ಯುಕೆಯಲ್ಲೂ ಮಿತಿಮೀರುತ್ತಿದೆ ಸ್ತನ ಸಪಾಟು ದೌರ್ಜನ್ಯ: ಇದೊಂದು ಆತಂಕದ ವಿಷಯವೆಂದ ತಜ್ಞರು

ಲಂಡನ್​: ಲೈಂಗಿಕ ದೌರ್ಜನ್ಯದಿಂದ ಪಾರಾಗಲು ಆಫ್ರಿಕಾದಲ್ಲಿ ಕೆಲವು ಬುಡಕಟ್ಟು ಸಮುದಾಯದಲ್ಲಿ ಹದಿಹರೆಯಕ್ಕೆ ಕಾಲಿಡುವ ಹೆಣ್ಣುಮಕ್ಕಳ ಸ್ತನವನ್ನು ಸಪಾಟು ಮಾಡುವ, ಜನನೇಂದ್ರಿಯ ಹೊಲಿಯುವ ಕೆಟ್ಟ ಸಂಪ್ರದಾಯವಿದೆ. ಆ ಹುಡುಗಿಯರ ತಾಯಿಯರೇ ಈ ಕೆಲಸಕ್ಕೆ ಮುಂದಾಗುತ್ತಾರೆ. ಆದರೆ ಈ ಸ್ತನ ಸಪಾಟು ಮಾಡುವ ಅಮಾನುಷ ಪದ್ಧತಿ ಈಗ ಯುಕೆಯಲ್ಲಿ ಮಿತಿಮೀರುತ್ತಿದೆ. ಎಂದು ಮಾಧ್ಯಮಗಳ ವರದಿ ಹೇಳಿದೆ.

ಹೆಣ್ಣುಮಕ್ಕಳು ಪುರುಷರನ್ನು ಆಕರ್ಷಿಸಬಾರದು ಎಂಬ ಕಾರಣಕ್ಕೆ ಹದಿಹರೆಯಕ್ಕೆ ಕಾಲಿಡುತ್ತಿದ್ದಂತೆ ಅವರ ಎದೆಯ ಮೇಲೆ ಬಿಸಿಯಾದ ಕಲ್ಲು, ಸುತ್ತಿಗೆಯಿಂದ ಮಸಾಜ್​ ಮಾಡಲಾಗುತ್ತದೆ. ಇಲ್ಲದಿದ್ದರೆ ಸ್ತನ ಬೆಳವಣಿಗೆ ತಡೆಗಟ್ಟಲು ಬಿಗಿಯಾದ ಪಟ್ಟಿಯನ್ನೂ ಕಟ್ಟುತ್ತಾರೆ. ಇದನ್ನು ನಿರಂತರವಾಗಿ ಮಾಡುವ ಮೂಲಕ ಸ್ತನ ಸಪಾಟು ಮಾಡಲಾಗುತ್ತದೆ. ಇದರಿಂದ ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳಿಂದ ಹೆಣ್ಣುಮಕ್ಕಳನ್ನು ರಕ್ಷಿಸಬಹುದು ಎಂಬುದು ಅವರ ನಂಬಿಕೆ.

ಈಗ ಲಂಡನ್​, ವೆಸ್ಟ್​ಮಿಡ್​ಲ್ಯಾಂಡ್​ ನಂತಹ ಮುಂದುವರಿದ ದೇಶಗಳಲ್ಲಿನ ವಲಸೆಗಾಗರರು ಇದೇ ಹಾದಿ ಹಿಡಿದಿದ್ದಾರೆ. ಇದು ಆತಂಕಕಾರಿ ವರದಿ ಎಂಬುದು ತಜ್ಞರ ಅಭಿಪ್ರಾಯ. ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಪಟ್ಟ ಜಾಗತಿಕ ಮಟ್ಟದ ಐದು ಅಪರಾಧಗಳಲ್ಲಿ ಇದೂ ಒಂದು ಎಂದು ಯುಎನ್​ ಅಭಿಪ್ರಾಯಪಟ್ಟಿದೆ.

ಯುಕೆದಲ್ಲಿ ಎಷ್ಟರಮಟ್ಟಿಗೆ ಹೆಚ್ಚಾಗಿವೆ ಎಂದರೆ, ಇತ್ತೀಚೆಗೆ ದಕ್ಷಿಣ ಲಂಡನ್​ನ ಕ್ರೈಡನ್​ ಪಟ್ಟಣವೊಂದರಲ್ಲೇ ಇತ್ತೀಚೆಗೆ ಸುಮಾರು 20 ಪ್ರಕರಣಗಳನ್ನು ನೋಡಿದ್ದಾಗಿ ವಸಲೆ  ಸಮುದಾಯದ ಕಾರ್ಯಕರ್ತೆ ತಿಳಿಸಿದ್ದಾರೆ. ಇದನ್ನು ಹೆಚ್ಚಾಗಿ ತಾಯಿ, ಅಜ್ಜಿಯರೇ ತಮ್ಮ ಮನೆ ಹೆಣ್ಣುಮಕ್ಕಳಿಗೆ ಮಾಡುತ್ತಾರೆ ಎಂದು ಹೇಳಿದ್ದಾರೆ.

ದರೆ ವೈದ್ಯಕೀಯ ವರದಿ, ಇಂಥ ಅಮಾನುಷ ಕೃತ್ಯದಿಂದ ಹೆಣ್ಣುಮಕ್ಕಳು ದೈಹಿಕ, ಮಾನಸಿಕವಾಗಿ ಕುಗ್ಗುತ್ತಾರೆ. ಸೋಂಕು ತಗುಲುತ್ತದೆ. ಇದರಿಂದ ಮದುವೆಯ ನಂತರ ಎದೆಹಾಲುಣಿಸಲು ಸಾಧ್ಯವಾಗದು. ಕ್ಯಾನ್ಸರ್​ಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಿದೆ.

ವಲಸೆ ಬಂದ ಮಹಿಳಾ ಮತ್ತು ಹೆಣ್ಣುಮಕ್ಕಳ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥೆ ಮಾರ್ಗರೆಟ್​ ಪ್ರತಿಕ್ರಿಯೆ ನೀಡಿದ್ದು, ಯುಕೆಯಲ್ಲಿ ಸುಮಾರು 1000ದಷ್ಟು ಮಹಿಳೆಯರು, ಹೆಣ್ಣುಮಕ್ಕಳು ಸ್ತನ ಸಪಾಟು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಆದರೆ ಆ ಬಗ್ಗೆ ಸರಿಯಾದ ಅಧ್ಯಯನ ಮಾಡಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ.