ಜಮಖಂಡಿಯಲ್ಲಿ ನೂರಕ್ಕೆ ನೂರು ಗೆಲುವು ನಮ್ಮದೆ: ಬಿ.ಎಸ್​.ಯಡಿಯೂರಪ್ಪ

ಬಾಗಲಕೋಟೆ: ಬಳ್ಳಾರಿ, ಶಿವಮೊಗ್ಗ ಚುನಾವಣೆಯಲ್ಲಿ ಗೆದ್ದಿದ್ದೇವೆ. ಮಂಡ್ಯದಲ್ಲೂ ಭಾರಿ ಸ್ಪಂದನೆ ಸಿಕ್ಕಿದೆ. ಇನ್ನೊಮ್ಮೆ ಅಲ್ಲಿಗೆ ಪ್ರಚಾರಕ್ಕೆ ಹೋಗುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಹೇಳಿದರು.

ಜಮಖಂಡಿ ಕ್ಷೇತ್ರದಲ್ಲಿ ಉಪಚುನಾವಣೆ ಪ್ರಚಾರಕ್ಕೆ ತೆರಳಿರುವ ಅವರು ಮುಧೋಳದಲ್ಲಿ ಮಾತನಾಡಿ, ಜಮಖಂಡಿ ಕ್ಷೇತ್ರದಲ್ಲಿ ನೂರಕ್ಕೆ ನೂರು ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ. ಸಂಗಮೇಶ್​ ನಿರಾಣಿ ಇಂದಿನಿಂದ ಪ್ರಚಾರಕ್ಕೆ ಬರಲಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎಂದರು.
ಸ್ಟಾರ್​ ಪ್ರಚಾರಕರ ಹೆಸರಿನ ಪಟ್ಟಿಯಲ್ಲಿ ಕೇಂದ್ರ ಸಚಿವ ಅನಂತ್​ಕುಮಾರ್​ ಹೆಗಡೆ ಹೆಸರು ಇಲ್ಲದೆ ಇರುವುದಕ್ಕೆ ಬೇರೆ ಯಾವುದೇ ಕಾರಣವಿಲ್ಲ. ಅವರಿಗೆ ಸಾಕಷ್ಟು ಕೆಲಸಗಳು ಇವೆ. ಅವರಿಗೆ ಪ್ರಧಾನಿ ಮೋದಿಯವರು ಕೆಲವು ಜವಾಬ್ದಾರಿಯನ್ನು ನೀಡಿದ್ದಾರೆ ಎಂದು ಹೇಳಿದರು.

ವಾಲ್ಮೀಕಿ ಜಯಂತಿ ಆಚರಣೆ

ಮಾಜಿ ಸಚಿವ ಮುರುಗೇಸ್​ ನಿರಾಣಿ ನಿವಾಸದಲ್ಲಿ ವಾಲ್ಮೀಕಿ ಜಯಂತಿ ನಿಮಿತ್ತ ಅವರ ಭಾವಚಿತ್ರಕ್ಕೆ ಗೌರವಾರ್ಪಣೆ ಸಲ್ಲಿಸಲಾಯಿತು. ಹುನ್ನೂರು, ಆಲಗೂರು, ತೊದಲಬಾಗಿ, ಜಮಖಂಡಿಯಲ್ಲಿ ಪ್ರಚಾರ ಸಭೆ ನಡೆಯಿತು. ಜಮಖಂಡಿಯಲ್ಲಿ ಸಂಜೆ ಬೃಹತ್​ ರ‍್ಯಾಲಿ ನಡೆಯಲಿದೆ.