ನೀವೇ ಮುಂದೆ ನಿಂತು ಮನೆ ಕಟ್ಟಿಸಿ

ಸ್ವಂತ ಮನೆ ನಿರ್ಮಾಣ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಆರ್ಥಿಕವಾಗಿ ಕೈಗೊಳ್ಳುವ ಅತಿ ದೊಡ್ಡ ನಿರ್ಧಾರವಾಗಿರಲಿದ್ದು, ಈ ನಿಟ್ಟಿನಲ್ಲಿ ವಿಶೇಷ ಕಾಳಜಿ ವಹಿಸುವುದು ಅನಿವಾರ್ಯವಾಗಿರುತ್ತದೆ.

| ಜಗನ್ ರಮೇಶ್

ಬೆಂಗಳೂರು: ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದಬೇಕೆಂಬ ಕನಸಿರುತ್ತವೆ. ತಮ್ಮ ಕನಸಿನ ಮನೆ ಹೀಗೇ ಇರಬೇಕೆಂಬ ಕಲ್ಪನೆಗಳೂ ಇರುತ್ತವೆ. ಆದರೆ, ಮನೆ ನಿರ್ವಣದ ವೇಳೆ ಸ್ವಲ್ಪ ಎಚ್ಚರ ತಪ್ಪಿದರೂ ಕನಸಿನ ಮನೆಯ ಅಂದವೇ ಹಾಳಾಗಬಹುದು. ಖರೀದಿದಾರರು ನಿರ್ಮಾಣ ಸ್ಥಳಕ್ಕೆ ಆಗಾಗ ಭೇಟಿ ನೀಡದಿದ್ದರೆ ಮನೆಯ ಸ್ವರೂಪವೇ ಬದಲಾಗಿ ಬಿಡುವ ಸಾಧ್ಯತೆ ಇರುತ್ತದೆ. ನೀವು ಹೊಸ ಮನೆ ಖರೀದಿಸುವ ಯೋಚನೆಯಲ್ಲಿದ್ದೀರಾ? ಅಥವಾ ಮನೆ ಖರೀದಿಗೆ ಮುಂಗಡ ಹಣ ಪಾವತಿಸಿದ್ದೀರಾ? ಹಾಗಿದ್ದರೆ ನಿಮ್ಮ ಮನೆ ನಿರ್ವಣವಾಗುತ್ತಿರುವ ಸ್ಥಳಕ್ಕೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುವುದು ಅತ್ಯಗತ್ಯವಾಗಿದೆ. ಹೀಗೆ ಭೇಟಿ ನೀಡುತ್ತಿದ್ದರೆ, ಕಾಮಗಾರಿ ಪ್ರಗತಿ ಪರಿಶೀಲನೆ ಜತೆಗೆ, ಕಟ್ಟಡದ ಮೂಲ ನಕ್ಷೆಯಲ್ಲಿ ಏನಾದರೂ ಬದಲಾವಣೆ ತರಲಾಗಿದೆಯೇ ಎಂಬುದೂ ನಿಮ್ಮ ಗಮನಕ್ಕೆ ಬರುತ್ತದೆ.

ಖುದ್ದು ಭೇಟಿಯ ಲಾಭಗಳೇನು?

