ಬಿಎಸ್​ಎನ್​ಎಲ್ ನೌಕರರ ಪ್ರತಿಭಟನೆ

ವಿಜಯಪುರ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಎಸ್​ಎನ್​ಎಲ್ ನೌಕರರು ಮಂಗಳವಾರ ನಗರದ ಬಿಎಸ್​ಎನ್​ಎಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಿಎಸ್​ಎನ್​ಎಲ್ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಆರ್. ನಾಯಕ ಮಾತನಾಡಿ, ಕೇಂದ್ರ ಸರ್ಕಾರದ ಅಂಗಸಂಸ್ಥೆಯಾದ ಟೆಲಿಕಾಂ ಇಲಾಖೆಯನ್ನು 18 ವರ್ಷಗಳ ಹಿಂದೆ ಸಾರ್ವಜನಿಕ ಉದ್ದಿಮೆಯನ್ನಾಗಿ ಮಾರ್ಪಾಡು ಮಾಡಲಾಯಿತು. ನೌಕರರ ಭದ್ರತೆಯಲ್ಲಿ ಬಿಎಸ್​ಎನ್​ಎಲ್ ತಾರತಮ್ಯ ಎಸಗುತ್ತಿದೆ. ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಸಂಸ್ಥೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂದು ಒತ್ತಾಯಿಸಿದರು. ಜಿ.ಎಸ್. ಸಾಲಕ್ಕಿ, ಎಲ್.ಎಲ್. ಕುಲಕರ್ಣಿ, ಎಂ.ಜಿ. ಬಿಜ್ಜರಗಿ, ವಿ.ಆರ್. ತೇಲಗಾರ, ಬಿ.ಡಿ. ನಾಯಕ ಇನ್ನಿತರರಿದ್ದರು.