ಮೇ 23ನೇ ತಾರೀಖು ರಾತ್ರಿ ರಾಜ್ಯ ಸರ್ಕಾರದ ಬಗ್ಗೆ ಬ್ರೇಕಿಂಗ್ ನ್ಯೂಸ್ ಬರಲಿದೆ: ಶೋಭಾ ಕರಂದ್ಲಾಜೆ

ಚಿಕ್ಕೋಡಿ: ಮೇ 23ನೇ ತಾರೀಖು ರಾತ್ರಿ ಬ್ರೇಕಿಂಗ್ ನ್ಯೂಸ್ ಏನು ಅಂದರೆ ದೋಸ್ತಿ ಸರ್ಕಾರದ ಪತನ ಎಂದಿರುತ್ತದೆ. ರಾಜ್ಯ ಸರ್ಕಾರ ಮಹದಾಯಿ ಯೋಜನೆಗೆ ಬಜೆಟ್‌ನಲ್ಲಿ ಯಾವುದೇ ಅನುದಾನ ನೀಡಿಲ್ಲ. ಈವರೆಗೆ ಕಾಣುವುದು ಮಂಡ್ಯ ಮತ್ತು ಹಾಸನ ಮಾತ್ರವಾ ಎಂದು ಸಂಸದೆ ಶೋಭಾ ಕರಂದ್ಲಾಜೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಉತ್ತರ ಕರ್ನಾಕಟದಲ್ಲಿ ಮನೆ ಮಾಡ್ತಿರಿ, ಇಲ್ಲಿನ ಜನರ ಜತೆ ಓಡಾಡುತ್ತೀರಿ. ಚುಣಾವಣೆ ಬಳಿಕ ಏನು ಮಾಡಿದ್ದೀರಿ? ಸಿದ್ದರಾಮಯ್ಯನವರೇ ನೀವು ಮಾತನಾಡಿದ ಭಾಷೆ ನಿಮಗೆ ಗೌರವ ತರುತ್ತಾ? ಒಬ್ಬ ಪ್ರಧಾನಿಗೆ ಏಕವಚನದಲ್ಲಿ ಮಾತನಾಡುತ್ತೀರಿ. ನಿಮಗೆ ಮೋದಿ ಕಂಡರೆ ಭಯ. ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಒಡೆದವರು, ಸ್ವಾರ್ಥಕ್ಕಾಗಿ ಧರ್ಮ ಒಡೆಯುವವರು. ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ ಎಂದು ನಿಮ್ಮಂಥವರನ್ನ ನೋಡಿಯೇ ಪುರಂದರ ದಾಸರು ಹೇಳಿರಬಹದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶೋಭಾ ಪೆದ್ದಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಹೌದು ನಾನು ಪೆದ್ದಿ. ನಾವು ಜಾತಿ ಒಡೆದಿಲ್ಲ, ಧರ್ಮ ಒಡೆದಿಲ್ಲ, ನಾವು ಪೆದ್ದರೆ. ಪ್ರಮೋದ್​ ಮದ್ವರಾಜ್ ಅವರನ್ನು ಎರವಲು ತಂದು ಅಭ್ಯರ್ಥಿ ಮಾಡಿದ್ರಿ. ಅಣ್ಣಾಸಾಬ್ ಜೊಲ್ಲೆ ಹಾಗೂ ಸುರೇಶ್ ಅಂಗಡಿ ಅವರನ್ನು ಆರಿಸಿ ತರುವಂತೆ ಮನವಿ ಮಾಡಿದರು.