ಕಾರ್ಯಕರ್ತರಿಗೆ ಮಹಾಮೈತ್ರಿ ಕಲಬೆರಕೆ ಆಗಿದೆಯೇ?

Latest News

17ರಿಂದ ಬಾಗಲಕೋಟೆಯಲ್ಲಿ ಯೋಗ ಸಪ್ತಾಹ

ಬಾಗಲಕೋಟೆ: ಹರಿಹರದ ಶ್ವಾಸಯೋಗಪೀಠ, ಬಾಗಲಕೋಟೆಯ ಯೋಗ ಸಮಿತಿ, ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಸಹಯೋಗದಲ್ಲಿ ನಗರದಲ್ಲಿ ಖ್ಯಾತ ಶ್ವಾಸಗುರು ಹರಿಹರದ ವೀರಶೈವ ಲಿಂಗಾಯತ...

VIDEO: ಕಗ್ಗತ್ತಲೆಯಲ್ಲಿ ಅಡಗಿ ನೆಗೆದರೂ ಗುರಿ ತಪ್ಪಿದ ಚಿರತೆ! ಸಾವಿಗೂ, ಜೀವಕೂ ಕೆಲವೇ ಸೆಕೆಂಡ್​ಗಳ ಅಂತರ

ನವದೆಹಲಿ: ಕಗ್ಗತ್ತಲೆಯಲ್ಲಿ ಅಡಗಿದ್ದು, ಆ ಮಾರ್ಗವಾಗಿ ಬಂದ ಬೈಕ್​ ಸವಾರರ ಮೇಲೆ ಚಿರತೆ ನೆಗೆದರೂ ಕೆಲವೇ ಸೆಕೆಂಡ್​ಗಳ ಅಂತರದಲ್ಲಿ ಸಾವಿನಿಂದ ಪಾರಾದರು. ಚಿರತೆ...

ಅಹ್ಮದ್​ ಪಟೇಲ್​ ಜತೆ ಸಭೆಯ ಬಳಿಕ ಸೋನಿಯಾ, ಶರದ್​ ಪವಾರ್​ ಭೇಟಿ: ಶಿವಸೇನೆಯ ಹಿಂದುತ್ವ ಸಿದ್ಧಾಂತಕ್ಕೆ ಧಕ್ಕೆ ಆಗಲ್ಲವಂತೆ

ಮುಂಬೈ: ಕಾಂಗ್ರೆಸ್​ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಂಗ್ರೆಸ್​ ಮುಖಂಡ ಅಹ್ಮದ್​ ಪಟೇಲ್​ ಜತೆ ಸಭೆ ನಡೆಸಿ, ಮಹಾರಾಷ್ಟ್ರದ ಸಾಮಾನ್ಯ ಕನಿಷ್ಠ ಕಾರ್ಯಕ್ರಮ...

ಮಹಾರಾಷ್ಟ್ರದಲ್ಲಿ ಕಾಡುತ್ತಿದೆ ಶಾಸಕರ ಕುದುರೆ ವ್ಯಾಪಾರದ ಭೀತಿ: ಎನ್​ಸಿಪಿ ಮಾತ್ರ ನಿರಾತಂಕ

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದಲ್ಲಿ ಸರ್ಕಾರ ರಚಿಸಲು ಎನ್​ಸಿಪಿ ಮತ್ತು ಕಾಂಗ್ರೆಸ್​ ತರಾತುರಿ ತೋರುತ್ತಿವೆ. ಸರ್ಕಾರ ರಚನೆ ವಿಳಂಬವಾದಲ್ಲಿ ಬಿಜೆಪಿಯವರು ಆಪರೇಷನ್​ ಕಮಲ...

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹ ಹಿರಿಯರ ಕನಸು: ಬಾಬಾ ರಾಮದೇವ್​

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಪೇಜಾವರ ಶ್ರೀಗಳಂತಹ ಹಿರಿಯರ ಕನಸಾಗಿದೆ ಎಂದು ಯೋಗಗುರು ಬಾಬಾ ರಾಮದೇವ್​ ತಿಳಿಸಿದರು. ಐದು ದಿನಗಳ ಯೋಗ ಮತ್ತು...

ಉತ್ತರ ಪ್ರದೇಶದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ ಮಹಾಮೈತ್ರಿ ಮೂಲಕ ‘ಮೋದಿ ಹಠಾವೋ’ ಮಂತ್ರ ಪಠಿಸುತ್ತಿವೆ. ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದ ಮೂರು ಪಕ್ಷಗಳು ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ಒಗ್ಗಟ್ಟಿನ ಮಾತುಗಳನ್ನಾಡುತ್ತಿವೆಯಷ್ಟೇ. ಬಿಜೆಪಿ ನಾಗಾಲೋಟಕ್ಕೆ ಕಡಿವಾಣ ಹಾಕಲು ಮಹಾಮೈತ್ರಿ ಮುಖಂಡರು ಒಂದಾದರೂ, ಮೂರೂ ಪಕ್ಷಗಳ ಮತದಾರರು ಒಗ್ಗೂಡಿ ಬಿಜೆಪಿ ವಿರುದ್ಧ ಮತ ಹಾಕುತ್ತಾರಾ ಎಂಬುದು ಪ್ರಶ್ನೆ.

ಈ ಮೂರೂ ಪಕ್ಷಗಳಿಗೆ ದಲಿತ, ಹಿಂದುಳಿದ ವರ್ಗಗಳ ಮತಗಳ ಪರಿಪೂರ್ಣ ಕ್ರೋಢೀಕರಣದ ಲಾಭವಾಗುತ್ತದೆಯೇ ಎಂಬ ಬಗ್ಗೆ ಖಚಿತ ಉತ್ತರ ಸಿಗುತ್ತಿಲ್ಲ. ಕೆಲವೆಡೆ ಎಸ್​ಪಿ ಅಭ್ಯರ್ಥಿ ಬಗ್ಗೆ ಅಸಮಾಧಾನ ಕೇಳಿಬಂದಿದ್ದರೆ, ಮತ್ತೆ ಕೆಲವೆಡೆ ಆರ್​ಎಲ್​ಡಿ ಅಭ್ಯರ್ಥಿ ಪರ ಪ್ರಚಾರಕ್ಕೂ ಬಿಎಸ್​ಪಿ ಮುಖಂಡರು ಹಿಂದೇಟು ಹಾಕುತ್ತಿದ್ದಾರೆ.

ಇದು ಅಧಿಕಾರಕ್ಕಿಂತ ಹೆಚ್ಚು ಅಸ್ತಿತ್ವ ರಕ್ಷಣೆಗಾಗಿ ಮಾಡಿಕೊಂಡಿರುವ ಮೈತ್ರಿ ಎಂಬುದು ಮೂರೂ ಪಕ್ಷಗಳ ಕಾರ್ಯಕರ್ತರು ಮತ್ತು ಬೆಂಬಲಿಗರಿಗೆ ಗೊತ್ತಿಲ್ಲದೇನಿಲ್ಲ. ಆದರೆ, ಅಖಿಲೇಶ್-ಮಾಯಾವತಿ-ಅಜಿತ್ ಸಿಂಗ್ ಹೇಗೆ ಸಾರ್ವಜನಿಕ ವೇದಿಕೆಗಳಲ್ಲಿ ‘ನಾವೆಲ್ಲರೂ ಒಂದೇ’ ಎಂದು ಬಿಂಬಿಸಿಕೊಳ್ಳುತ್ತಾರೋ ಹಾಗೆಯೇ ಕಾರ್ಯಕರ್ತರ ಮಧ್ಯೆ ಒಗ್ಗಟ್ಟಿನ ದನಿಗಳು ದೊಡ್ಡ ಮಟ್ಟಿಗೆ ಕಾಣಿಸುತ್ತಿಲ್ಲ.

‘ಮಾಯಾವತಿ ಹಾಗೂ ಬಿಎಸ್​ಪಿ ಬಗ್ಗೆ ಭಾರಿ ಆಕ್ರೋಶ ಹೊಂದಿರುವ ಯಾದವ ಸಮುದಾಯದಲ್ಲಿ ಕೆಲ ಮಂದಿ ಹೊರತುಪಡಿಸಿದರೆ ಉಳಿದವರ್ಯಾರೂ ಬಿಎಸ್​ಪಿ ಅಭ್ಯರ್ಥಿಗೆ ಮತ ಹಾಕುವುದಿಲ್ಲ. ದಲಿತ ಮತದಾರ ಎಸ್​ಪಿಯ ಯಾದವ ಅಭ್ಯರ್ಥಿಯನ್ನು ಬೆಂಬಲಿಸಬಹುದು. ಆದರೆ ಪ್ರಭಾವಿ ಯಾದವರು ಪ್ರತಿಷ್ಟೆ ಪಣಕ್ಕಿಟ್ಟು ಮಾಯಾವತಿಗೆ ಜೈಕಾರ ಹಾಕುವುದು ಅಸಾಧ್ಯ’ ಎನ್ನುತ್ತಾರೆ ಲಖನೌದ ಛಾರ್​ಬಾಗ್​ನಲ್ಲಿ ಸಿಕ್ಕ ಕಮಲೇಶ್ ಕುಮಾರ್. ಆದರೆ ಫೈಜಾಬಾದ್​ನಲ್ಲಿ ಸಿಕ್ಕ ಬಿಎಸ್​ಪಿಯ ಸ್ಥಳೀಯ ಮುಖಂಡ ಸತೀಶ್ ಕುಮಾರ್ ಗೌತಮ್ ಮಾತ್ರ ಇದನ್ನು ಒಪ್ಪುವುದಿಲ್ಲ. ಇಲ್ಲಿನ ಬಿಜೆಪಿ ಅಭ್ಯರ್ಥಿ ಲಲ್ಲೂ ಸಿಂಗ್​ರನ್ನು ಸೋಲಿಸುವುದೇ ಮಹಾಮೈತ್ರಿಯ ಗುರಿ. ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿಯ ಮೂವರೂ ಒಟ್ಟಾಗಿ ಪ್ರಚಾರ ನಡೆಸುತ್ತಿದ್ದೇವೆ. ಹಿಂದೆ ನಮ್ಮ ಮಧ್ಯೆ ಪರಸ್ಪರ ದ್ವೇಷ ಭಾವನೆಗಳಿದ್ದವು. ಆದರೆ, ಈಗ ಹಾಗಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ.

‘ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಮೋದಿ ಸರ್ಕಾರ ಜಾರಿ ಮಾಡಿದ್ದ ಜನೋಪಯೋಗಿ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಉತ್ತರ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿದೆ. ಉಜ್ವಲಾ, ಆಯುಷ್ಮಾನ್ ಭಾರತ್, ಕನಿಷ್ಠ ಬೆಂಬಲ ಬೆಲೆ ಯೋಜನೆಗಳಿಂದ ಹಿಂದುಳಿದ ವರ್ಗದ ಅನೇಕರಿಗೆ ಲಾಭವಾಗಿದೆ. ಹೀಗಾಗಿ, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದ ಮಹಾಮೈತ್ರಿಯ ಮೂಲ ಮತದಾರರಲ್ಲಿ ಕೇಂದ್ರ ಯೋಜನೆಗಳ ಫಲಾನುಭವಿ ಮತದಾರರು ಮತ್ತು ಅವರ ಕುಟುಂಬಸ್ಥರು ಬಿಜೆಪಿಯನ್ನೇ ಬೆಂಬಲಿಸಲಿದ್ದಾರೆ. ಮಹಾಮೈತ್ರಿ ಕಾಗದದಲ್ಲಿ ಪರಿಣಾಮಕಾರಿಯಾಗಿದೆಯಷ್ಟೇ. ಗ್ರಾಮೀಣ ಭಾಗದ ಜನರ ಮಧ್ಯೆ ಬೇರೆಯೇ ಚಿತ್ರಣವಿದೆ. ಚುನಾವಣೆ ಫಲಿತಾಂಶಗಳು ಬಂದಾಗ ನೀವು ನನ್ನ ಮಾತನ್ನು ಒಪ್ಪಲಿದ್ದೀರಿ’ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿ ಸಮಿತಿ ಸದಸ್ಯ ಭುವನ್ ಭೂಷಣ್ ಸವಾಲು ಹಾಕುತ್ತಾರೆ.

ಸೋತರೆ ನಾಯಕರ ಕಿತ್ತಾಟ

‘ಉತ್ತರ ಪ್ರದೇಶದ ಪ್ರಭಾವಿ ಜಾಟರು ದಲಿತರನ್ನು ಬೆಂಬಲಿಸುವುದು ದೂರದ ಮಾತು. ಜಾಟ್ ಅಭ್ಯರ್ಥಿಗೆ ವೋಟು ಹಾಕಿ ಎಂದು ಮಾಯಾವತಿ ಪ್ರಚಾರ ಮಾಡುತ್ತಾರಾ’ ಎಂದು ನಗುತ್ತಾರೆ ವೃಂದಾವನ ನಿವಾಸಿ ಗೋವಿಂದ್ ಪಾಂಡೆ. ಆರ್​ಎಲ್​ಡಿಯನ್ನು ಮಹಾಮೈತ್ರಿಗೆ ಸೇರಿಸಿಕೊಳ್ಳುವುದು ಸಮಾಜವಾದಿ ಪಾರ್ಟಿ ನಿರ್ಧಾರವಾಗಿತ್ತೇ ವಿನಃ ಇದಕ್ಕೆ ಮಾಯಾವತಿ ಪೂರ್ಣ ಸಮ್ಮತಿ ಇರಲಿಲ್ಲ. ಒಂದುವೇಳೆ ನಿರೀಕ್ಷಿತ ಸೀಟುಗಳು ಬರದಿದ್ದಲ್ಲಿ ಲೋಕಸಭೆ ಚುನಾವಳೆ ಫಲಿತಾಂಶ ಹೊರಬಿದ್ದ ದಿನವೇ ಮಾಯಾವತಿ-ಅಖಿಲೇಶ್ ಕಿತ್ತಾಡಿಕೊಳ್ಳಲಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೇ ಮಾತನಾಡಿಕೊಳ್ಳುತ್ತಿದ್ದಾರೆ!

ಕರ್ನಾಟಕದ ಮಾದರಿಯ ಒಳಜಗಳ!

ಹಾಗೆ ನೋಡಿದರೆ, ಉತ್ತರ ಪ್ರದೇಶದ ಈಗಿನ ಮಹಾಘಟಬಂಧನಕ್ಕೂ ಕರ್ನಾಟಕದ ಜೆಡಿಎಸ್- ಕಾಂಗ್ರೆಸ್ ಮಹಾಮೈತ್ರಿಯ ದಯನೀಯ ಸ್ಥಿತಿಗೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ ಎಂದನಿಸುವುದು ಸಹಜವೇ. ಏಕೆಂದರೆ, ಉ.ಪ್ರದೇಶದಲ್ಲೂ ಎಸ್​ಪಿ-ಬಿಎಸ್​ಪಿ ಮಧ್ಯೆ ಸಮನ್ವಯದ ಕೊರತೆ ಎದ್ದುಕಾಣುತ್ತಿದೆ. ಟಿಕೆಟ್ ಹಂಚಿಕೆಯಲ್ಲೇ ಇದು ಬಯಲಾಗಿದೆ. ಸಮಾಜವಾದಿ ಮುಖಂಡರೊಂದಿಗೆ ರ್ಚಚಿಸದೆಯೇ ಮಾಯಾವತಿ ಕೆಲ ಅಭ್ಯರ್ಥಿಗಳಿಗೆ ತಮ್ಮಿಷ್ಟದ ಕ್ಷೇತ್ರಗಳಿಗೆ ಟಿಕೆಟ್ ಘೊಷಿಸಿರುವುದು ಅಖಿಲೇಶ್ ಆಕ್ರೋಶಕ್ಕೆ ಕಾರಣವಾಗಿದೆ. ಅಖಿಲೇಶ್ ತಮ್ಮ ಸೋದರ ಮತ್ತು ಮೈನ್​ಪುರಿ ಕ್ಷೇತ್ರದ ಸಂಸದ ತೇಜ್ ಪ್ರತಾಪ್ ಸಿಂಗ್ ಯಾದವ್​ರನ್ನು ಜೌನ್​ಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಸಿದ್ಧತೆ ನಡೆಸಿದ್ದರು. ಆದರೆ, ಹಠಾತ್ ಬೆಳವಣಿಗೆಯಲ್ಲಿ ಮಾಯಾವತಿ ಈ ಕ್ಷೇತ್ರದ ಟಿಕೆಟ್​ನ್ನು ಬಿಎಸ್​ಪಿಯ ಶ್ಯಾಮ್ ಸಿಂಗ್ ಯಾದವ್​ಗೆ ನೀಡಿರುವುದರಿಂದ ಸಮಾಜವಾದಿಗಳು ಸಿಟ್ಟಾಗಿದ್ದಾರೆ. ಮೈನ್​ಪುರಿಯಿಂದ ಮುಲಾಯಂ ಸಿಂಗ್ ಯಾದವ್ ಸ್ಪರ್ಧಿಸುತ್ತಿರುವುದರಿಂದ ತೇಜ್​ಪ್ರತಾಪ್​ಗೆ ಜೌನ್​ಪುರ ಟಿಕೆಟ್ ನೀಡಬೇಕೆಂದು ಅಖಿಲೇಶ್ ಉದ್ದೇಶಿಸಿದ್ದರು ಮತ್ತು ಇದನ್ನು ಮಾಯಾವತಿಗೆ ತಿಳಿಸಿದ್ದರು ಕೂಡ. ಆದರೆ ಮಾಯಾವತಿ ಅಖಿಲೇಶ್ ಮಾತಿಗೆ ಮಾನ್ಯತೆ ನೀಡದಿರುವುದರಿಂದ ಯಾದವರ ಕೋಪ ನೆತ್ತಿಗೇರಿದೆ. ರೌಡಿ ಶೀಟರ್ ಮುಖ್ತಾರ್ ಅನ್ಸಾರಿ ಸಹೋದರ ಅಫ್ಜಲ್ ಅನ್ಸಾರಿಗೆ ಗಾಜಿಪುರ ಟಿಕೆಟ್ ನೀಡಿರುವುದೂ ಅಖಿಲೇಶ್​ಗೆ ಸಮಾಧಾನ ತಂದಿಲ್ಲ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್-ದಲಿತರ ಕಿತ್ತಾಟ ಹೊಸದೇನಲ್ಲ. ಪ.ಉ.ಪ್ರದೇಶದ ಮಥುರಾದಲ್ಲೂ ಈ ಎರಡು ಸಮುದಾಯಗಳ ಮಧ್ಯೆ ಸಮನ್ವಯವಿಲ್ಲ. ಕ್ಷೇತ್ರದ ಆರ್​ಎಲ್​ಡಿ ಅಭ್ಯರ್ಥಿ ಪರ ರ‍್ಯಾಲಿ ನಡೆಸಲು ಆರಂಭದಲ್ಲಿ ಮಾಯಾವತಿ ಚಿಂತನೆ ನಡೆಸಿದ್ದರಾದರೂ, ಕೊನೆಕ್ಷಣದಲ್ಲಿ ರ್ಯಾಲಿಯನ್ನು ರದ್ದುಗೊಳಿಸಿದ್ದು ಆರ್​ಎಲ್​ಡಿಯ ಅಸಮಾಧಾನಕ್ಕೆ ಎಡೆಮಾಡಿದೆ. ಹಾಗಿದ್ದರೂ, ಮತದಾನದ ಮೇಲೆ ಇದು ಪರಿಣಾಮ ಬೀರುವುದು ಬೇಡ ಎಂದು ಆರ್​ಎಲ್​ಡಿ ಮುಖಂಡರು ಸುಮ್ಮನಾಗಿದ್ದಾರೆ.

| ರಾಘವ ಶರ್ಮನಿಡ್ಲೆ,  ಲಖನೌ

- Advertisement -

Stay connected

278,480FansLike
564FollowersFollow
608,000SubscribersSubscribe

ವಿಡಿಯೋ ನ್ಯೂಸ್

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....

