Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬಜೆಟ್​ನಲ್ಲಿ ಹಿಂದುಗಳಿಗೆ ಶೂನ್ಯ

Monday, 19.02.2018, 3:03 AM       No Comments

ಧಾರವಾಡ: ಶಾಸಕ, ಸಂಸದರ ನಿಧಿಯನ್ನು ದೇವಸ್ಥಾನಗಳಿಗೆ ದಾನವಾಗಿ ನೀಡಲು ಬರುವುದಿಲ್ಲ ಎಂಬ ನಿಯಮ ಹಿಂದೆಯೂ ಇತ್ತು, ಈಗಲೂ ಇದೆ. ಇತ್ತೀಚೆಗೆ ರಾಜ್ಯ ಸರ್ಕಾರ ಮಂಡಿಸಿದ ಆಯವ್ಯಯ ಪತ್ರದಲ್ಲಿ ಹಿಂದು ಧರ್ಮಕ್ಕೆ ಕೊಡುಗೆ ಸೊನ್ನೆ. ಇದು ಅಸಮಾನತೆಗೆ ಕಾರಣವಾಗಿ ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇತರ ಧರ್ಮಗಳಂತೆ ಚಟುವಟಿಕೆಗಳನ್ನು ಮಾಡಲು ಸರ್ಕಾರ ಹಿಂದು ಧರ್ಮಕ್ಕೂ ಪ್ರೋತ್ಸಾಹ ನೀಡಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅಭಿಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ರಾಮಕೃಷ್ಣ ವಿವೇಕಾನಂದ ಆಶ್ರಮ ವತಿಯಿಂದ ಶ್ರೀ ರಾಮಕೃಷ್ಣರ 183ನೇ ಜಯಂತಿ ಹಾಗೂ ರಾಮಕೃಷ್ಣ ಮಂದಿರದ 13ನೇ ವಾರ್ಷಿಕೋತ್ಸವ ನಿಮಿತ್ತ ಭಾನುವಾರ ಏರ್ಪಡಿಸಿದ್ದ ಭಕ್ತಿ ಸಮ್ಮೇಳನದ ಉದ್ಘಾಟನೆ ಹಾಗೂ ಜೀವಂತ ದುರ್ಗಾಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಮಠ- ಮಾನ್ಯಗಳನ್ನು ರಾಷ್ಟ್ರೀಕರಣಗೊಳಿಸಲು ಹೊರಟಿರುವುದು ದುರ್ದೈವದ ಸಂಗತಿ. ಸಮಾಜ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಭಾರತೀಯ ಸಂಪ್ರದಾಯವನ್ನು ಮೊದಲು ನಮ್ಮ ನಮ್ಮ ಮನೆಗಳಲ್ಲಿ ಅಳವಡಿಸಿಕೊಂಡು ನಂತರ ಉಳಿದವರಿಗೂ ತಿಳಿಹೇಳಬೇಕು. ಈ ನಿಟ್ಟಿನಲ್ಲಿ ರಾಮಕೃಷ್ಣ ಆಶ್ರಮಗಳೊಂದಿಗೆ ಸಂಪರ್ಕ ಹೊಂದಿ ನಮ್ಮ ಜೀವನ ಮಟ್ಟವನ್ನೂ ಸುಧಾರಿಸಿಕೊಳ್ಳಬೇಕು ಎಂದರು.

ರಾಮಕೃಷ್ಣ ಆಶ್ರಮದ ಸಂದೇಶ ಪಟ್ಟಣಗಳಿಗೆ ಸೀಮಿತವಾಗದಂತೆ ಹಳ್ಳಿಗಳ ತಾಯಂದಿರಿಗೆ ದುರ್ಗಾಪೂಜೆ ನೆರವೇರಿಸುತ್ತಿರುವುದು ಶ್ಲಾಘನೀಯ ಕಾರ್ಯ. ಇಂದು ಲ್ಯಾಪ್​ಟಾಪ್, ಮೊಬೈಲ್​ಗಳಿಂದ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆ. ದೊಡ್ಡ ಕುಟುಂಬಗಳು ಸಂಕೀರ್ಣವಾಗಿ, ತಂದೆ- ತಾಯಿ, ಗುರುಗಳು ಹೇಳುವುದನ್ನು ಮಕ್ಕಳು ಸ್ವೀಕರಿಸುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ, ಬಾಬಾ ರಾಮದೇವ್ ಅವರಂಥವರು ಸೋಷಿಯಲ್ ಮೀಡಿಯಾ ಮೂಲಕ ಹೈಟೆಕ್ ಸಂದೇಶ ನೀಡುತ್ತಿದ್ದಾರೆ. ಅದೇ ರೀತಿ ರಾಮಕೃಷ್ಣ ಆಶ್ರಮಗಳ ಚಟುವಟಿಕೆಗಳು ಹೈಟೆಕ್ ಆಗಿ ಇಂದಿನ ಮಕ್ಕಳನ್ನು ತಲುಪುವಂಥ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ ಮಹಾರಾಜ್ ಆಶೀರ್ವಚನ ನೀಡಿ, ರಾಮಕೃಷ್ಣರು ಭಗವಂತನ ಸಾಕ್ಷಾತ್ಕಾರವೇ ಜೀವನದ ಗುರಿ ಎಂದು ಬೋಧಿಸಿದ್ದಾರೆ. ವಿವೇಕಾನಂದರು ಪ್ರಸ್ತುತ ಸಮಾಜಕ್ಕೆ ಅಗತ್ಯವಾದ ‘ಆತ್ಮನೋ ಮೋಕ್ಷಾರ್ಥಂ’ ಎಂಬ ಮಂತ್ರ ಕೊಟ್ಟಿದ್ದಾರೆ. ಪ್ರತಿಯೊಬ್ಬರಲ್ಲೂ ಭಗವಂತನಿದ್ದು, ಸೇವಾರೂಪದಲ್ಲಿ ಭಗವಂತನ ಪೂಜೆ ಮಾಡಬೇಕು. ಮಾಡುವ ಕಾಯಕ ಭಗವಂತನ ಸೇವೆ ಎಂದುಕೊಳ್ಳಬೇಕು ಎಂದರು.

