇಳೆ ಸ್ಥಳಕ್ಕೆ ಬಂದ ಸುಬೋಧ್ ಕುಮಾರ್ ಸಿಂಗ್ ನೇತೃತ್ವದ ತಂಡವನ್ನು ಪ್ರತಿಭಟನಾಕಾರರು ಥಳಿಸಿದ್ದರು. ಈ ವೇಳೆ ಸಿಂಗ್​ಗೆ ಚೂಪಾದ ಆಯುಧದಿಂದ ತಿವಿದು, ತಲೆಗೆ ಗುಂಡು ಹಾರಿಸಲಾಗಿತ್ತು.

2015ರಲ್ಲಿ ಉತ್ತರ ಪ್ರದೇಶದ ದಾದ್ರಿಯಲ್ಲಿ ವ್ಯಕ್ತಿಯೊಬ್ಬನನ್ನು ಒಂದು ಕೋಮಿನ ಗುಂಪು ಹತ್ಯೆ ಮಾಡಿತ್ತು. ಆತನ ಮನೆಯಲ್ಲಿ ಗೋಮಾಂಸವಿದ್ದಿದ್ದೇ ಹತ್ಯೆಗೆ ಕಾರಣ ಎನ್ನಲಾಗಿತ್ತು. ಈ ಪ್ರಕರಣವನ್ನು ತನಿಖೆ ಮಾಡಿದ್ದೇ ಇನ್ಸ್​ಪೆಕ್ಟರ್​ ಸುಬೋಧ್​ ಹತ್ಯೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿತ್ತು.

ವಿಡಿಯೋ ನ್ಯೂಸ್

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...

VIDEO| ತನ್ನ ಆಹಾರವನ್ನು ಮೀನು ಬಾಯಿಗಿಡುವ ಬಾತುಕೋಳಿ: ವೈರಲ್​ ವಿಡಿಯೋ...

ನವದೆಹಲಿ: ಪ್ರಾಣಿಗಳ ನಡುವಿನ ಅನ್ಯೋನ್ಯತೆಗೆ ಸಂಬಂಧಿಸಿದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡಿದ್ದೇವೆ. ಅದರಲ್ಲೂ ಪರಸ್ಪರ ವೈರುಧ್ಯವುಳ್ಳ ಜೀವಿಗಳೆರಡು ಒಂದಕ್ಕೊಂದು ಪೋಷಿಸುವುದನ್ನು ನೋಡಿದರೆ ಅಚ್ಚರಿಯಾಗದೇ ಇರದು. ಅಂತಹದ್ದೇ ವಿಡಿಯೋವೊಂದು ಇದೀಗ...

VIDEO| ನಾವೆಲ್ಲ ಕಾಳಿಯನ್ನು ಪೂಜಿಸುವವರು, ನಮಗೆ ಮೃತ್ಯು ಬಹಳ ದೊಡ್ಡ...

ಬೆಂಗಳೂರು: ಯುವ ಬ್ರಿಗೇಡ್​ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಹಿಂದು ಮುಖಂಡರ ಹತ್ಯೆಗೆ ಸಂಚು ನಡೆಸಿರುವ ಆಘಾತಕಾರಿ ಘಟನೆ ಬಯಲಾಗಿ, 6 ಮಂದಿಯನ್ನು ಬಂಧಿಸದ ಬೆನ್ನಲ್ಲೇ...