28.5 C
Bengaluru
Monday, January 20, 2020

ಬೃಹದಶ್ವರ ಹಿತನುಡಿಗಳು

Latest News

ವಿಪಕ್ಷ ನಾಯಕ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಲಿ: ಜಿ. ಪರಮೇಶ್ವರ್

ಬೆಂಗಳೂರು: ವಿಪಕ್ಷ ನಾಯಕ ಸ್ಥಾನ ಮತ್ತು ಕಾಂಗ್ರಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಪ್ರತ್ಯೇಕವಾಗಿರಲಿ ಎಂಬ ಅಭಿಪ್ರಾಯವನ್ನು ಹಿರಿಯ ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್...

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಗುರುತು ಪತ್ತೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ಚಿತ್ರ ಸಿಸಿಟಿವಿಯಲ್ಲಿ ಸೆರೆಯಾಗಿದೆ.ವಿಮಾನ ನಿಲ್ದಾಣದಲ್ಲಿರುವ ಸಿಸಿಟಿವಿಯಲ್ಲಿ ಬಾಂಬ್​ ಇಟ್ಟ ವ್ಯಕ್ತಿಯ ದೃಶ್ಯ ಪತ್ತೆಯಾಗಿದೆ.ಶಂಕಿತ...

ವಸತಿ ಸಹಾಯಧನ ಹೆಚ್ಚಳ ಕೋರಿ ಪ್ರಧಾನಿ ಬಳಿ ರಾಜ್ಯದ ನಿಯೋಗ : ವಸತಿ ಸಚಿವ ವಿ.ಸೋಮಣ್ಣ

ಬೆಂಗಳೂರು: ವಿಧಾನ ಸೌಧ ಕೊಠಡಿಯಲ್ಲಿ ಬೆಂಗಳೂರು ನಗರ ವಸತಿ ಯೋಜನೆ ಕುರಿತು ಸಂಸದ, ಶಾಸಕರ ಸಭೆಯಲ್ಲಿ ಸೋಮವಾರ ಈ ವಿಷಯ ತಿಳಿಸಿದರು.ಕೇಂದ್ರ ಸಹಾಯಧನ...

ಜೂಜುಕೋರರ ಗಡಿಪಾರು ಖಚಿತ: ಎಸ್‌ಪಿ ವಂಶಿಕೃಷ್ಣ ಎಚ್ಚರಿಕೆ

ಪಾವಗಡ: ಮಟ್ಕಾ ಮತ್ತು ಇಸ್ಪೀಟು ಆಡುವವರನ್ನು ಮತ್ತು ಆಡಿಸುವವರನ್ನು ಗಡಿಪಾರು ವಾಡಲು ಪೊಲೀಸ್ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಎಸ್‌ಪಿ ಡಾ.ಕೆ.ವಂಶಿಕೃಷ್ಣ...

ವಿಶ್ವಶಾಂತಿಗೆ ಸಂತರ ಮಾರ್ಗದರ್ಶನ ಅಗತ್ಯ: ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

ತುಮಕೂರು: ವಿಶ್ವವೇ ಸಂಕಷ್ಟದ ಸನ್ನಿವೇಶದಲ್ಲಿದ್ದು ಜನರ ಭಯ ತೊಲಗಿಸಲು ಸುಖ-ಶಾಂತಿ ನೆಲೆಸಲು ಸಂತರ ಮಾರ್ಗದರ್ಶನ ಅಗತ್ಯವಿದೆ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ಸಿದ್ಧಗಂಗಾ...

ಪಾಪ ಮಾಡಿದ ವ್ಯಕ್ತಿ ತನಗಿಂತಲೂ ಹೆಚ್ಚು ಪಾಪ ಮಾಡಿದವರನ್ನು ಕಂಡರೆ ಪಾಪ ಮಾಡುವುದಕ್ಕೆ ಮತ್ತಷ್ಟು ಧೈರ್ಯ ಹೆಚ್ಚುತ್ತದೆ. ಹಾಗಾಗಿ ಪಾಪ ಮಾಡಿದವನು ಪಾಪ ಮಾಡದವರು ಯಾರಿದ್ದಾರೆಂದು ಹುಡುಕಬೇಕು; ದುಃಖದಲ್ಲಿರುವವನು ತನಗಿಂತಲೂ ಹೆಚ್ಚು ದುಃಖದಲ್ಲಿರುವವರನ್ನು ಕಂಡು ಸಮಾಧಾನಪಡಬೇಕು. ಒಂದುವೇಳೆ ಪಾಪಿಯಾದವನು ತನಗಿಂತಲೂ ಹೆಚ್ಚು ಪಾಪ ಮಾಡಿದವರನ್ನೇ ಹುಡುಕುತ್ತಿದ್ದರೆ ಪಾಪಬುದ್ಧಿ ಮತ್ತಷ್ಟು ಬೆಳೆಯಲು ಅವಕಾಶವಾಗುತ್ತದೆ.

