ಎಚ್​ಡಿಕೆ ಪೆಟ್ರೋಲ್​ ದರ ಇಳಿಕೆ ಮಾಡಿದ್ದು 2 ರೂ. ಅಲ್ಲ ಕೇವಲ 42 ಪೈಸೆ: ಬಿಎಸ್​ವೈ

ಬೆಂಗಳೂರು: ರಾಜ್ಯದಲ್ಲಿ ಪೆಟ್ರೋಲ್‌ ದರ ಇಳಿಕೆಯಾಗಿದ್ದು 2 ರೂ. ಅಲ್ಲ. ಕೇವಲ 42 ಪೈಸೆ ಅಷ್ಟೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ದೇಶದಲ್ಲಿ ತೈಲ ದರ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಎಂ ಎಚ್​.ಡಿ. ಕುಮಾರಸ್ವಾಮಿ ರಾಜ್ಯದಲ್ಲಿ ಪೆಟ್ರೋಲ್​, ಡೀಸೆಲ್​ ಮೇಲಿನ ಸೆಸ್​ನ್ನು 2 ರೂ. ಇಳಿಕೆ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಬಿಎಸ್​ವೈ, ಎಚ್‌ಡಿಕೆ ಸಿಎಂ ಆಗುತ್ತಿದ್ದಂತೆಯೇ ತಮ್ಮ ಬಜೆಟ್​ನಲ್ಲಿ 1.58 ರೂ. ಪೆಟ್ರೋಲ್‌ ದರ ಹೆಚ್ಚಳ ಮಾಡಿದ್ದರು ಎಂದಿದ್ದಾರೆ.

ಹಾಗಾಗಿ ಈಗ ಎಚ್​ಡಿಕೆ 2 ರೂ. ಸೆಸ್​ ಇಳಿಕೆ ಮಾಡಿಲ್ಲ. ಕೇವಲ 42 ಪೈಸೆ ಇಳಿಸಿದ್ದಾರೆ. ಆದರೆ ಕುಮಾರಸ್ವಾಮಿ ಇದನ್ನು ದೊಡ್ಡ ಸಾಧನೆ ಮಾಡಿದಂತೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. (ದಿಗ್ವಿಜಯ ನ್ಯೂಸ್​)