ಬಿಎಸ್​ವೈ ರಾಜೀನಾಮೆ ನೀಡಲಿ

ವಿಜಯಪುರ:ಬಿಜೆಪಿಯಿಂದ ಆಪರೇಷನ್ ಕಮಲ ಮಾಡುವ ಮೂಲಕ ಸಂವಿಧಾನ ವಿರೋಧಿ ಕೃತ್ಯ ಎಸಗಲಾಗುತ್ತಿದೆ. ಶಾಸಕ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯಪುರ ಗಾಂಧಿ ಚೌಕ್​ನಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ರವಿಗೌಡ ಪಾಟೀಲ ಮಾತನಾಡಿ, ರಾಜ್ಯದಲ್ಲಿ ಸುಸೂತ್ರವಾಗಿ ನಡೆಯುತ್ತಿರುವ ಸಮ್ಮಿಶ್ರ ಸರ್ಕಾರವನ್ನು ಅನೈತಿಕವಾಗಿ ಅತಂತ್ರಗೊಳಿಸಲು ಬಿಜೆಪಿ ನಾಯಕರು ಹೊರಟಿದ್ದಾರೆ. ಅಂತಹ ಸಂವಿಧಾನ ವಿರೋಧಿ ಕೃತ್ಯಕ್ಕೆ ಮುಂದಾಗಿರುವ ಬಿಜೆಪಿ ನಾಯಕರ ಧೋರಣೆಯಿಂದ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದರು.

ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕ ವಿಠಲ ಕಟಕಧೋಂಡ ಮಾತನಾಡಿ, ಬಿಜೆಪಿ ಪರಿಸ್ಥಿತಿ ಇಂದು ಅಧೋಗತಿಗೆ ತಲುಪಿದೆ ಎಂದರು.

ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ವೈಜನಾಥ ಕರ್ಪರಮಠ, ಪರವೇಜ ಚಟ್ಟರಕಿ, ಮಹಾದೇವಿ ಗೋಕಾಕ, ಅಜೀತ್​ಸಿಂಗ ಪರದೇಶಿ, ಜಮೀರ್ ಅಹಮ್ಮದ್ ಬಕ್ಷಿ, ಆರತಿ ಶಹಾಪುರ, ಚಾಂದಸಾಬ ಗಡಗಲಾವ, ಕಾಂತಾ ನಾಯಕ, ನಿಂಗನಗೌಡ ಪಾಟೀಲ, ಸಾಹೇಬಗೌಡ ಬಿರಾದಾರ, ಗಂಗಾಧರ ಸಂಬಣ್ಣಿ, ದತ್ತಾತ್ರೇಯ ಆಲಮೇಲ, ಇರ್ಫಾನ್ ಶೇಖ, ಅಬ್ದುಲ್​ಖಾದರ ಖಾದಿಮ, ವಸಂತ ಹೊನಮೊಡೆ, ಶಬ್ಬೀರ ಜಾಗೀರದಾರ, ವಿಜಯಕುಮಾರ ಘಾಟಗೆ, ಚನ್ನಬಸಪ್ಪ ನಂದರಗಿ, ಹಾಜಿಲಾಲ ದಳವಾಯಿ, ರಾಜೇಶ್ವರಿ ಚೋಳಕೆ, ಸಾಜಿದಾಬಿ ಕಲಾದಗಿ, ಗಂಗೂಬಾಯಿ ಧುಮಾಳೆ, ಶರಣಪ್ಪ ಯಕ್ಕುಂಡಿ ಇದ್ದರು.

One Reply to “ಬಿಎಸ್​ವೈ ರಾಜೀನಾಮೆ ನೀಡಲಿ”

Leave a Reply

Your email address will not be published. Required fields are marked *