ಡಾ. ಸೌಭಾಗ್ಯಾ ಕುಲಕರ್ಣಿ ವೇದಿಕೆಯಲ್ಲಿದ್ದರು. ಧಾರವಾಡ ತಾಲೂಕಿನ ಹುಣಸಿಕುಮರಿ, ಕುರುಬಗಟ್ಟಿ, ಜೋಡಳ್ಳಿ, ಧುಮ್ಮವಾಡ ಗ್ರಾಮಗಳ 201 ಮಹಿಳೆಯರ ಪಾದಪೂಜೆ ನೆರವೇರಿಸಿ, ಉಡಿ ತುಂಬಲಾಯಿತು.

ಮಕ್ಕಳಲ್ಲಿ ಸಂಪ್ರದಾಯ ಬೆಳೆಸಿ

ಗಂಡ- ಹೆಂಡತಿ, ಅಣ್ಣ- ತಮ್ಮಂದಿರ ಜಗಳ ಸಾಮಾನ್ಯ. ಆದರೆ ಇಂದು ಮಕ್ಕಳು ತಂದೆ- ತಾಯಿಯನ್ನು ಹೊಡೆಯುವ ಹಂತಕ್ಕೆ ಹೋದ ಘಟನೆಗಳನ್ನು ಕೇಳುತ್ತಿದ್ದೇವೆ. ಇಂಥ ಬೆಳವಣಿಗೆ ಸಮಾಜಕ್ಕೆ ಘಾತುಕ. ತಂದೆ- ತಾಯಿ, ಗುರು ಹಿರಿಯರನ್ನು ನಮಸ್ಕರಿಸುವ, ಗೌರವಿಸುವ ಸಂಪ್ರದಾಯವನ್ನು ಮಕ್ಕಳಲ್ಲಿ ಬೆಳೆಸಬೇಕು ಎಂದ ವಿಜಯ ಸಂಕೇಶ್ವರ, ಜೈನ, ಸಿಖ್, ಕ್ರಿಶ್ಚಿಯನ್, ಮುಸ್ಲಿಂ ಧರ್ಮಗಳು ತಂತಮ್ಮ ಸಂಪ್ರದಾಯಗಳನ್ನು ಚಾಚೂ ತಪ್ಪದೇ ಪಾಲಿಸುತ್ತಿವೆ ಎಂದರು.

ಸಂಕೇಶ್ವರರ ಸಮಯ ಪಾಲನೆ

ಸ್ವಾಮಿ ವಿಜಯಾನಂದ ಸರಸ್ವತಿ ಮಾತನಾಡಿ, ಆಶ್ರಮ ನಿರ್ವಣಕ್ಕೆ ಡಾ.ವಿಜಯ ಸಂಕೇಶ್ವರರು ಸ್ವಂತ ಹಣ ನೀಡಿದ್ದನ್ನು ಸ್ಮರಿಸಿದರು. ಅವರು ಸಮಯದ ಮಹತ್ವ, ಆತ್ಮವಿಶ್ವಾಸ, ಪರಿಶ್ರಮದಿಂದ ದೇಶಾದ್ಯಂತ ಸಾರಿಗೆ ಉದ್ದಿಮೆಯನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು. ಜನತೆಯಲ್ಲಿ ಇಂದು ಹಣದ ಕೊರತೆ ಇಲ್ಲ, ಬದಲಾಗಿ ವಿಶಾಲ ಮನಸ್ಸಿನ ಕೊರತೆ ಇದೆ. ಇದು ಬದಲಾಗಬೇಕು ಎಂದ ಸ್ವಾಮೀಜಿ, ವಿವೇಕ ಚಿಂತನೆಗಳನ್ನು ಪಸರಿಸಲು ಆಶ್ರಮಗಳು ದುಡಿಯುತ್ತಿವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

Back To Top