Tuesday, 20th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬಜೆಟ್​ ಹಣಕಾಸು ಮಸೂದೆ ಮಂಡನೆ ಸಭೆಗೆ ಎಲ್ಲರೂ ಹಾಜರಾಗಲೇಬೇಕು: ಮಾಜಿ ಸಿಎಂ ಸಿದ್ದರಾಮಯ್ಯ

Wednesday, 11.07.2018, 11:33 AM       No Comments

ಬೆಂಗಳೂರು: ನಾಳೆ ವಿಧಾನಸಭೆಯಲ್ಲಿ ನಡೆಯಲಿರುವ ಹಣಕಾಸು ಮಸೂದೆ ಮಂಡನೆ ವೇಳೆ ಕಾಂಗ್ರೆಸ್​ನ ಎಲ್ಲಾ ಶಾಸಕರು ಭಿನ್ನಾಭಿಪ್ರಾಯ ಮರೆತು ಹಾಜರಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಜು.12ರಂದು ವಿಧಾನಸಭೆಯಲ್ಲಿ ನಡೆಯಲಿರುವ ಮೈತ್ರಿ ಸರ್ಕಾರದ ಮೊದಲ ಬಜೆಟ್​ನ ಹಣಕಾಸು ಮಸೂದೆ ಮಂಡನೆ ಹಿನ್ನೆಲೆಯಲ್ಲಿ ವಿಧಾನಸೌಧದ ಕಾನ್ಫರೆನ್ಸ್​ ಹಾಲ್​ನಲ್ಲಿ ಏರ್ಪಡಿಸಿದ್ದ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಭಿನ್ನಮತವಿದ್ದರೂ ಕಲಾಪಕ್ಕೆ ಹಾಜರಾಗಬೇಕು. ಗೈರಾದರೆ ಬಿಜೆಪಿಯವರು ಲಾಭ ಪಡೆಯಲು ಮುಂದಾಗಬಹುದು. ನಮ್ಮ ಸದಸ್ಯರು ಕಡಿಮೆ ಸಂಖ್ಯೆಯಲ್ಲಿ ಇದ್ದರೆ ಹಣಕಾಸು ಮಸೂದೆ ಮತಕ್ಕೆ ಹಾಕಿ ಎಂದು ಅವರು ಹೇಳಬಹುದು. ಮೈತ್ರಿ ಸರ್ಕಾರದ ಚೊಚ್ಚಲ ಬಜೆಟ್​​ನ ಹಣಕಾಸು ಮಸೂದೆ ವಿಧಾನಸಭೆಯಲ್ಲಿ ಬಿದ್ದು ಹೋದರೆ ಸರ್ಕಾರಕ್ಕೆ ಅಪಾಯ ಎಂದರು.

ಡಿಸಿಎಂ ಪರಮೇಶ್ವರ್​ ಸಭೆ ಇದ್ದರು. ತನ್ವೀರ್ ಸೇಠ್, ಎಚ್.ಕೆ.ಪಾಟೀಲ್, ಹ್ಯಾರಿಸ್ ಮತ್ತಿತರರು ತಡವಾಗಿ ಆಗಮಿಸಿದರು.

Leave a Reply

Your email address will not be published. Required fields are marked *

Back To Top