More

    ರಾಜ್ಯಕ್ಕೆ ಬಿಎಸ್​ವೈ 3ನೇ ಗಿಫ್ಟ್

    ಬೆಂಗಳೂರು: ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್​ನಲ್ಲಿ ಶುಕ್ರವಾರ ಕೃಷಿ ವಲಯಕ್ಕೆ ಭರ್ಜರಿ ಕೊಡುಗೆ ಸಿಕ್ಕ ಬೆನ್ನಲ್ಲೇ ಇತ್ತ ರಾಜ್ಯದಲ್ಲೂ ಆರ್ಥಿಕ ಬಿಕ್ಕಟ್ಟಿನ ನಡುವೆಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅನ್ನದಾತರು, ಆಶಾ ಕಾರ್ಯಕರ್ತರಿಗೆ ವಿಶೇಷ ಕೊಡುಗೆ ನೀಡಿದ್ದಾರೆ.

    ಶುಕ್ರವಾರ ಸಚಿವರ ಜತೆ ಸಭೆ ನಡೆಸಿದ ಯಡಿಯೂರಪ್ಪ 3ನೇ ಹಂತದ ಪ್ಯಾಕೇಜ್​ನಲ್ಲಿ ಮೆಕ್ಕೆಜೋಳ ಬೆಳೆಗಾರರು, ಆಶಾ ಕಾರ್ಯಕರ್ತೆಯರು ಹಾಗೂ ಕುರಿ, ಮೇಕೆ ಸಾಕಾಣಿಕೆದಾರರಿಗೆ ನೆರವು ನೀಡುವ ನಿರ್ಧಾರ ಕೈಗೊಂಡರು. ಮೆಕ್ಕೆಜೋಳ ಬೆಳೆಗಾರರಿಗೆ 5 ಸಾವಿರ ರೂ. ಹಾಗೂ ಆಶಾ ಕಾರ್ಯಕರ್ತೆಯರಿಗಾಗಿ 3 ಸಾವಿರ ರೂ. ನೀಡುವ 512 ಕೋಟಿ ರೂ.ಪ್ಯಾಕೇಜ್ ಪ್ರಕಟಿಸಿದರು. ಇದರೊಂದಿಗೆ 2272 ಕೋಟಿ ರೂ. ಪ್ಯಾಕೇಜ್​ನಲ್ಲಿ ನೀಡಿದಂತಾಗಿದೆ. ಮೆಕ್ಕೆಜೋಳಕ್ಕೆ ಕ್ವಿಂಟಾಲ್​ಗೆ 1,760 ರೂ. ಬೆಂಬಲಬೆಲೆ ನಿಗದಿಪಡಿಸಲಾಗಿತ್ತು. ಆದರೂ ಇಷ್ಟು ಬೆಲೆ ಸಿಗದ ಕಾರಣ ಮೆಕ್ಕೆಜೋಳ ಬೆಳೆದಿರುವ 10 ಲಕ್ಷ ರೈತರಿಗೆ ತಲಾ 5,000 ರೂ. ಸಹಾಯಧನ ನೀಡುತ್ತೇವೆ ಎಂದರು.

    ಇದಕ್ಕಾಗಿ 500 ಕೋಟಿ ರೂ. ವೆಚ್ಚವಾಗಲಿದೆ ಎಂದು ಯಡಿಯೂರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಲಾಕ್​ಡೌನ್ ಹಿನ್ನೆಲೆಯಲ್ಲಿ ಮೆಕ್ಕೆಜೋಳ ಬೆಳೆಗಾರರ ಕಷ್ಟಕ್ಕೆ ಸ್ಪಂದಿಸಿ, ಕೆಎಂಎಫ್ ಮೂಲಕ ಬೆಂಬಲ ಬೆಲೆಗೆ ಮೆಕ್ಕೆಜೋಳ ಖರೀದಿಸಲು 4ಜಿ ವಿನಾಯಿತಿ ನೀಡಲಾಗಿದೆ. ಈಗಾಗಲೇ ಮೆಕ್ಕೆಜೋಳ ಮಾರಾಟ ಮಾಡಿದವರಿಗೆ ಪ್ರಕಟಿಸಿದ ಸಹಾಯಧನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

