ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ: ಬಿಎಸ್​ವೈ

ನವದೆಹಲಿ: ಸಿಎಂ ಕುಮಾರಸ್ವಾಮಿ ಅವರು ಹೇಳಿದ್ದನ್ನೇ ಪ್ರಧಾನಿಯವರೂ ಹೇಳಿದ್ದಾರೆ. ಕುಮಾರಸ್ವಾಮಿ ಎಂದಿಗೂ ತಾವು ಹೇಳಿದ್ದನ್ನು ಒಪ್ಪಿಕೊಂಡಿಲ್ಲ. ಸುಖಾಸುಮ್ಮನೆ ಪ್ರಧಾನಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಎಚ್​ಡಿಕೆ ಅವರನ್ನು ಕಾಂಗ್ರೆಸ್​ ಕ್ಲರ್ಕ್​​ನಂತೆ ನಡೆಸಿಕೊಳ್ಳುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಊಹಾಪೋಹದ ಮೇಲೆ ಮಾತಾಡಿಲ್ಲ. ಎಚ್​ಡಿಕೆ ಅವರ ಈ ಹೇಳಿಕೆ ಮಾಧ್ಯಮಗಳಲ್ಲಿಯೇ ಬಂದಿದೆ. ಇನ್ನು ಕಾಂಗ್ರೆಸ್​ ನಾಯಕರು ಅರ್ಥ ಮಾಡಿಕೊಳ್ಳಬೇಕು. ಕಾಂಗ್ರೆಸ್​ ನಾಯಕರೇ ಮೋದಿ ಹೇಳಿಕೆಯನ್ನು ತಿರುಚುತ್ತಿದ್ದಾರೆ. ಇದು ಅವರಿಗೆ ಶೋಭೆ ತರುವುದಿಲ್ಲ ಎಂದರು.

ಅತೃಪ್ತ ಶಾಸಕ ದೆಹಲಿಯಲ್ಲಿರೋದು ಗೊತ್ತಿಲ್ಲ. ಚುನಾವಣೆ ಕುರಿತು ಇಂದು ಎರಡು ಮೂರು ಸಭೆಗಳಿದ್ದು, ರಾಜ್ಯದ ಸಂಸದರು ಮತ್ತು ಶಾಸಕರು ಭಾಗಿಯಾಗಲಿದ್ದಾರೆ. ಇಂದು ಸಭೆ ಮುಗಿಯದಿದ್ದರೆ ನಾಳೆಯೂ ಚರ್ಚೆ ನಡೆಯಲಿದೆ ಎಂದರು. (ದಿಗ್ವಿಜಯ ನ್ಯೂಸ್)

One Reply to “ಪ್ರಧಾನಿ ಮೋದಿ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ: ಬಿಎಸ್​ವೈ”

  1. ಏಕೆಂದರೆ ಅವರೂ ಕೂಡ ಅವರಿವರ ಕೈಗೊಂಬೆಯಾಗಿಬಿಟ್ಟಿದ್ದಾರೆ. ಸ್ವಂತಿಕೆಯನ್ನು ಕಳೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *