ಭ್ರಷ್ಟಾಚಾರ, ಅರಾಜಕತೆ ಸೃಷ್ಟಿಸಲಿದೆ ಬಿಎಸ್​ಪಿ-ಎಸ್​ಪಿ ಮೈತ್ರಿ: ಯೋಗಿ ಆದಿತ್ಯನಾಥ್​ ಟೀಕೆ

ಲಖನೌ: ಮುಂದಿನ ಲೋಕಸಭಾ ಚುನಾವಣೆಗಾಗಿ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ಮಾಡಿಕೊಂಡಿದ್ದನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಟೀಕಿಸಿದ್ದು, ಪ್ರತಿಪಕ್ಷಗಳ ಮೈತ್ರಿ ಅರಾಜಕತೆ, ಭ್ರಷ್ಟಾಚಾರ ಮತ್ತು ರಾಜಕೀಯ ಅಸ್ಥಿರತೆಗೆ ನಾಂದಿ ಹಾಡಲಿದೆ ಎಂದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಒಳ್ಳೆಯ ಆಶಯವನ್ನಿಟ್ಟುಕೊಂಡು ಬಿಎಸ್​ಪಿ ಮತ್ತು ಎಸ್​ಪಿ ಮೈತ್ರಿ ಮಾಡಿಕೊಂಡಿಲ್ಲ. ಮಾಯಾವತಿ ಹಾಗೂ ಅಖಿಲೇಶ್ ಯಾದವ್​ ಒಬ್ಬರ ಮುಖವನ್ನು ಮತ್ತೊಬ್ಬರು ನೋಡಿಕೊಳ್ಳುತ್ತಿರಲಿಲ್ಲ. ಜಾತಿ ವಿಚಾರದಲ್ಲಿ ವೈರತ್ವಹೊಂದಿದ್ದವರು. ಸೌಜನ್ಯಕ್ಕೂ ಕೂಡ ಒಬ್ಬರಿಗೊಬ್ಬರು ವಿಶ್​ ಮಾಡಿಕೊಳ್ಳುತ್ತಿರಲಿಲ್ಲ. ಆದರೆ ಇವತ್ತು ಎರಡೂ ಪಕ್ಷಗಳು ಮೈತ್ರಿಮಾಡಿಕೊಂಡಿದ್ದಾರೆ. ಇದು ಅವರ ಲಾಭಕ್ಕಾಗಿ ಎಂದು ಟೀಕಿಸಿದರು.

ಬಿಜೆಪಿ ರಾಮ ಮತ್ತು ರೊಟ್ಟಿಯನ್ನು ಗೌರವಿಸುತ್ತದೆ. ಸಮಾಜದ ಎಲ್ಲ ವರ್ಗಗಳ ಅಭಿವೃದ್ಧಿಗೆ ಬದ್ಧವಾಗಿದೆ. 2014ರ ಚುನಾವಣೆಯಲ್ಲಿ ಗಳಿಸಿದ ಸೀಟ್​ಗಳಿಗಿಂತ ಹೆಚ್ಚಿನ ಸೀಟ್​ನ್ನು ಈ ಲೋಕಸಭಾ ಚುನಾವಣೆಯಲ್ಲಿ ಗಳಿಸಲಿದೆ ಎಂದು ಹೇಳಿದರು.