ಮದ್ಯಪಾನ ಮಾಡಿ ತಾಳಿ ಕಟ್ಟಲು ಬಂದ ವರನನ್ನು ಕಂಡು ವಧು ಮಾಡಿದ್ದೇನು?

ಪಟನಾ: ಮದುವೆ ಸಮಾರಂಭದ ವೇಳೆ ಕುಡಿದ ಅಮಲಿನಲ್ಲಿದ್ದ ವರನನ್ನು ನೋಡಿ ವಧು ವಿವಾಹವನ್ನು ತಿರಸ್ಕರಿಸಿ ಮಂಟಪದಿಂದ ಹೊರನಡೆದ ಘಟನೆ ಬಿಹಾರದ ದಮ್ರಿ ಛಾಪಿಯಾ ಗ್ರಾಮದಲ್ಲಿ ನಡೆದಿದೆ. ವಧು ರಿಂಕಿ ಕುಮಾರಿ ಹಾಗೂ ಬಬ್ಲು ಕುಮಾರ್​ಗೆ ಶನಿವಾರ ಮದುವೆ ನಿಶ್ಚಯವಾಗಿತ್ತು.

ಈ ಬಗ್ಗೆ ಮಾತನಾಡಿರುವ ವಧುವಿನ ತಂದೆ ತ್ರಿಭುವನ್​ ಷಾ, ವರ ಬಬ್ಲು ಕುಮಾರ್​ ವಿಪರೀತ ಕುಡಿದು ತನ್ನ ಸುತ್ತ ಏನು ನಡೆಯುತ್ತಿದೆ ಎಂಬುದನ್ನು ತಿಳಿಯದ ಸ್ಥಿತಿಯಲ್ಲಿದ್ದ. ಅಲ್ಲದೆ, ವಿವಾಹ ವೇದಿಕೆಯಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದ. ಇದನ್ನು ನೋಡಿದ ನನ್ನ ಮಗಳು ನನಗೆ ಈ ಮದುವೆ ಬೇಡವೆಂದು ತಿರಸ್ಕರಿಸಿ ಮಂಟಪದಿಂದ ಹೊರನಡೆದಳು ಎಂದು ಹೇಳಿದ್ದಾರೆ.

ವರನ ಸಂಬಂಧಿಕರ ಪ್ರಕಾರ ಬಬ್ಲು ಕುಮಾರ್​ ವಿಪರೀತ ಕುಡಿದಿದ್ದರಿಂದ ಆತ ಸರಿಯಾಗಿ ನಿಂತುಕೊಳ್ಳುವ ಸ್ಥಿತಿಯಲ್ಲಿಯೂ ಇರಲಿಲ್ಲ. ಮದುವೆ ಸಂದರ್ಭದಲ್ಲಿ ಜರಗುವ ಆಚರಣೆಗಳನ್ನು ಸರಿಯಾಗಿ ನಿರ್ವಹಿಸುತ್ತಿರಲಿಲ್ಲ. ಇದರಿಂದಾಗಿ ವಧು ಅಲ್ಲಿಂದ ಎದ್ದು ಹೊರನಡೆದಳು. ಎರಡು ಕುಟುಂಬದವರು ಆಕೆಯ ಮನವೊಲಿಸಲು ಪ್ರಯತ್ನಿಸಿದಾದರೂ ಯಾರ ಮಾತನ್ನು ಆಕೆ ಕೇಳಲಿಲ್ಲ ಎಂದು ತಿಳಿಸಿದ್ದಾರೆ.

ಇದೇ ವೇಳೆ ವಧುವಿನ ಕಡೆಯವರು ವರದಕ್ಷಿಣೆ ಹಣವನ್ನು ಮರಳಿಸುವವರೆಗೂ ವರನನ್ನು ಮಂಟಪದಿಂದ ಹೊರಹೋಗಲು ಬಿಡಲಿಲ್ಲ. ಹಣ ಮರಳಿಸಿದ ನಂತರ ಆತನನ್ನು ಬಿಡುಗಡೆಗೊಳಿಸಿದರು. (ಏಜೆನ್ಸೀಸ್​)

2 Replies to “ಮದ್ಯಪಾನ ಮಾಡಿ ತಾಳಿ ಕಟ್ಟಲು ಬಂದ ವರನನ್ನು ಕಂಡು ವಧು ಮಾಡಿದ್ದೇನು?”

  1. ಅವನೊಬ್ಬ ಅಯೋಗ್ಯ. ಅವನು ಮದ್ಯಕ್ಕೇ ತಾಳಿ ಕಟ್ಟಿಕೊಳ್ಳಲಿ ಬಿಡಿ.

Comments are closed.