ದೇವದುರ್ಗ: ನಾಗರ ಪಂಚಮಿ ಹಿನ್ನೆಲೆಯಲ್ಲಿ ತಾಲೂಕಾದ್ಯಂತ ಮಹಿಳೆಯರು ಭಕ್ತಿಯಿಂದ ನಾಗರಮೂರ್ತಿಗೆ ಶುಕ್ರವಾರ ಹಾಲು ಎರೆದರು.
ಪಟ್ಟಣದ ಶಂಭುಲಿಂಗೇಶ್ವರ, ಸಿದ್ದರಾಮೇಶ್ವರ, ಅಂಬಾ ಭವಾನಿ ದೇವಸ್ಥಾನ, ಗಬ್ಬೂರಿನ ಬೂದಿಬಸವೇಶ್ವರ ದೇವಸ್ಥಾನ, ಜಾಲಹಳ್ಳಿಯ ಜಯಶಾಂತ ಲಿಂಗೇಶ್ವರ ದೇವಸ್ಥಾನ, ಲಕ್ಷ್ಮೀ ರಂಗನಾಥ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಹಾಲು ಎರೆದು, ಎಳ್ಳು ಉಂಡೆ, ಶೇಂಗಾ ಉಂಡೆ, ರವೆ ಉಂಡೆ, ಕಡಲೆ ಉಂಡೆ, ಕರಿಗಡುಬು, ಕರ್ಜಿಕಾಯಿ, ಜೋಳದ ಅರಳಿನ ನೈವೇದ್ಯ ಅರ್ಪಿಸಿದರು.
ಗಬ್ಬೂರಿನ ಬೂದಿಬಸವೇಶ್ವರ ದೇವಸ್ಥಾನದಲ್ಲಿ ಪಂಚಮಿ ನಿಮಿತ್ತ ಬೆಳಗ್ಗೆ ಕರ್ತೃ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅರ್ಚಕರಾದ ವೃಷಭೇಂದ್ರಯ್ಯ ಸಾಲಿಮಠ, ಬೂದಯ್ಯ ಸ್ವಾಮಿ ಸಾಲಿಮಠ, ಚನ್ನಬಸಯ್ಯ ಸ್ವಾಮಿ, ಪಲ್ಲಕ್ಕಿ ಸಿದ್ದಪ್ಪ ಸಾಹುಕಾರ, ಅಮರೇಗೌಡ ಹೊನ್ನಟ್ಟಿಗಿ, ಅಮರೇಶ್ ಸ್ವಾಮಿ ಖಾನಾಪುರ, ಗೀತಾ, ನಿರ್ಮಲಾ, ಕವಿತಾ, ಸಾನ್ವಿ ಇದ್ದರು.