‘ದುಃಖೀ ದುಃಖಾಧಿಕಂ ಪಶ್ಯೇತ್

ಪಾಪೀ ಪಾಪಾಧಿಕಂ ನ ತು |’

ಹಾಗಾಗಿ ಪಾಪಕರ್ಮಗಳನ್ನೆಸಗಿದ ವ್ಯಕ್ತಿ ಪಶ್ಚಾತ್ತಾಪದಿಂದ ಪುಣ್ಯಾತ್ಮರು ಯಾರಿದ್ದಾರೆಂದು ಹುಡುಕಿ, ಅವರನ್ನು ಕಂಡು ಅವರಿಂದ ಸ್ಪೂರ್ತಿ ಪಡೆದು ತನ್ನ ತಪ್ಪನ್ನು ತಿದ್ದಿಕೊಳ್ಳಬೇಕು. ಹಾಗಾಗಿಯೇ ಧರ್ಮರಾಜನು ‘ನಮಗಿಂತಲೂ ಹೆಚ್ಚು ದುಃಖಪಟ್ಟವರು ಯಾರಿದ್ದಾರೆ?’ ಎಂದು ಬೃಹದಶ್ವರನ್ನು ಪ್ರಶ್ನಿಸಿದನು. ಬೃಹದಶ್ವರು ಧರ್ಮರಾಜನನ್ನು ಕುರಿತು ನಾನು ಹೇಳುವುದನ್ನು ಗಮನವಿಟ್ಟು ಕೇಳೆಂದು ಹೇಳಿ ತಮ್ಮ ಮಾತುಗಳನ್ನು ಆರಂಭಿಸಿದರು:

ನಳಚರಿತೆ: ‘ನಿಷಧದೇಶದಲ್ಲಿ ವೀರಸೇನನ ಮಗನಾದ ನಳ ಎಂಬ ರಾಜನಿದ್ದನು. ನಳಚಕ್ರವರ್ತಿ ತನ್ನ ರಾಜ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ಆಳುತ್ತಿದ್ದನು. ಒಮ್ಮೆ

ಆ ನಳಚಕ್ರವರ್ತಿಯೂ ನಿನ್ನಂತೆಯೇ ಶತ್ರುಗಳ ಮೋಸದ ಜಾಲಕ್ಕೆ ಸಿಲುಕಿ ಜೂಜಾಟದಿಂದ ತನ್ನ ರಾಜ್ಯವನ್ನೆಲ್ಲ ಕಳೆದುಕೊಂಡು ರಾಜ್ಯಭ್ರಷ್ಟನಾದನು. ನಿನಗಿಂತಲೂ ಹೀನ ಸ್ಥಿತಿಯನ್ನು ತಲುಪಿದನು. ನೀನಾದರೂ ಋಷಿಮುನಿಗಳೊಂದಿಗೆ ಆರಾಮವಾಗಿ ವಾಸಿಸುತ್ತಿರುವೆ! ಪ್ರತಿನಿತ್ಯವೂ ಸಾವಿರಾರು ಜನರಿಗೆ ಅನ್ನದಾನ ಮಾಡುತ್ತಿರುವೆ. ಜೊತೆಗೆ ನಿನ್ನ ಸಹೋದರರೂ ಇದ್ದಾರೆ. ಆದರೆ ನಳನ ಜೊತೆಯಲ್ಲಿ ಯಾರೂಬ್ಬರೂ ಇರಲಿಲ್ಲ. ಇದ್ದ ಒಬ್ಬಳು ಪತ್ನಿಯನ್ನೂ ಕಳೆದುಕೊಂಡು ಒಬ್ಬಂಟಿಗನಾಗಿ ಕಾಡಿನಲ್ಲಿ ಅತ್ಯಂತ ಕಠಿಣವಾದ ದುಃಖ ಅನುಭವಿಸಿದನು. ಆದರೆ ನಿನ್ನೊಂದಿಗೆ ದೇವಪುರುಷರಂತಿರುವ ನಿನ್ನ ಸಹೋದರರಿದ್ದಾರೆ ಹಾಗೂ ಜ್ಞಾನಿಶ್ರೇಷ್ಠರಾದ ಋಷಿಮುನಿಗಳಿದ್ದಾರೆ. ಆದರೆ ನಳಚಕ್ರವರ್ತಿ ಏಕಾಕಿಯಾಗಿ, ಬಂದ ದುಃಖವನ್ನೆಲ್ಲ ಎದುರಿಸಿ ಮರಳಿ ತನ್ನ ರಾಜ್ಯ ಪಡೆದನು. ಅಂತಹ ನಳನ ಚರಿತ್ರೆಯನ್ನು ಕೇಳಿದರೆ ಖಂಡಿತವಾಗಿಯೂ ನಿನ್ನ ದುಃಖಗಳೆಲ್ಲ ಪರಿಹಾರವಾಗುತ್ತವೆ ಹಾಗೂ ಮುಂದೆ ಎದುರಾಗುವ ದುಃಖಗಳನ್ನೂ ಸಹಿಸಿಕೊಳ್ಳುವ ಶಕ್ತಿ ನಿನ್ನಲ್ಲಿ ಉಂಟಾಗುತ್ತದೆ.’

ಮಹಾಭಾರತದ ಮೂಲ ಉದ್ದೇಶವೇನು?: ಮಹಾಭಾರತದ ಪ್ರತಿಯೊಂದು ಘಟನೆಗಳಿಂದಲೂ ನಾವು ಕಲಿಯಬೇಕಾದ ಪಾಠ ಬಹಳಷ್ಟಿವೆ. ವನಪರ್ವದಲ್ಲಿ ಬರುವ ಅನೇಕ ಉಪಾಖ್ಯಾನಗಳ ಮೂಲಕ ಬೇರೆ ಬೇರೆ ವ್ಯಕ್ತಿಗಳ ನಡವಳಿಕೆಯಿಂದ ನಮ್ಮ ಜೀವನದಲ್ಲಿಯೂ ನಮ್ಮ ವ್ಯಕ್ತಿತ್ವ ಹೇಗಿರಬೇಕು ಹಾಗೂ ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಪರಿಹಾರವನ್ನು ಕಂಡುಕೊಳ್ಳುವ ಉಪಾಯವೇನು ಮತ್ತು ನಮ್ಮ ವರ್ತನೆ, ಚಾರಿತ್ರ್ಯಳು ಹೇಗಿರಬೇಕು ಎಂಬುದರ ಶಿಕ್ಷಣವನ್ನು ಹೆಜ್ಜೆ ಹೆಜ್ಜೆಗೂ ಕಾಣಬಹುದು. ಮಾನವನ ಆಧ್ಯಾತ್ಮಿಕ, ಹಾಗೂ ಭೌತಿಕ ಜೀವನಕ್ಕೆ ಬೇಕಾದ ಸ್ಪೂರ್ತಿಯನ್ನು ತುಂಬುವುದೇ ಮಹಾಭಾರತದ ಮೂಲ ಉದ್ದೇಶವಾಗಿರುವುದರಿಂದ ಮಹಾಭಾರತ ಕೇವಲ ಭಕ್ತಿ, ದೇವರು, ಪಾಂಡವರು, ಕೌರವರು ಇಷ್ಟಕ್ಕೆ ಮಾತ್ರ ಸೀಮಿತವಾದದ್ದೆಂದು ಭಾವಿಸಬಾರದು.

 

ವಿಡಿಯೋ ನ್ಯೂಸ್

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...

VIDEO| ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ;...

