ಕೆಲವೇ ದಿನಗಳಲ್ಲಿ ಬಿಎಸ್‌ವೈ ಮುಖ್ಯಮಂತ್ರಿ

ಉಳ್ಳಾಲ: ಭಾರತವನ್ನು ಜಗತ್ತು ಗುರುತಿಸಬೇಕು ಎನ್ನುವ ಭಾರತೀಯರ ಹಲವಾರು ವರ್ಷಗಳ ಪ್ರಾರ್ಥನೆ ನರೇಂದ್ರ ಮೋದಿ ಪ್ರಧಾನಿಯಾಗುವ ಮೂಲಕ ಈಡೇರಿದೆ. ಜಿಲ್ಲೆಯಲ್ಲೂ ಬಿಜೆಪಿ ಬಲವರ್ಧನೆಯಾಗಿ ಭದ್ರಕೋಟೆಯಾಗಿ ಪರಿವರ್ತನೆಯಾಗಿದೆ. ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಕುರ್ನಾಡು ಶಕ್ತಿಕೇಂದ್ರ ವತಿಯಿಂದ ಬಿಜೆಪಿ ಕ್ಷೇತ್ರಾಧ್ಯಕ್ಷರ ಮನೆಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಬಿಜೆಪಿ ಪಕ್ಷವನ್ನು ವಾಟ್ಸಾಪ್, ಬ್ಯಾನರ್, ಕಟೌಟ್ ಮೂಲಕ ಕಟ್ಟಿಲ್ಲ. ಪ್ರಾಮಾಣಿಕ ಕಾರ್ಯಕರ್ತರು ಬೆವರು ಹರಿಸಿದ ಫಲವಾಗಿದ್ದು, ಪ್ರಾಮಾಣಿಕ ಕಾರ್ಯಕರ್ತ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಅಮೆರಿಕದಲ್ಲಿ ಕೆಂಪು ಹಾಸಿನ ಸ್ವಾಗತ ಸಿಕ್ಕಿದ್ದು ನರೇಂದ್ರ ಮೋದಿ ಅವರಿಗೆ ಮಾತ್ರ. ಇದು ಜಗತ್ತೇ ದೇಶವನ್ನು ಗುರುತಿಸಿದೆ ಎನ್ನುವುದಕ್ಕೆ ಸಾಕ್ಷಿ ಎಂದರು.