VIDEO: ಅವಿಸ್ಮರಣೀಯ ಕ್ಷಣಗಳು:...

ಹ್ಯೂಸ್ಟನ್​: ಇಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಹೌಡಿ ಮೋದಿ ಕಾರ್ಯಕ್ರಮ ಮುಗಿದ ಬಳಿಕ ವೇದಿಕೆಯಿಂದ ಇಳಿದ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ತೆರಳುತ್ತಿದ್ದರು. ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ...

VIDEO: ಅಮೆರಿಕ ತಲುಪಿದ...

ಹ್ಯೂಸ್ಟನ್​: ಪ್ರಧಾನಿ ನರೇಂದ್ರ ಮೋದಿ ಶನಿವಾರ ಅಮೆರಿಕ ತಲುಪಿದರು. ಹ್ಯೂಸ್ಟನ್​ನ ಜಾರ್ಜ್ ಬುಷ್​ ಇಂಟರ್​ಕಾಂಟಿನೆಂಟಲ್​ ಏರ್​ಪೋರ್ಟ್​ಗೆ ಬಂದಿಳಿದ ಅವರನ್ನು ಭಾರತದಲ್ಲಿನ ಅಮೆರಿಕ ರಾಯಭಾರಿ ಕೆನ್ನೆತ್​ ಜಸ್ಟರ್​, ಅಮೆರಿಕದಲ್ಲಿನ ಭಾರತದ ರಾಯಭಾರಿ...

ಹೈಕೋರ್ಟ್ ಜಡ್ಜ್​ ವಿರುದ್ಧ...

ಹೈದರಾಬಾದ್​: ಹೈಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ನೂಟಿ ರಾಮಮೋಹನ ರಾವ್​ ವಿರುದ್ಧ ಅವರ ಸೊಸೆಯೇ ಕೌಟುಂಬಿಕ ದೌರ್ಜನ್ಯದ ದೂರು ದಾಖಲಿಸಿದ್ದಾರೆ. ಬರೀ ಮಾವನ ವಿರುದ್ಧವಷ್ಟೇ ಅಲ್ಲದೆ, ಅತ್ತೆ ನೂಟಿ ದುರ್ಗಾ ಜಯ ಲಕ್ಷ್ಮೀ ಮತ್ತು...

ಉಪಚುನಾವಣೆಯಲ್ಲಿ ಮೈತ್ರಿ ಕುರಿತು...

ಬೆಂಗಳೂರು: ಉಪಚುನಾವಣೆಯಲ್ಲಿ ಎಲ್ಲಾ 15 ಕ್ಷೇತ್ರಗಳಲ್ಲಿ ಜೆಡಿಎಸ್​ ಏಕಾಂಗಿಯಾಗಿ ಸ್ಪರ್ಧಿಸಲಿದೆ. ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದು ಜೆಡಿಎಸ್​ ಟ್ವೀಟ್​ ಮಾಡಿದೆ. ಇದರ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿದ...

ಮಸ್ಕಿ ಮತ್ತು ಆರ್​.ಆರ್​....

ಬೆಂಗಳೂರು: ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳ ಜತೆಯಲ್ಲೇ ರಾಜ್ಯದಲ್ಲಿ ತೆರವಾಗಿದ್ದ 17 ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳಿಗೆ ಚುನಾವಣಾ ಆಯೋಗ...

ಅಕ್ರಮ ಹಣ ಪತ್ತೆ...

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಸೆ.25ಕ್ಕೆ ಕಾಯ್ದಿರಿಸಲಾಗಿದೆ. ಇಂದು ಇ.ಡಿ. ವಿಶೇಷ...