ಮದ್ದೂರು: ತಾಲೂಕಿನ ಬೋರಾಪುರ ಗ್ರಾಮದಲ್ಲಿ ಬಹುಜನ ಸಮಾಜ ಪಾರ್ಟಿ ವತಿಯಿಂದ ಸೋಮವಾರ ಭಗವಾನ್ ಬುದ್ಧ ಜಯಂತಿ ಅಂಗವಾಗಿ ಅರಳಿ ಸಸಿಗಳನ್ನು ನೆಡಲಾಯಿತು.

ಬಹುಜನ ಸಮಾಜ ಪಾರ್ಟಿಯ ತಾಲೂಕು ಅಧ್ಯಕ್ಷ ಶಂಕರ್ ಮಾತನಾಡಿ, ಭಗವಾನ್ ಬುದ್ಧ ಪ್ರಪಂಚಕ್ಕೆ ಶಾಂತಿ ಮಂತ್ರ ಸಾರಿದ ಮಹಾನ್ ವ್ಯಕ್ತಿಯಾಗಿದ್ದು, ಅಹಿಂಸಾ ಮಾರ್ಗವನ್ನು ಜೀವನದಲ್ಲಿ ಅನುಸರಿಸಿದರೆ ಪ್ರತಿಯೊಬ್ಬರ ಬಾಳಲ್ಲೂ ನೆಮ್ಮದಿ, ಸುಖ, ಶಾಂತಿ ಹಾಗೂ ತಾಳ್ಮೆ ನೆಲೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಬಹುಜನ ಸಮಾಜ ಪಾರ್ಟಿಯ ತಾಲೂಕು ಉಸ್ತುವಾರಿ ಎಚ್.ಎಚ್.ಸ್ವಾಮಿ ಮಾತನಾಡಿ, ಭಗವಾನ್ ಬುದ್ಧರ ವಿಚಾರಧಾರೆಗಳು ಸರ್ವಕಾಲಿಕವಾಗಿದ್ದು, ಪ್ರಸ್ತುತ ಸಂದರ್ಭದಲ್ಲಿ ಅತ್ಯವಶ್ಯಕವಾಗಿದ್ದು, ಬುದ್ಧರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಮುಖಂಡರಾದ ಕೃಷ್ಣಪ್ಪ, ಲೋಕೇಶ್, ಗೋಪಾಲ್‌ಸ್ವಾಮಿ, ಸುಬ್ರಹ್ಮಣ್ಯ ಇದ್ದರು.