ಹಿರೇಕೆರೂರ: ಮಹಿಳೆ ಸೃಷ್ಟಿಯ ಮೂಲ. ಅವಳನ್ನು ಗೌರವಯುತವಾಗಿ ನಡೆಸಿಕೊಂಡು, ಸಿಗಬೇಕಾದ ಹಕ್ಕುಗಳನ್ನು ನೀಡಬೇಕು. ಪುರುಷ ಮತ್ತು ಮಹಿಳೆಯನ್ನು ಸಮಾನವಾಗಿ ಕಾಣುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದು ಜೆಎಂಎಫ್ಸಿ ಹಿರಿಯ ದಿವಾಣಿ ನ್ಯಾಯಾಧೀಶೆ ಅನಿತಾ ಓ.ಎ. ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ಅಭಿಯೋಜನೆ ಇಲಾಖೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪುರುಷ ಮತ್ತು ಮಹಿಳೆ ಸಮಾನರಾಗಿದ್ದಾಗ ಮಾತ್ರ ಉತ್ತಮ ಸಮಾಜ ಎಂದು ಕರೆಯಲು ಸಾಧ್ಯ. ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ಮಾಡಬೇಕು. ಅನೇಕ ಸಮಾಜ ಸುಧಾರಕರ ಹೋರಾಟದ ಪ್ರತಿಫಲವಾಗಿ ಇಂದು ಸಮಾಜದಲ್ಲಿ ನಾವು ಈ ಮಟ್ಟದಲ್ಲಿ ಬೆಳವಣಿಗೆ ಕಂಡಿದ್ದೇವೆ. ಅವರ ಹೋರಾಟವನ್ನು ನಾವು ಸ್ಮರಿಸಬೇಕು ಎಂದರು.
ದಿವಾಣಿ ನ್ಯಾಯಾಧೀಶೆ ನಾಗರತ್ನಮ್ಮ, ಹೆಚ್ಚುವರಿ ದಿವಾಣಿ ನ್ಯಾಯಾಧೀಶೆ ಸವಿತಾ ಮುಕ್ಕಲ್ ಮಾತನಾಡಿದರು. ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗೀತಾ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಕೆ.ಬಿ. ಬಾಳಿಕಾಯಿ, ಕಾರ್ಯದರ್ಶಿ ಎಸ್.ಎಚ್. ಪಾಟೀಲ, ಉಪಾಧ್ಯಕ್ಷೆ ಹೇಮಾ ಬೆಳ್ಳೂರ, ಅಬಕಾರಿ ನಿರೀಕ್ಷಕಿ ಸುಧಾ ಎಚ್.ಆರ್., ಉಪಖಜಾನೆ ಅಧಿಕಾರಿ ಎಸ್.ಎಂ. ಕರಿಂಖಾನ್, ಸಹಾಯಕ ಸರ್ಕಾರಿ ಅಭಿಯೋಜಕರಾದ ರಂಗಪ್ಪ ಬಿ.ಎಚ್., ಕೆಂಚಪ್ಪ ಬಿದರಿ, ನ್ಯಾಯವಾದಿಗಳಾದ ಬಿ.ಎಂ.ಹೊಳೆಯಪ್ಪನವರ, ಎಸ್.ಬಿ. ತಿಪ್ಪಣ್ಣನವರ, ಎಸ್.ವಿ. ತೊಗರ್ಸಿ, ಎಸ್.ಎಸ್. ಹುಲ್ಲತ್ತಿ, ಎಚ್.ಎಸ್. ಕೋಣನವರ, ಬಿ.ಜಿ. ಪಾಟೀಲ, ದೀಪಕ ಜವಳಿ, ರೇಷ್ಮಾ ಹಳ್ಳಪ್ಪನವರ, ರೋಜಾ ಬೂಸೇರೆ, ಜ್ಯೋತಿ ನೇಕಾರ, ಸ್ನೇಹಾ, ತನುಶ್ರೀ, ಸೇರಿದಂತೆ ವಕೀಲರು, ಅಂಗನವಾಡಿ ಮೇಲ್ವಿಚಾರಕಿಯರು, ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ನ್ಯಾಯಾಲಯದ ಸಿಬ್ಬಂದಿ ಇದ್ದರು.