More

  ಬೃಂದಾವನ ನಟಿ: ಕಾರ್ತಿಕಾ ಮದುವೆಯಲ್ಲಿ ಮಿಂಚಿದ​​​ ಸ್ಟಾರ್ಸ್​​​..!

  ‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ ನಟನೆಯ ‘ಬೃಂದಾವನ’ ಸಿನಿಮಾ ನೋಡಿದವರಿಗೆ ನಟಿ ಕಾರ್ತಿಕಾ ನಾಯರ್‌ ಅವರ ಪರಿಚಯ ಇದ್ದೇ ಇರುತ್ತದೆ. ಮೂಲತಃ ಮಲಯಾಳಂ ಕುಟುಂಬದ ಈ ನಟಿ ಮೊದಲು ಬಣ್ಣ ಹಚ್ಚಿದ್ದು ತೆಲುಗು ಸಿನಿಮಾದಲ್ಲಿ. ಆನಂತರ ತಮಿಳಿನ ‘ಕೋ’ ಚಿತ್ರದಲ್ಲಿ. ಕನ್ನಡ, ಮಲಯಾಳಂನಲ್ಲೂ ಮಿಂಚಿದ್ದಾರೆ.


  ಕಾರ್ತಿಕಾ ತಮಿಳು ಖ್ಯಾತ ನಟಿ ರಾಧಾ ಅವರ ಹಿರಿಯ ಪುತ್ರಿ, ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೆಲ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇಂದು ಮದುವೆಯನ್ನೂ ಮಾಡಿಕೊಂಡಿದ್ದಾರೆ.


  ನಟಿ ಕಾರ್ತಿಕಾ ಕಾಸರಗೋಡು ಮೂಲದ ರವೀಂದ್ರ ಮೆನನ್ ಹಾಗೂ ಶರ್ಮಿಳಾ ದಂಪತಿ ಪುತ್ರ ರೋಹಿತ್ ಮೆನನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.


  ಮದುವೆಗೆ ಟಾಲಿವುಡ್‌ನ ಮೆಗಾಸ್ಟಾರ್ ಚಿರಂಜೀವಿ ತಮ್ಮ ಕುಟುಂಬ ಸಮೇತ ಆಗಮಿಸಿದ್ದರು. ಹಾಗೇ ದಕ್ಷಿಣ ಭಾರತದ ಹಿರಿಯ ನಟಿಯರಾದ ಸುಹಾಸಿನಿ, ಅಂಬಿಕಾ, ರೇವತಿ ಸೇರಿದಂತೆ ನಟಿಯರು ಆಗಮಿಸಿದ್ದರು. ಇವರೊಂದಿಗೆ ಸ್ನೇಹಿತರು ಹಾಗೂ ಸಂಬಂಧಿಕರು, ರಾಜಕೀಯ ಮುಖಂಡರು ಈ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ನವ ಜೋಡಿಗಳಿಗೆ ಶುಭ ಹಾರೈಸಿದರು.

  ರಾಜ್ಯೋತ್ಸವ ರಸಪ್ರಶ್ನೆ - 21

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts