ಡಿಕೆಶಿ ಹಣ ಕೊಟ್ಟು ಖರೀದಿ ಮಾಡಿದ್ದಾರೆ, ದೇವರು ಒಳ್ಳೆಯದು ಮಾಡಲಿ: ಬಿಎಸ್​ವೈ

ಶಿವಮೊಗ್ಗ: ರಾಮನಗರ ಉಪಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಕಮಲ ಬಿಟ್ಟು ಕೈ ಸೇರಿದ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಡಿಕೆಶಿ ಹಣ ಕೊಟ್ಟು ರಾಮನಗರ ಬಿಜೆಪಿ ಅಭ್ಯರ್ಥಿಯನ್ನು ಖರೀದಿಸಿದ್ದಾರೆ. ದೇವರು ಅವರಿಗೆ ಒಳ್ಳೆಯದು ಮಾಡಲಿ ಎಂದಿದ್ದಾರೆ.

ಇನ್ನೂ ಈ ಕುರಿತು ಬಿ.ವೈ.ರಾಘವೇಂದ್ರ ಮಾತನಾಡಿ, ‘ಜೆಡಿಎಸ್​​ ಮುಖಂಡರ ಹಣ, ತೋಳ್ಬಲದಿಂದ ಚಂದ್ರಶೇಖರ್​ ಅವರನ್ನು ಖರೀದಿ ಮಾಡಿದ್ದಾರೆ ಎಂದರು.