ಕಟ್ಟಡ ನಿರ್ಮಾಣ ಸ್ಥಳಗಳಿಗೆ (ಪ್ರಾಜೆಕ್ಟ್ ಸೈಟ್​ಗಳು) ಖರೀದಿದಾರರು ಆಗಾಗ ಭೇಟಿ ನೀಡುವುದರಿಂದ ಕಾಮಗಾರಿ ಪ್ರಗತಿ ಪರಿಶೀಲನೆ ಜತೆಗೆ ಯೋಜನೆಯ ಒಪ್ಪಂದದ ಪ್ರಕಾರವೇ ಡೆವಲಪರ್​ಗಳು ಕಟ್ಟಡ ನಿರ್ವಿುಸುತ್ತಿರುವರೇ ಎಂಬುದು ತಿಳಿದು ಬರಲಿದೆ. ಹೀಗಾಗಿ ಸೈಟ್​ಗಳಿಗೆ ಭೇಟಿ ನೀಡುವುದು ಅತ್ಯಗತ್ಯ ಎಂದು ರಿಯಲ್ ಎಸ್ಟೇಟ್ ತಜ್ಞರು ಸಲಹೆ ನೀಡುತ್ತಾರೆ. ಸೈಟ್​ಗಳಿಗೆ ಭೇಟಿ ನೀಡುವುದರಿಂದ ಕಟ್ಟಡದ ಮಾಸ್ಟರ್ ಪ್ಲ್ಯಾನ್​ನಲ್ಲಿ ಏನಾದರೂ ಬದಲಾವಣೆ ತರಲಾಗಿದೆಯೇ ಎಂಬುದನ್ನು ಪರಿಶೀಲಿಸಬಹುದಾಗಿದೆ. ಮನೆ ಖರೀದಿಸುವವರು ಯೋಜನೆಯ ನೀಲಿನಕ್ಷೆಯನ್ನು ಪರಿಶೀಲಿಸಿ, ಕಟ್ಟಡ ನಿರ್ವಣವು ಯೋಜನೆಯ ಪ್ರಕಾರವೇ ನಡೆಯುತ್ತಿದೆಯೇ ಎಂಬುದರ ಬಗ್ಗೆ ಸ್ವಯಂ ದೃಢೀಕರಿಸಿಕೊಳ್ಳಬಹುದು. ಡೆವಲಪರ್​ಗಳು ನೀಡಿರುವ ಭರವಸೆಗಳನ್ನು ಸಂಪೂರ್ಣವಾಗಿ ಪೂರೈಸಲಾಗಿದೆಯೇ ಎಂಬುದನ್ನೂ

ಸೈಟ್​ಗೆ ಭೇಟಿ ನೀಡಿ ಖಚಿತಪಡಿಸಿಕೊಳ್ಳಬಹುದು. ಮನೆ ಖರೀದಿಸುವವರ ಮನಸ್ಸಿನಲ್ಲಿ ನಿರ್ದಿಷ್ಟ ದಿನದಂದೇ ಮನೆ ಸ್ವಾಧೀನಕ್ಕೆ ಪಡೆಯಬೇಕೆಂಬ ಯೋಚನೆಗಳಿರುತ್ತವೆ. ಆದ್ದರಿಂದ ನಿಯಮಿತ ಭೇಟಿಯಿಂದ ಕಾಮಗಾರಿಯ ವೇಗ ಹಾಗೂ ಪ್ರಗತಿ ಪರಿಶೀಲನೆ ನಡೆಸಲು ಖರೀದಿದಾರರಿಗೆ ಸಹಕಾರಿಯಾಗಲಿದೆ. ಮನೆ ನಿರ್ವಣಕ್ಕೆ ಬಳಸುವ ಪರಿಕರಗಳ ಗುಣಮಟ್ಟವನ್ನು ಖರೀದಿದಾರರು ಭೇಟಿ ನೀಡಿ ಸ್ವತಃ ಪರಿಶೀಲಿಸುವುದರ ಜತೆಗೆ, ಪ್ಲಾ್ಯನ್​ನಲ್ಲಿ ವಿವರಿಸಲಾಗಿರುವ ಎಲ್ಲ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಗಮನ ಹರಿಸಬಹುದು.

ಮೂಲ ನಕ್ಷೆಯೇ ಬದಲಾಗುವ ಸಾಧ್ಯತೆ

ನೋಯ್ಡಾದಲ್ಲಿ 2012ರಲ್ಲಿ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್ ಮೆಂಟ್ ಒಂದರಲ್ಲಿ ಫ್ಲ್ಯಾಟ್ ಖರೀದಿಸಲು ನಿರ್ಧರಿಸಿದ್ದ ಅಂಕಿತ್ ಶರ್ವ, 10ನೇ ಮಹಡಿಯಲ್ಲಿ ಪೂರ್ವ ಮುಖದ ಮನೆಗಾಗಿ ಮುಂಗಡ ಹಣ ಪಾವತಿಸಿದ್ದರು. ಮನೆಯಿಂದಲೇ ಸೂರ್ಯೋದಯವನ್ನು ಕಣ್ತುಂಬಿಕೊಳ್ಳಲು ಉತ್ಸುಕರಾಗಿದ್ದ ಅವರಿಗೆ ನಿರಾಸೆ ಕಾದಿತ್ತು. 2014ರಲ್ಲಿ ಕಟ್ಟಡ ನಿರ್ಮಾಣ ಸ್ಥಳಕ್ಕೆ ತೆರಳಿದ್ದ ಅವರಿಗೆ ಕಟ್ಟಡದ ಮೂಲನಕ್ಷೆಯಲ್ಲಿ ಬದಲಾವಣೆ ತಂದಿರುವುದು ಗಮನಕ್ಕೆ ಬಂದಿತ್ತು. ಉದ್ಯಾನ ನಿರ್ವಣವಾಗಬೇಕಿದ್ದ ಸ್ಥಳದಲ್ಲಿ ವಾಣಿಜ್ಯ ಸಂಕೀರ್ಣವೊಂದು ತಲೆ ಎತ್ತುತ್ತಿತ್ತು. ಅಂಕಿತ್ ಖರೀದಿಸಿದ್ದ ಫ್ಲ್ಯಾಟ್​ನ ಬಾಲ್ಕನಿಗೆ ಸಂಪೂರ್ಣವಾಗಿ ಅಡ್ಡವಾಗಿ ನಿರ್ವಣವಾಗುತ್ತಿದ್ದ ಕಟ್ಟಡ ಸೂರ್ಯೋದಯ ನೋಡುವ ಅವರ ಆಸೆಗೆ ತಣ್ಣೀರೆರಚಿತ್ತು. ಇದು ಕೇವಲ ಅಂಕಿತ್ ಒಬ್ಬರ ಸಮಸ್ಯೆಯಲ್ಲ. 3ನೇ ವ್ಯಕ್ತಿಗೆ ಗುತ್ತಿಗೆ ನೀಡಿ ಮನೆ ಕಟ್ಟಿಸುವವರು, ಡೆವಲಪರ್​ಗಳು ನಿರ್ವಿುಸುವ ಫ್ಲ್ಯಾಟ್ ಖರೀದಿಸುವವರು ಎದುರಿಸುವ ಸಮಸ್ಯೆಯಾಗಿದೆ.

ಅಂತರ್ಜಾಲದಲ್ಲಿ ಪೂರಕ ಮಾಹಿತಿ

ಮುಂದುವರಿದ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುತ್ತಿರುವ ರಿಯಲ್ ಎಸ್ಟೇಟ್ ಉದ್ಯಮಗಳು, ಗ್ರಾಹಕರಿಗೆ ತಮ್ಮ ವೆಬ್​ಸೈಟ್ ಮೂಲಕವೇ ಹೆಚ್ಚಿನ ಮಾಹಿತಿ ಒದಗಿಸುತ್ತಿವೆ. ಖರೀದಿದಾರರು ಈ ವೆಬ್​ಸೈಟ್​ಗಳಿಗೆ ಭೇಟಿ ನೀಡಿ, ತಾವು ಖರೀದಿಸುವ ಫ್ಲ್ಯಾಟ್ ಅಥವಾ ಮನೆಗಳ ಫೋಟೋ ಹಾಗೂ ವಿಡಿಯೋಗಳ ಮೂಲಕವೇ ಹೆಚ್ಚಿನ ಮಾಹಿತಿ ಕಲೆ ಹಾಕಬಹುದಾಗಿದೆ. ಕೆಲವೊಂದು ವೆಬ್​ಸೈಟ್​ಗಳಲ್ಲಿ ತಪು್ಪ ಮಾಹಿತಿ ನೀಡಿ ಗ್ರಾಹಕರನ್ನು ವಂಚಿಸುವ ಸಾಧ್ಯತೆಗಳೂ ಇವೆ. ಹೀಗಾಗಿ ಖರೀದಿದಾರರು ಮನೆ ನಿರ್ವಣವಾಗುತ್ತಿರುವ ಸ್ಥಳಕ್ಕೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುವುದು ಸೂಕ್ತವೆಂದು ಪ್ರಾಪರ್ಟಿ ತಜ್ಞರು ಸಲಹೆ ನೀಡುತ್ತಾರೆ.