ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹೊಗಳಿದ ಬ್ರೆಂಡನ್ ಮೆಕಲಮ್​


ನವದೆಹಲಿ: ನ್ಯೂಜಿಲೆಂಡ್​ನ ಮಾಜಿ ನಾಯಕ ಬ್ರೆಂಡನ್​ ಮೆಕಲಮ್​ ಭಾರತ ತಂಡದ ಮಾಜಿ ನಾಯಕ, ವಿಕೆಟ್​ ಕೀಪರ್​ ಧೋನಿಯನ್ನು ಹೊಗಳಿದ್ದು ಅವರು ಈ ಭಾರಿಯ ವಿಶ್ವಕಪ್​ನ ಭಾರತ ತಂಡದಲ್ಲಿರುವ ಪ್ರಮುಖ ಆಟಗಾರರಾಗಿದ್ದಾರೆ ಎಂದಿದ್ದಾರೆ. ಧೋನಿ ಅವರು ತಂಡವನ್ನು ಯಾವ ಕ್ಷಣದಲ್ಲಿ ಹೇಗೆ ನಿಭಾಯಿಸಬೇಕೆಂದು ತಿಳಿದವರಾಗಿದ್ದು ಒತ್ತಡದ ಸಂದರ್ಭದಲ್ಲಿ ತಂಡಕ್ಕೆ ಹೆಚ್ಚು ನೆರವಾಗಬಲ್ಲವರಾಗಿದ್ದಾರೆ ಎಂದಿದ್ದಾರೆ.
ಧೋನಿ ಅವರು ಭಾರತ ತಂಡಕ್ಕೆ ಅಮೂಲ್ಯವಾದವರಾಗಿದ್ದು, ಅವರು ಆಟಕ್ಕೆ ಸಂಬಂಧಿಸಿದಂತೆ ತಮ್ಮ ಮನಸ್ಸಿನಲ್ಲೇ ಒಂದು ಯೋಜನೆಯನ್ನು ರೂಪಿಸಿರುತ್ತಾರೆ. ಕ್ರೀಸ್​ನಲ್ಲಿದ್ದಾಗ ಎಂತಹ ಒತ್ತಡವಿದ್ದರೂ ಎದುರಿಸುವ ಶಕ್ತಿ ಹೊಂದಿದ್ದಾರೆ. ಹಾಗೂ ಆಟವನ್ನು ಒತ್ತಡದಲ್ಲೂ ಹೇಗೆ ಆಡಬೇಕೆಂದು ಬಲ್ಲವರಾಗಿದ್ದಾರೆ ಎಂದಿದ್ದಾರೆ.
ಫಿಟ್ನೆಸ್​ಗೆ ಸಂಬಂಧಿಸಿದಂತೆ ಮಾತನಾಡಿದ ಅವರು, ಧೋನಿ ಅವರ ಫಿಟ್ನೆಸ್​ ಅದ್ಭುತವಾಗಿದ್ದು, ಎಂತಹ ಬೌಲರ್​ಗಳನ್ನಾದರೂ ಅವರು ಉತ್ತಮವಾಗಿ ಎದುರಿಸುತ್ತಾರೆ ಎಂದಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಧೋನಿ ಉತ್ತಮವಾಗಿ ಆಡುತ್ತಿದ್ದು, ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಧೋನಿ ಅವರ ಆಟ ಇಂಗ್ಲೆಂಡ್​ ತಂಡಕ್ಕೆ ಒಂದು ಎಚ್ಚರಿಕೆಯ ಗಂಟೆಯಾಗಿದೆ ಎಂದಿದ್ದಾರೆ. ನಾಯಕ ಕೋಹ್ಲಿಯವರಿಗೆ ಧೋನಿ ಅವರು ಎಲ್ಲಾ ರೀತಿಯ ಬೆಂಬಲವನ್ನು ನೀಡಿದ್ದಾರೆ, ಹಾಗೂ ನೀಡಲಿದ್ದಾರೆ ಎಂದಿದ್ದಾರೆ.
ಹಾಗೆಯೇ ಇಂಗ್ಲೆಂಡ್​ನ ಮಾಜಿ ಬ್ಯಾಟ್ಸ್​​ಮನ್​ ಕೆವಿನ್​ ಪೀಟರ್ಸನ್​ ಧೋನಿಯ ಶಾಂತತೆಯ ಬಗ್ಗೆ ಮಾತನಾಡಿದ್ದು, ಅವರ ಶಾಂತತೆಯು ಅವರ ಮುಂದೆ ಇರುವವರ ನಿರ್ಧಾರವನ್ನು ಅವರಿಗೆ ಎದುರಿಸುವ ಸಾಮರ್ಥ್ಯವನ್ನು ನೀಡುತ್ತದೆ ಎಂದಿದ್ದಾರೆ. (ಏಜೆನ್ಸೀಸ್​)