ಮಂಗಳೂರು: ಬಜಪೆ ಬಳಿಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿಶ್ರಾಂತಿ ಜಾಗದಲ್ಲಿ ಅನುಮಾನಾಸ್ಪದ ಬ್ಯಾಗ್​ನಲ್ಲಿ ಸಜೀವ ಬಾಂಬ್​ ಪತ್ತೆಯಾಗಿದೆ. ಏರ್ ಪೋರ್ಟ್ ಹೊರಭಾಗದಲ್ಲಿರುವ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಬ್ಯಾಗ್​ ಪತ್ತೆಯಾಗಿದ್ದು, ಬೆಳಗ್ಗೆ 10.30ರಿಂದ ಅದು...

Fact Check| ಮಹಿಳೆ, ಮಕ್ಕಳ ಮೇಲೆ ಪೊಲೀಸ್​ ದೌರ್ಜನ್ಯ: ವೈರಲ್...

ನವದೆಹಲಿ: ಪುರುಷ, ಮಹಿಳೆ ಹಾಗೂ ಮಕ್ಕಳ ಮೇಲೆ ಪೊಲೀಸ್​ ಸಿಬ್ಬಂದಿ ಹಲ್ಲೆ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ ರಾಷ್ಟ್ರೀಯ ಪೌರತ್ವ ನೋಂದಣಿ ಅಡಿಯಲ್ಲಿ ಜನರನ್ನು ಮನೆಯಿಂದ ಒಕ್ಕಲೆಬ್ಬಿಸಲಾಗುತ್ತಿದೆ ಎಂದು...

VIDEO| ಉಪಮುಖ್ಯಮಂತ್ರಿಗಳ ಕೈಬಿಡುವ ವಿಚಾರ ವರಿಷ್ಠರಿಗೆ ಬಿಟ್ಟದ್ದು, ಸಿಎಂ ವಾಪಸ್​...

ಬೆಂಗಳೂರು: ಹಾಲಿ ಇರುವ ಇಬ್ಬರು ಉಪ ಮುಖ್ಯಮಂತ್ರಿಗಳನ್ನು ಕೈ ಬಿಟ್ಟು ಹೊಸ ಡಿಸಿಎಂಗಳ ನೇಮಕ ವಿಚಾರವಾಗಿ ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಡಿಸಿಎಂ ಡಾ. ಅಶ್ವತ್ಥ...

VIDEO| ವಂದೇ ಮಾತರಂ ಹೇಳದವರಿಗೆ ಭಾರತದಲ್ಲಿ ಬದುಕುವುದಕ್ಕೆ ಹಕ್ಕಿಲ್ಲ: ಕೇಂದ್ರ...

ಅಹಮದಾಬಾದ್​: ಒಂದೊಮ್ಮೆ ನೀವು ವಂದೇಮಾತರಂ ಹೇಳುವುದಿಲ್ಲ ಎಂದಾದರೆ ಭಾರತದಲ್ಲಿ ಬದುಕುವ ಹಕ್ಕು ಇರುವುದಿಲ್ಲ ಎಂದು ಕೇಂದ್ರ ಸಚಿವ ಪ್ರತಾಪ್ ಚಂದ್ರ ಸಾರಂಗಿ ಸೂರತ್​ನಲ್ಲಿ ಹೇಳಿದ್ದು ಈಗ ವಿವಾದಕ್ಕೀಡಾಗಿದೆ.    ಅವರು ಶನಿವಾರ ಪೌರತ್ವ...

VIDEO| ಜಮ್ಮು-ಕಾಶ್ಮೀರದ ಉಧಂಪುರದಲ್ಲೊಂದು ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ !

ಉಧಂಪುರ: ಜಮ್ಮು-ಕಾಶ್ಮೀರದ ಉಧಂಪುರದಲ್ಲಿ ಇದೇ ಮೊದಲ ಬಾರಿಗೆ ಚೈಲ್ಡ್ ಫ್ರೆಂಡ್ಲಿ ಪೊಲೀಸ್ ಸ್ಟೇಷನ್ ಕಾರ್ಯಾಚರಣೆ ಆರಂಭಿಸಿದೆ. ಈ ವಿಶೇಷ ಜುವೆನಿಲ್ ಪೊಲೀಸ್ ಘಟಕವನ್ನು ಭಾನುವಾರ ಉದ್ಘಾಟಿಸಲಾಗಿದೆ. ಮಕ್ಕಳಲ್ಲಿ ಪೊಲೀಸ್ ಠಾಣೆ...