    ಇದನ್ನೂ ಓದಿ   ಎರಡು ಪಾಳಿಯಲ್ಲಿ ನಡೆಯಲಿವೆ ತರಗತಿ: ಶಾಲೆ-ಕಾಲೇಜು ಆರಂಭಕ್ಕೆ ಮಾರ್ಗಸೂಚಿ

    ಆಶಾ ಪ್ರೋತ್ಸಾಹಧನ

    ಕೋವಿಡ್ ವಿರುದ್ಧದ ಸಮರದಲ್ಲಿ ಮುಂಚೂಣಿಯಾಗಿ ನಿಂತು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ವಿಶೇಷ ಸೇವೆಯನ್ನು ಗುರುತಿಸಿ, ತಲಾ 3,000 ರೂ. ಪ್ರೋತ್ಸಾಹಧನ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ 4,25,000 ಕಾರ್ಯಕರ್ತೆಯರಿಗೆ 12.50 ಕೋಟಿ ರೂ. ಸಿಗಲಿದೆ. ಈ ಮೊತ್ತವನ್ನು ಸಹಕಾರ ಸಂಘ-ಸಂಸ್ಥೆಗಳಿಂದ ಕ್ರೋಡೀಕರಿಸಿ ಸಹಕಾರ ಇಲಾಖೆಯಿಂದ ಭರಿಸಲಾಗುವುದೆಂದು ಸಿಎಂ ಹೇಳಿದರು.

    ಪರಿಹಾರ ಮುಂದುವರಿಕೆ

    ನೈಸರ್ಗಿಕ ವಿಕೋಪಕ್ಕೆ ಕುರಿ, ಮೇಕೆ ಬಲಿಯಾದರೆ 5,000 ರೂ. ಪರಿಹಾರ ನೀಡುವ ಯೋಜನೆ ಮುಂದುವರಿಸಲಾಗುವುದು, ಈ ಯೋಜನೆ ಸ್ಥಗಿತವಾಗಿತ್ತು, ಅದನ್ನು ಮುಂದುವರಿಸುತ್ತಿದ್ದೇವೆ ಎಂದರು.

    ಮತ್ತೊಂದು ಪ್ಯಾಕೇಜ್ ಇಲ್ಲ

    ಪರಿಹಾರ ಪ್ಯಾಕೇಜ್​ನಲ್ಲಿ ಸೇರ್ಪಡೆಗೊಳಿಸುವಂತೆ ಪ್ರತಿದಿನವೂ ಮನವಿ, ಬೇಡಿಕೆ ಬರುತ್ತಿವೆ. ಆದರೆ, ರಾಜ್ಯದ ಹಣಕಾಸು ಪರಿಸ್ಥಿತಿ ಅದಕ್ಕೆ ಅವಕಾಶ ಕೊಡುತ್ತಿಲ್ಲ. ಹೀಗಾಗಿ ಮತ್ತೊಂದು ಸುತ್ತಿನ ಪರಿಹಾರ ಪ್ಯಾಕೇಜ್ ನೀಡಲಾಗದು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.

    ಮೊದಲ ಹಂತದ 1,610 ಕೋಟಿ ರೂ. ಪರಿಹಾರ ಹಾಗೂ 2, 3ನೇ ಪ್ಯಾಕೇಜ್ ಸೇರಿಸಿ ಒಟ್ಟು 2,272 ಕೋಟಿ ರೂ. ಕೊಡಲಾಗಿದೆ. ಸದ್ಯದ ಹಣಕಾಸು ಸ್ಥಿತಿಯಲ್ಲಿ ಇದಕ್ಕಿಂತ ಹೆಚ್ಚಿನ ನೆರವು ನೀಡುವುದು ಸಾಧ್ಯವಿಲ್ಲ ಎಂದರು.

    ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ, ಬಿ.ಎ.ಬಸವರಾಜ ಇದ್ದರು.

    ಹಸಿರು ಶಾಲು ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿರುವ ನಾನು ರೈತರ ಹಿತಕ್ಕೆ ಧಕ್ಕೆ ಆದರೆ ಒಂದು ಕ್ಷಣವೂ ಸಿಎಂ ಸ್ಥಾನದಲ್ಲಿ ಮುಂದುವರಿಯಲ್ಲ. ಎಪಿಎಂಸಿ ತಿದ್ದುಪಡಿ ಕಾಯ್ದೆಯಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ.

    | ಯಡಿಯೂರಪ್ಪ ಸಿಎಂ

    ಉತ್ತರ ಪ್ರದೇಶದಲ್ಲಿ ಅಜಾನ್​ಗೆ ಲೌಡ್​ಸ್ಪೀಕರ್​ ಬಳಸುವಂತಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts