ಅಂದು ಯಡಿಯೂರಪ್ಪ ರಾಜೀನಾಮೆಗೆ ಆಗ್ರಹಿಸಿದ್ದ ಸಿದ್ದರಾಮಯ್ಯ ಈಗ ಮಾಡುತ್ತಿರುವುದೇನು? ಬಿಜೆಪಿ ಪ್ರಶ್ನೆ

blank

ಬೆಂಗಳೂರು:
ಬೇರೆಯವರು ಮಾಡಿದರೆ ಮಾತ್ರ ಭ್ರಷ್ಟಾಚಾರ. ತಾನು ಮಾಡಿದ್ದು ಭ್ರಷ್ಟಾಚಾರ ಅಲ್ಲ ಎನ್ನುವ ತಮ್ಮ ಮೂಗಿನ ನೇರದ ಮನೋಭಾವದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲು ಹೊರಬರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆಗಿನ ಸಿಎಂ ಯಡಿಯೂರಪ್ಪ ಅವರ ವಿರುದ್ಧ ತನಿಖೆಗೆ ಅನುಮತಿ ನೀಡಿದ್ದನ್ನು ಸಿದ್ದರಾಮಯ್ಯ ಸ್ವಾಗತಿಸಿದ್ದರು. ಈಗ ಅದೇ ಸಿದ್ದರಾಮಯ್ಯ ಸಿಎಂ ಕುರ್ಚಿಯಲ್ಲಿದ್ದಾರೆ. ಆದರೆ ರಾಜ್ಯಪಾಲರ ತೀರ್ಮಾನವನ್ನು ವಿರೋಧಿಸುತ್ತಿರುವುದು ಅಚ್ಚರಿಯಾಗಿದೆ ಎಂದರು.
ಸಿದ್ದರಾಮಯ್ಯ ಅವರಿಗಾಗಿ ಅವತ್ತು ಸಂವಿಧಾನ ಬೇರೆ ಇತ್ತೇ? ಈವತ್ತಿನ ಸಂವಿಧಾನ ಬೇರೆ ಇದೆಯೇ? ಅದೇ ಸಂವಿಧಾನ ಅಲ್ಲವೇ? ಅದೇ ಭ್ರಷ್ಟಾಚಾರ ನಿಗ್ರಹ ಕಾಯ್ದೆಯ 17(ಎ) ಅಲ್ಲವೇ ಎಂದು ಪ್ರಶ್ನಿಸಿದರು.
ಬೇರೆಯವರು ಮಾಡಿದರೆ ಭ್ರಷ್ಟಾಚಾರ. ಇವರು ಮಾಡಿದರೆ ಅದು ಭ್ರಷ್ಟಾಚಾರ ಅಲ್ಲ ಎನ್ನುವ ಸಿದ್ದರಾಮಯ್ಯ ಅವರ ಈ ಧೋರಣೆಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.
ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಮಾತನಾಡಿ, ಸುಳ್ಳನ್ನು ಹತ್ತು ಬಾರಿ ಹೇಳಿ ಅದನ್ನೇ ಸತ್ಯ ಎಂದು ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಮುಡಾ ಅವ್ಯವಹಾರ ಸಂಬಂಧ ಆಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನಿಖೆ ಮಾಡಿಸಿ ವರದಿ ತರಿಸಿದ್ದರು. ಆ ವರದಿಯನ್ನು ಸಿದ್ದರಾಮಯ್ಯ ಯಾಕೆ ಉಲ್ಲೇಖಿಸುತ್ತಿಲ್ಲ. ಕೂಡಲೇ ಆ ವರದಿಯನ್ನು ಬಹಿರಂಗ ಪಡಿಸಿ ಎಂದು ಆಗ್ರಹಿಸಿದರು.
ಜವರ ಆ ಜಮೀನಿನ ಮಾಲಕರೇ ಅಲ್ಲ. ಸುಳ್ಳು ಹೇಳಿಕೊಂಡು, ಕೃಷ್ಣ ಬೈರೇಗೌಡರು ಮತ್ತು ಸಿದ್ದರಾಮಯ್ಯ ಮಾತನಾಡುತ್ತಾರೆ. ದಾಖಲಾತಿ ಪರಿಶೀಲಿಸಿ, ಅಂಕಿ ಅಂಶ ಪರಿಶೀಲಿಸಿ ಅದರ ಆಧಾರದಲ್ಲೇ ಪ್ರಾಸಿಕ್ಯೂಶನ್‌ಗೆ ಅನುಮತಿ ಕೊಟ್ಟಿದ್ದಾಗಿ ರಾಜ್ಯಪಾಲರು ತಿಳಿಸಿದ್ದಾರೆ ಎಂದರು.
ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಕು.ಮಂಜುಳಾ ಮಾತನಾಡಿ, ರಾಜ್ಯ ಗೃಹ ಸಚಿವರು ಎಲ್ಲವನ್ನೂ ತಿಪ್ಪೆ ಸಾರಿಸುವಂತೆ ಮಾತನಾಡುತ್ತಾರೆ. ಕೊಲೆ, ಅತ್ಯಾಚಾರ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸದೆ ಇರುವ ಕಾರಣ ಬೆಂಗಳೂರನ್ನು ಅತ್ಯಾಚಾರಿಗಳ ನಗರವಾಗಿ ರೂಪಿಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ಸಿಲಿಕಾನ್ ಸಿಟಿಯ ಮರ್ಯಾದೆ ಹಾಳಾಗುತ್ತಿದೆ ಎಂದರು.

TAGGED:
Share This Article

ಚಳಿಗಾಲದಲ್ಲಿ ಈ ಒಂದು ಹಣ್ಣನ್ನು ತಿಂದರೆ ಸಾಕು.. ರೋಗಗಳೇ ಬರುವುದಿಲ್ಲ..fruits

fruits : ಚಳಿಗಾಲ ಬಂದಿದೆ ಎಂದರೆ ಕೆಮ್ಮು, ನೆಗಡಿ, ಜ್ವರ, ಗಂಟಲು ನೋವು, ಕೀಲು ನೋವು…

ಮಕರ ರಾಶಿಗೆ ಬುಧ ಪ್ರವೇಶ: ಈ 5 ರಾಶಿಯವರಿಗೆ ರಾಜಯೋಗ, ಖುಲಾಯಿಸಲಿದೆ ಅದೃಷ್ಟ! Zodiac Sign

Zodiac Sign : ಜ್ಯೋತಿಷ್ಯದ ಆಧಾರದ ಮೇಲೆ, ಒಬ್ಬರು ಜನಿಸಿದ ರಾಶಿ, ನಕ್ಷತ್ರ ಹಾಗೂ ಗ್ರಹಗಳ…

ಪೇನ್​ ಕಿಲ್ಲರ್ ಮಾತ್ರೆ​ vs ಜೆಲ್​… ಎರಡರಲ್ಲಿ ಯಾವುದು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ… Painkiller Tablet vs Gel

Painkiller Tablet vs Gel : ದೇಹವು ಗಾಯಗೊಂಡಾಗ ಅಥವಾ ಉಳುಕಿದಾಗ ನೋವು ಅನುಭವಿಸುವುದು ಸಹಜ.…