ಮುರಿದು ಬಿದ್ದ ವಿದ್ಯುತ್ ಕಂಬ

ಮದ್ದೂರು: ಭಾನುವಾರ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ತಾಲೂಕಿನ ಚುಂಚೇಗೌಡದೊಡ್ಡಿ ಗ್ರಾಮದ ಬಳಿಯಿರುವ ಸಾರ್ವಜನಿಕ ಕಟ್ಟೆಗೆ ಎರಡು ವಿದ್ಯುತ್ ಕಂಬ ಮುರಿದು ಬಿದ್ದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಕೋಣಸಾಲೆ ಗ್ರಾಮದ ಬಳಿ ಇರುವ ಮರಿಯಯ್ಯ ಎಂಬುವರ ಗದ್ದೆಯ ಬಳಿ ಈ ಘಟನೆ ನಡೆದಿದ್ದು, ತೆಂಗಿನ ಮರ ಸುತ್ತಿಕೊಂಡ ವಿದ್ಯುತ್ ತಂತಿಗಳು ನೀರಿಗೆ ಬಿದ್ದಿವೆ.

ಘಟನೆ ನಡೆದು ಮೂರು ದಿನಗಳಾದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಪರಿಣಾಮ ಬೆಳೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ಸಂಬಂಧಿಸಿದವರು ಗಮನಹರಿಸಿ ವಿದ್ಯುತ್ ತಂತಿಗಳನ್ನು ತೆರವು ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *