Friday, 16th November 2018  

Vijayavani

Breaking News

ಬಹುಮಹಡಿ ಕಟ್ಟಡದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್

Friday, 16.02.2018, 6:00 PM       No Comments

<< ದೇಶದ ಮಾದರಿ ನಗರವಾಗಲಿದೆ ಸಿಲಿಕಾನ್ ಸಿಟಿ >>

ಬೆಂಗಳೂರು: ನಗರವನ್ನು ಕಾಡುತ್ತಿರುವ ಪಾರ್ಕಿಂಗ್ ಸಮಸ್ಯೆಗೆ ಪರಿಹಾರ ಎಂಬಂತೆ ಪ್ರಸಕ್ತ ಸಾಲಿನ ಬಜೆಟ್​ನಲ್ಲಿ ಸರ್ಕಾರ ಬಹುಮಹಡಿ ಕಟ್ಟಡದಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಮಲ್ಟಿ ಲೆವಲ್ ಕಾರ್ ಪಾರ್ಕಿಂಗ್ ನಿರ್ಮಿಸುವುದಾಗಿ ಘೋಷಿಸಿದೆ.

ಸಿಲಿಕಾನ್ ಸಿಟಿಯನ್ನು ದೇಶದ ಮಾದರಿ ನಗರವನ್ನಾಗಿ ನಿರ್ಮಿಸಲಾಗುತ್ತದೆ. ನಗರವನ್ನು ಕಾಡುತ್ತಿರುವ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಕ್ರಮಕೈಗೊಳ್ಳಲಾಗುತ್ತದೆ. ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ 100 ಹಾಸಿಗೆಗಳ ಹೆಚ್ಚುವರಿ ವಾರ್ಡ್ ನಿರ್ಮಿಸಲಾಗುತ್ತದೆ. ಇನ್ನು ಬೆಂಗಳೂರು ಪಾಲಿಕೆ ವತಿಯಿಂದ 40 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ನಿರ್ಭಯ ಕೇಂದ್ರ ಆರಂಭ:

ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಿರ್ಭಯ ಕೇಂದ್ರ ಆರಂಭಿಸಲಾಗುವುದು. ನಗರದ ಕಾರಾಗೃಹದಲ್ಲಿ ಅತ್ಯುನ್ನತ ಮಟ್ಟದ ಭದ್ರತೆಗೆ 100 ಕೋಟಿ ರೂ. ಮೀಸಲಿಡಲಿದೆ. ಉಳಿದಂತೆ 3ನೇ ಹಂತದಲ್ಲಿ 105 ಕಿ.ಮೀ. ಉದ್ದದ ಮೆಟ್ರೋ ಲೇನ್ ರಚನೆ ಹಾಗೂ ಬೆಂಗಳೂರು ಪಾಲಿಕೆ ವತಿಯಿಂದ 40 ಕೆರೆಗಳ ಅಭಿವೃದ್ಧಿ ಮಾಡಲಾಗುವುದು. ಜಿಕೆವಿಕೆಯಲ್ಲಿ ನಂಜುಂಡಸ್ವಾಮಿ ಸಂಶೋಧನಾ ಪೀಠ ಸ್ಥಾಪನೆ ಮಾಡಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್ ಭಾಷಣದಲ್ಲಿ ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *

Back To Top