ಕಲಘಟಗಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ ಹೆಂಡತಿಯನ್ನೇ ಕೊಲೆ ಮಾಡಿ, ಪರಾರಿ ಆಗಲು ಯತ್ನಿಸಿದವನನ್ನು ಗ್ರಾಮಸ್ಥರು ಹಿಡಿದು ಕಂಬಕ್ಕೆ ಕಟ್ಟಿ ಹಾಕಿದ ಘಟನೆ ತಾಲೂಕಿನ ಗಳಗಿ-ಹುಲಕೊಪ್ಪ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಗಳಗಿ ಹುಲಕೊಪ್ಪ ಗ್ರಾಮದ ನಿವಾಸಿ ಸಕ್ಕೂಬಾಯಿ ಬಸಪ್ಪ ಕಮ್ಮಾರ (35) ಕೊಲೆಯಾದ ಮಹಿಳೆ. ಶಿವಾಜಿ ಕಮ್ಮಾರ ಕೊಲೆ ಆರೋಪಿ. ಸಂಜೆ ವೇಳೆ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಶಿವಾಜಿ, ತಮ್ಮನ ಮನೆಗೆ ತೆರಳಿ ಆತನ ಹೆಂಡತಿ ಸಕ್ಕುಬಾಯಿ ಕೊರಳಿಗೆ ಹಗ್ಗ ಬೀಗಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಕೊಲೆ ಮಾಡಿ ನಂತರ ತಪ್ಪಿಸಿಕೊಳ್ಳಲು ಗ್ರಾಮಸ್ಥರು ಶಿವಾಜಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಭರಮನಿ, ಡಿವೈಎಸ್ಪಿ ಶಿವಾನಂದ ಕಟಗಿ, ಸಿಪಿಐ ಶ್ರೀಶೈಲ ಕೌಜಲಗಿ, ಪಿಎಸ್‌ಐ ಕರಿವೀರಪ್ಪನವರ ಹಾಗೂ ಸಿಬ್ಬಂದಿ ಭೇಟಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆಸ್ತಿ ವಿಚಾರಕ್ಕೆ ಸಹೋದರನ ಪತ್ನಿ ಕೊಲೆ

You Might Also Like
ಬೇಸಿಗೆಯಲ್ಲಿ ತಾಳೆ ಹಣ್ಣು ತಿನ್ನುವುದರಿಂದ ಸಿಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿದ್ರೆ ನೀವು ಅಚ್ಚರಿಪಡ್ತೀರಾ! Ice apple
Ice apple : ಸದ್ಯ ದೇಶದೆಲ್ಲಡೆ ರಣ ಬಿಸಿಲು ಸುಡುತ್ತಿದೆ. ಮಳೆಯಿಲ್ಲದೆ, ಬಿಸಿಲಿನ ಶಾಖಕ್ಕೆ ಜನರು…
ಈ 3 ರಾಶಿಯವರು ಯಾವುದೇ ಕಷ್ಟಕರ ಪರಿಸ್ಥಿತಿಯನ್ನು ಬಹಳ ಸುಲಭವಾಗಿ ಎದುರಿಸುತ್ತಾರಂತೆ! Zodiac Signs
Zodiac Signs : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ. ಹಿಂದು…
ಆಕಸ್ಮಿಕವಾಗಿ ಕಲ್ಲಂಗಡಿ ಹಣ್ಣಿನ ಬೀಜಗಳನ್ನು ತಿಂದ್ರೆ ನಿಮ್ಮ ದೇಹದಲ್ಲಿ ಏನೆಲ್ಲ ಬದಲಾವಣೆಯಾಗುತ್ತೆ ಗೊತ್ತಾ? Watermelon
Watermelon : ಬೇಸಿಗೆಯಲ್ಲಿ ಕಲ್ಲಂಗಡಿ ಅತ್ಯುತ್ತಮ ಹಣ್ಣು. ಬಿಸಿಲ ಬೇಗೆಯಲ್ಲಿ ನಮ್ಮ ದೇಹವನ್ನು ಹೈಡ್ರೀಕರಿಸಲು ಮತ್ತು…