ಸಿನಿಮಾ

ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನ

ಹುಬ್ಬಳ್ಳಿ: ಅತಿ ದೊಡ್ಡ ಚಿನ್ನ ಮತ್ತು ವಜ್ರಾಭರಣಗಳ ಮಾರಾಟ ಸಂಸ್ಥೆ ಮಲಬಾರ್ ಗೋಲ್ಡೃ್ ಆ್ಯಂಡ್ ಡೈಮಂಡ್ಸ್ ವತಿಯಿಂದ ಇಲ್ಲಿಯ ಕೋಯಿನ್ ರಸ್ತೆ ಯು- ಮಾಲ್‌ನಲ್ಲಿರುವ ಶಾಖೆಯಲ್ಲಿ ಸೀಜನ್ 10ರ ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನಕ್ಕೆ ಅದ್ದೂರಿ ಚಾಲನೆ ನೀಡಲಾಯಿತು.


ಎನ್.ಎಸ್. ಟ್ರೇಡರ್ಸ್ ನಿರ್ದೇಶಕಿ ನಿಶಾದ ಅತ್ತಾರ ಮತ್ತು ಮೇಕಪ್ ಆರ್ಟಿಸ್ಟ್ ಫಾತಿಮಾ ಖಾನ್ ಅವರು ಅಭಿಯಾನ ಉದ್ಘಾಟಿಸಿದರು. ರೂಪದರ್ಶಿಗಳಾದ ಸುಷ್ಮಾ, ಶ್ರುತಿ, ಅಶ್ವಿನಿ, ಅರ್ಪಿತಾ ಇತರರು ಉಪಸ್ಥಿತರಿದ್ದರು.


ಬ್ರೈಡ್ಸ್ ಆಫ್ ಇಂಡಿಯಾ ಅಭಿಯಾನದಲ್ಲಿ ಭಾರತದ ವಿವಿಧ ವಧುಗಳ ಆಭರಣ ವಿನ್ಯಾಸಗಳುಳ್ಳ ವಿವಾಹ ಗೀತೆಯ ‘ಶೋ ದ ವೇ’ ವಿಡಿಯೋಗಳನ್ನು ಅನಾವರಣಗೊಳಿಸಲಾಯಿತು. ಗೀತೆಯಲ್ಲಿ ಚಿತ್ರ ತಾರೆಗಳಾದ ಆಲಿಯಾ ಭಟ್ ಮತ್ತು ಅನಿಲ ಕಪೂರ್ ಇವರು ಸಂಭ್ರಮಿಸಿದ್ದಾರೆ.

ಭಾರತೀಯ ಕಲೆ, ಸಂಸ್ಕೃತಿ, ಸಂಪ್ರದಾಯ, ಪರಂಪರೆಯ ಆಭರಣಗಳು ಅಭಿಯಾನದಲ್ಲಿ ಲಭ್ಯವಾಗಲಿವೆ. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸರಿಸಾಟಿಯಿಲ್ಲದ ಮೌಲ್ಯವನ್ನು ನೀಡುವ 10 ಭರವಸೆಯೊಂದಿಗೆ ನಿಮ್ಮ ಮೆಚ್ಚಿನ ವಿನ್ಯಾಸಗಳಿಗೆ ನ್ಯಾಯಯುತ ಬೆಲೆಗಳ ಭರವಸೆಯನ್ನು ಗ್ರಾಹಕರಿಗೆ ನೀಡುತ್ತಿದೆ.


ಅತಿ ಕಡಿಮೆ ತಯಾರಿಕಾ ಶುಲ್ಕ್ ಶೇ. 4.9ನಿಂದ ಪ್ರಾರಂಭಗೊಂಡು ಫೇರ್ ಪ್ರೈಸ್‌ನ ಭರವಸೆ ನೀಡುತ್ತಿದ್ದೇವೆ ಎಂದು ಹುಬ್ಬಳ್ಳಿ ಮಲಬಾರ್ ಶಾಖೆ ಮುಖ್ಯಸ್ಥ ನಿಸ್ಸಾಮ ಸಿಕ್ಕು ತಿಳಿಸಿದ್ದಾರೆ.


ಮಾರ್ಕೆಟಿಂಗ್ ಮುಖ್ಯಸ್ಥ ಸಿರಾಜ್ ಮುಲ್ಲಾ, ಲಿಯಾಖತ್ ಅಲಿ ಬಂಕಾಪುರ, ಶಶಿಕಲಾ ಚಂದಣ್ಣವರ, ಮಹಮ್ಮದರಫಿ ಮಂಟಗಣಿ, ಆನಂದ ಮ್ಯಾಳದ, ಸಮೀರ ಪಾಶಾ, ಶಿವಕುಮಾರ ಹಿರೇಮಠ, ವಿನಾಯಕ ಶಾನಬಾಗ, ಫಾಜಿಲ್ ಬಳಿಗಾರ, ಗ್ರಾಹಕರು ಮತ್ತು ಮಲಬಾರ ಗೋಲ್ಡ್ ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

Latest Posts

ಲೈಫ್‌ಸ್ಟೈಲ್