ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ಮದುವೆ ಮಂಟಪ ತಲುಪಿದ ವಧು!

ಬೆಂಗಳೂರು: ಸಂಚಾರ ದಟ್ಟಣೆಯಿಂದ ತಪ್ಪಿಸಿಕೊಳ್ಳಲು ನಗರದ ಮಂದಿ ನಮ್ಮ ಮೆಟ್ರೋ ಮೊರೆ ಹೋಗುತ್ತಾರೆ. ಈ ಮೂಲಕ ತಲುಪಬೇಕಿರುವ ಸ್ಥಳವನ್ನು ಯಾವುದೇ ಒತ್ತಡವಿಲ್ಲದೆ ತಲುಪುತ್ತಾರೆ. ಇದೀಗ ವಧುವೊಬ್ಬರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ ಮದುವೆ ಮಂಟಪ ತಲುಪಿ ಸುದ್ದಿಯಾಗಿದ್ದಾರೆ. ಮದುಮಗಳು ಸಿಂಗರಿಸಿಕೊಂಡು ಮೆಟ್ರೋದಲ್ಲಿ ಪ್ರಯಾಣಿಸುತ್ತಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಏನಿದೆ? ಸಂಚಾರ ದಟ್ಟಣೆಯಲ್ಲಿ ಸಿಲುಕಿ, ಸಮಯಕ್ಕೆ ಸರಿಯಾಗಿ ಮದುವೆ ಮುಹೂರ್ತಕ್ಕೆ ತಲುಪಲು ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆ, ವಧು ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ತೆರಳಿದ್ದಾರೆ. ಬಳಿಕ ಮೆಟ್ರೋದಲ್ಲಿ … Continue reading ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿ ಮದುವೆ ಮಂಟಪ ತಲುಪಿದ ವಧು!