Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಪೋಷಕಾಂಶಗಳ ಪೊಟ್ಟಣ ಬ್ರೊಕೋಲಿ

Monday, 13.08.2018, 9:56 AM       No Comments

| ಮಾನಸ, ವೇದ ಆರೋಗ್ಯ ಕೇಂದ್ರ, ಶಿರಸಿ, 9448729434

ಬ್ರೊಕೋಲಿಯು ಹೃದಯದ ಆರೋಗ್ಯಕ್ಕೆ ಅತ್ಯಂತ ಸಹಾಯಕಾರಿಯಾದ, ತುಂಬಾ ರುಚಿಕರವಾದ ತರಕಾರಿಗಳಲ್ಲೊಂದು. ಪೋಶಕಾಂಶಗಳ ಆಗರವೇ ಇದರಲ್ಲಿದೆ. ಇದನ್ನು ಪೋಷಕಾಂಶಗಳ ಪೊಟ್ಟಣ ಎಂದೇ ಕರೆಯಬಹುದು. ಇದು ಹಸಿರು ತರಕಾರಿ. ಕ್ಯಾಬೇಜ್ ಸಂಸಾರಕ್ಕೆ ಸೇರಿದ ತರಕಾರಿಗಳಲ್ಲೊಂದು.
ಬ್ರೊಕೋಲಿಯು ಕ್ಯಾನ್ಸರ್​ನಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಕ್ಯಾನ್ಸರ್​ಗೆ ಕಾರಣವಾಗಬಹುದಾದಂತಹ ಅಂಶಗಳನ್ನು ನಿವಾರಿಸಿ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸಂಶೋಧನೆಗಳು ತೋರಿಸಿದಂತೆ ಬ್ರೆಸ್ಟ್ ಕ್ಯಾನ್ಸರ್ ಹಾಗೂ ಯುಟರಸ್ ಕ್ಯಾನ್ಸರ್ ತಡೆಯುವಲ್ಲಿ ಬ್ರೊಕೋಲಿ ಪರಿಣಾಮಕಾರಿ. ಬ್ರೊಕೋಲಿಯು ನಾರಿನಂಶವನ್ನು ಹೊಂದಿದ್ದು, ಅನೇಕ ಕಾರ್ಯಗಳಿಗೆ ಸಹಕಾರಿ. ಈ ನಾರಿನಂಶವು ಕೆಟ್ಟ ಕೊಲೆಸ್ಟ್ರಾಲ್​ನ್ನು ದೇಹದಿಂದ ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಏಕೆಂದರೆ ನಾರಿನಂಶವು ಸರಿಯಾದ ಮಲವಿಸರ್ಜನೆಗೆ ಅನುವು ಮಾಡಿಕೊಡುತ್ತದೆ. ತನ್ಮೂಲಕ ಕೊಲೆಸ್ಟ್ರಾಲ್ ಹೊರಹೋಗಲು ಸಾಧ್ಯವಾಗುತ್ತದೆ.

ಇನ್​ಸ್ಟಿಟ್ಯೂಟ್ ಆಫ್ ಫುಡ್ ರಿಸರ್ಚ್​ನ ಸಂಶೋಧನೆಯ ಪ್ರಕಾರ ಬ್ರೊಕೋಲಿಯಿಂದ ರಕ್ತದಲ್ಲಿನ ಶೇ.6ರಷ್ಟು ಎಲ್.ಡಿ.ಎಲ್. ಕಡಿಮೆ ಮಾಡುತ್ತದೆ. ಸ್ವಲ್ಪ ಪ್ರಮಾಣದಲ್ಲಿ ಒಮೆಗಾ-3 ಮೇದಾಮ್ಲವನ್ನು ಬ್ರೊಕೋಲಿಯು ಆಂಟಿ ಇನ್​ಫ್ಲಮೇಟರಿ ಗುಣವನ್ನು ಹೊಂದಿದೆ. ಅರ್ಥರೈಟಿಸ್ ಇರುವವರಿಗೆ ಇದರ ಸೇವನೆ ಉತ್ತಮ. ಪರಿಣಾಮಕಾರಿ ಆಂಟಿ-ಆಕ್ಸಿಡೆಂಟ್​ಗಳು ಬ್ರೊಕೋಲಿಯಲ್ಲಿದೆ. ವಿಟಮಿನ್ ಸಿ ಯ ಉತ್ತಮ ಮೂಲ ಬ್ರೊಕೋಲಿ. ಮೂಳೆಗಳ ಆರೋಗ್ಯಕ್ಕೆ, ಆಸ್ಟಿಯೋಪೋರೋಸಿಸ್​ನಿಂದ ರಕ್ಷಿಸಲು ಇದು ಸಹಕಾರಿ. ಚರ್ಮದ ಆರೋಗ್ಯಕ್ಕೆ, ದೇಹವನ್ನು ಆಂತರ್ಯದಿಂದ ಶುದ್ಧೀಕರಿಸಲು, ಕಣ್ಣಿನ ರಕ್ಷಣೆಗೆ ಬ್ರೊಕೋಲಿ ಸಹಕಾರಿ. ಆದ್ದರಿಂದ ನಮ್ಮ ದಿನನಿತ್ಯದ ಆಹಾರಪದಾರ್ಥಗಳ ತಯಾರಿಕೆಯಲ್ಲಿ ಬ್ರೊಕೋಲಿಯನ್ನು ಬಳಸಬೇಕು.

Leave a Reply

Your email address will not be published. Required fields are marked *

Back To Top