ಆನೆ ಪ್ರತಿಮೆ ವೆಚ್ಚ ಮರುಪಾವತಿಸಿ

ನವದೆಹಲಿ: ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಮುಖ್ಯಸ್ಥೆ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಲಖನೌ ಮತ್ತು ನೋಯ್ಡಾಗಳಲ್ಲಿ ಆನೆ ಪ್ರತಿಮೆಗಳ ನಿರ್ವಣಕ್ಕಾಗಿ ಸರ್ಕಾರಿ ಬೊಕ್ಕಸದಿಂದ ವೆಚ್ಚ ಮಾಡಿದ ಹಣವನ್ನು ಮರುಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಶುಕ್ರವಾರ ಸೂಚಿಸಿದೆ.

ಬಿಎಸ್​ಪಿ ಚಿಹ್ನೆಯಾದ ಆನೆ

ಹಾಗೂ ಅದರ ಜತೆ ತಮ್ಮ ಪ್ರತಿಮೆ ಗಳನ್ನು ಮಾಯಾವತಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿದ್ದರು. ಇದನ್ನು ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಇಂಥ ಪ್ರತಿಮೆಗಳನ್ನು ಸಾರ್ವಜನಿಕ ಹಣದಲ್ಲಿ ನಿರ್ವಿುಸಬಾರದು ಎಂಬ ನಿಯಮವಿದ್ದರೂ ಅದನ್ನು ಮಾಯಾವತಿ ಉಲ್ಲಂಘಿಸಿದ್ದಾರೆ. ಹೀಗಾಗಿ ಪ್ರತಿಮೆಗಳ ನಿರ್ವಣಕ್ಕೆ ತಗುಲಿದ ವೆಚ್ಚವನ್ನು ಅವರು ವಾಪಸ್ ಮಾಡಬೇಕು ಎಂದು ಆದೇಶಿಸಿದೆ. ವಿಚಾರಣೆಯನ್ನು ಏ.2ಕ್ಕೆ ಮುಂದೂಡಿದೆ.

ಲೋಕಸಭಾ ಚುನಾವಣೆ ಪೂರ್ಣಗೊಂಡ ನಂತರ ಮೇ ತಿಂಗಳಲ್ಲಿ ವಿಚಾರಣೆ ನಡೆಸುವಂತೆ ಮಾಯಾವತಿ ಪರ ವಕೀಲ ಸತೀಶ್ ಮಿಶ್ರಾ ಕೇಳಿಕೊಂಡರು. ಅದಕ್ಕೆ ಸಿಟ್ಟಾದ ನ್ಯಾಯಮೂರ್ತಿಗಳು, ‘ನಾವು ಬಹಿರಂಗವಾಗಿ ಹೇಳಲು ಇಚ್ಛಿಸದ್ದನ್ನು ಹೇಳುವಂತೆ ನಮ್ಮನ್ನು ಬಲವಂತಪಡಿಸಬೇಡಿ’ ಎಂದು ಗದರಿದರು.

130 ಆನೆ, 40 ಸಾವಿರ ಕೋಟಿ ರೂ. ಲೂಟಿ!

ಲಖನೌ ಮತ್ತು ನೋಯ್ಡಾದ ಎರಡು ಪಾರ್ಕ್​ಗಳಲ್ಲಿ 130 ಆನೆಗಳ ಬೃಹತ್ ಮೂರ್ತಿಯನ್ನು ಸ್ಥಾಪನೆ ಮಾಡಲಾಗಿದೆ. ಒಂದೊಂದು ಆನೆಯ ಬೆಲೆ -ಠಿ;5 ಲಕ್ಷವಿದ್ದರೂ, ಸರ್ಕಾರ ಸ್ವಾಮ್ಯದ ಸಂಸ್ಥೆಯೊಂದರಿಂದ ಅದನ್ನು ತಲಾ -ಠಿ;60 ಲಕ್ಷಕ್ಕೆ ಖರೀದಿ ಮಾಡಿರುವ ಆರೋಪವಿದೆ. ಈ ಆನೆಗಳು ಹಾಗೂ ಇದರ ಸ್ಥಾಪನೆಗೆ ಖರೀದಿಸಿದ ಜಾಗವೂ ಸೇರಿ ಸುಮಾರು -ಠಿ;40 ಸಾವಿರ ಕೋಟಿ ಹಣ ಲೂಟಿ ಮಾಡಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಅಖಿಲೇಶ್ ಯಾದವ್ ಆರೋಪಿಸಿದ್ದರು.