More

    ಬಜೆಟ್​ ವಿಶೇಷ: ಆರ್ಥಿಕತೆಗೆ ಸಿಗುವುದೇ ತುರ್ತು ಆಕ್ಸಿಜನ್?

    ನವದೆಹಲಿ: ಆರ್ಥಿಕ ಹಿಂಜರಿತ, ಜಿಡಿಪಿ ಕುಸಿತ, ತೆರಿಗೆ ಸಂಗ್ರಹ ಹಾಗೂ ವಿತ್ತೀಯ ಕೊರತೆ, ಹಣದುಬ್ಬರ ಏರಿಕೆ, ಉದ್ಯೋಗ ಸೃಷ್ಟಿಯ ಅನಿವಾರ್ಯತೆಯ ಸರಣಿ ಸವಾಲುಗಳ ನಡುವೆಯೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಸಂಸತ್​ನಲ್ಲಿ ಎರಡನೇ ಬಜೆಟ್ ಮಂಡಿಸಲಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ದಶಕದ ಅತ್ಯಂತ ಕನಿಷ್ಠದತ್ತ ಜಿಡಿಪಿ ಹೆಜ್ಜೆ ಇಟ್ಟಿರುವುದು ಕೇಂದ್ರ ಸರ್ಕಾರದ ಮುಂದಿರುವ ಗಂಭೀರ ಸವಾಲನ್ನು ನೆನಪಿಸಿದೆ. ಮತ್ತೊಂದೆಡೆ ದೇಶದ ಆರ್ಥಿಕತೆಯ ಭವಿಷ್ಯದ ದಿಕ್ಸೂಚಿ ಎಂದೇ ವಿಶ್ಲೇಷಿಸಲ್ಪಡುವ ಆರ್ಥಿಕ ಸಮೀಕ್ಷಾ ವರದಿ ಶುಕ್ರವಾರ ಸಂಸತ್​ನಲ್ಲಿ ಮಂಡನೆಯಾಗಲಿದೆ. ಇದು ಬಲಾಢ್ಯ ಭಾರತ ಕಟ್ಟುವ ಆಶಯಕ್ಕೆ ಎಷ್ಟರ ಮಟ್ಟಿಗೆ ನೆರವಾಗಲಿದೆ ಎಂಬ ಕುತೂಹಲ ಗರಿಗೆದರಿದೆ.

    ಬಜೆಟ್ ಸವಾಲು
    1. ಹಾಲಿ ಆರ್ಥಿಕ ವರ್ಷ 2 ಲಕ್ಷ ಕೋಟಿ ರೂ. ಆದಾಯ ಕೊರತೆ ಆತಂಕ
    2. ಶೇ.4.5ಕ್ಕೆ ಕುಸಿತವಾಗಿರುವ ಜಿಡಿಪಿಯನ್ನು ತುರ್ತಾಗಿ ಮೇಲಕ್ಕೆತ್ತುವುದು
    3. ವರಮಾನ ಕೊರತೆ, ಉದ್ಯೋಗ ಸಮಸ್ಯೆ ನಿವಾರಿಸುವುದು
    4. ಶೇ.1ಕ್ಕೆ ಇಳಿಕೆಯಾಗಿರುವ ಹೂಡಿಕೆ ಬೆಳವಣಿಗೆಯನ್ನು ಸುಧಾರಿಸುವುದು
    5. ಚಿಲ್ಲರೆ ಹಣದುಬ್ಬರವನ್ನು ಶೇ.7.35ರಿಂದ ಇಳಿಸುವುದು
    6. ಅಂದಾಜು ಪ್ರಕಾರ 2 ಲಕ್ಷ ಕೋಟಿ ರೂ. ಕಡಿಮೆ ತೆರಿಗೆ ಸಂಗ್ರಹ ಸಾಧ್ಯತೆ
    7. ವಿತ್ತೀಯ ಕೊರತೆ
    8. ಶೇ.3.8ಕ್ಕೆ ಏರುವ ಆತಂಕ
    9. ಕೈಗಾರಿಕೆಗಳಿಗೆ ಸಾಲ ಸೌಲಭ್ಯ ವಿಸ್ತರಿಸಿ ಉದ್ಯೋಗ ಸೃಷ್ಟಿಗೆ ಒತ್ತು ನೀಡುವುದು
    ನಿರೀಕ್ಷೆಗಳ ಆಶಾಭಾವ

    ನವದೆಹಲಿ: 2020-21ರ ಬಜೆಟ್​ಗೆ ಪೂರ್ವಭಾವಿಯಾಗಿ ಆರ್ಥಿಕ ಸಮೀಕ್ಷೆ ಸಂಸತ್​ನ ಉಭಯ ಸದನಗಳಲ್ಲಿ ಶುಕ್ರವಾರ ಮಂಡನೆಯಾಗಲಿದೆ. ಇದು ಸರ್ಕಾರದ ನೀತಿ ಕುರಿತ ಮಹತ್ವದ ದಾಖಲಾತಿಯಾಗಿದೆ. ದೇಶದ ಆರ್ಥಿಕ ಸ್ಥಿತಿಗತಿ, ಸಂಪನ್ಮೂಲ ಕ್ರೋಡೀಕರಣ, ಮಂಜೂರಾತಿ, ಬಳಕೆಯ ವಿಶ್ಲೇಷಣಾತ್ಮಕ ನೋಟ ಇದರಲ್ಲಿ ಇರುತ್ತದೆ. ಇದನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಲಿದ್ದಾರೆ.

    ಕೃಷಿ, ಕೈಗಾರಿಕಾ ವಲಯದ ಉತ್ಪಾದನೆ, ಮೂಲ ಸೌಕರ್ಯ, ಉದ್ಯೋಗ, ಹಣಕಾಸು ಪೂರೈಕೆ, ಬೆಲೆ, ಆಮದು, ರಫ್ತು, ವಿದೇಶಿ ವಿನಿಮಯ ಮೀಸಲು ಮತ್ತು ಆರ್ಥಿಕತೆ ಸಂಬಂಧಿಸಿದ ವಿಷಯಗಳ ವಿಶ್ಲೇಷಣೆಯನ್ನು ಸಮೀಕ್ಷೆ ಒಳಗೊಂಡಿರುತ್ತದೆ.

    ಸಿದ್ಧತೆ ಹೇಗೆ?: ಹಾಲಿ ಸಿಇಎ ಕೃಷ್ಣಮೂರ್ತಿ ವಿ. ಸುಬ್ರಮಣಿಯನ್ ನೇತೃತ್ವದಲ್ಲಿ ಆರ್ಥಿಕ ಸಮೀಕ್ಷೆ ಸಿದ್ಧಗೊಂಡಿದೆ. ಇದರಲ್ಲಿ ಸೂಚಿಸಲಾದ ಸಲಹೆ, ಶಿಫಾರಸುಗಳನ್ನು ಸರ್ಕಾರ ಪಾಲಿಸಲೇಬೇಕೆಂಬ ಕಟ್ಟಳೆ ಏನೂ ಇಲ್ಲ. ಆದರೆ, ಇದು ನೀತಿರೂಪಕರಿಗೆ, ಆರ್ಥಿಕ ತಜ್ಞರಿಗೆ, ವಿಶ್ಲೇಷಕರಿಗೆ, ಉದ್ಯಮಿಗಳಿಗೆ, ಸರ್ಕಾರಿ ಸಂಸ್ಥೆಗಳಿಗೆ, ಆರ್ಥಿಕ ವಿಷಯದ ಸಂಶೋಧಕರಿಗೆ ಬಹುಮುಖ್ಯ ಆಕರ.

    ಪ್ರಮುಖ ನಿರೀಕ್ಷೆಗಳು
    1. 5 ಲಕ್ಷ ರೂ.ವರೆಗಿನ ಆದಾಯ ತೆರಿಗೆ ಮುಕ್ತ ಅಥವಾ 7 ಲಕ್ಷ ರೂ.ವರೆಗಿನ ಆದಾಯಕ್ಕೆ ಶೇ.5 ತೆರಿಗೆ ನಿಗದಿ
    2. ಬೆಳೆಗಳಿಗೆ ಯೋಗ್ಯ ಬೆಲೆ, ಕೃಷಿ ನೀರಾ ವರಿಗೆ ಆದ್ಯತೆ, ರಿಯಲ್ ಎಸ್ಟೇಟ್, ರೈತರ ಆದಾಯ ದುಪ್ಪಟ್ಟಿಗೆ ಕ್ರಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts