28 C
Bengaluru
Thursday, January 23, 2020

ಸಂರಕ್ಷಿತಾರಣ್ಯದಲ್ಲಿ ವರ್ಷಾಂತ್ಯದ ಮೋಜು ಮಸ್ತಿಗೆ ಬ್ರೇಕ್

Latest News

ಭಾರತೀಯ ಸಂಸ್ಕೃತಿ ಉಳಿಸಿ-ಬೆಳೆಸಿ

ವಿಜಯಪುರ : ಭಾರತೀಯ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಮಹತ್ತರ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಜನಪದ ತಜ್ಞ ಡಾ.ಎಂ.ಎಂ. ಪಡಶೆಟ್ಟಿ ಹೇಳಿದರು. ಇಲ್ಲಿನ ವೀರಶೈವ ಮಹಾಸಭಾದ...

ಸಾರ್ವಜನಿಕರ ಎದುರು ರೆವೆನ್ಯೂ ಇನ್ಸ್​ಪೆಕ್ಟೆರ್​ಗೆ ಕಪಾಳ ಮೋಕ್ಷ ಮಾಡಿದ ಚಿಕ್ಕಮಗಳೂರು ಜಿಲ್ಲಾಧಿಕಾರಿ

ಚಿಕ್ಕಮಗಳೂರು: ಪ್ರವಾಹ ವೇಳೆ ಜಿಲ್ಲಾಡಳಿತ ವರ್ತಕರಿಂದ ಖರೀದಿಸಿದ್ದ ಪಡಿತರಕ್ಕೆ ಹಣ ಪಾವತಿ ನೀಡದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಾರ್ವಜನಿಕರ ಎದುರು ರೆವೆನ್ಯೂ ಇನ್ಸ್​ಪೆಕ್ಟರ್​ಗೆ ಕಪಾಳ...

ಇ-ಕೆವೈಸಿ ಸರ್ವರ್ ಸಮಸ್ಯೆ ಸರಿಪಡಿಸಲು ಆಗ್ರಹ

ಬೆಳಗಾವಿ: ಆಧಾರ್ ಸಂಖ್ಯೆ ಮೂಲಕ ಗ್ರಾಹಕರ ಮಾಹಿತಿ ಪಡೆಯುವ (ಇ-ಕೆವೈಸಿ) ವ್ಯವಸ್ಥೆಗೆ ಸರ್ವರ್ ಸಮಸ್ಯೆ ಸರಿಪಡಿಸುವಂತೆ ಆಗ್ರಹಿಸಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ...

ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳಿ

ಅಥಣಿ: ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟತೆ ಕಾಯ್ದುಕೊಳ್ಳಬೇಕು. ಸಾರಿಗೆ ಘಟಕಕ್ಕೆ ಆದಾಯದ ಮೂಲವಾಗಿರುವುದರಿಂದ ಮಳಿಗೆ ನಿರ್ಮಾಣದಲ್ಲಿ ಯಾವುದೇ ಲೋಪದೋಷವಾಗದಂತೆ ಎಚ್ಚರ ವಹಿಸಬೇಕು ಎಂದು ಡಿಸಿಎಂ...

ಆಸ್ಸಾಂನಲ್ಲಿ 644 ಉಗ್ರರು ಪೊಲೀಸರಿಗೆ ಶರಣು; ರಾಜ್ಯದ ಅಭಿವೃದ್ಧಿಗಾಗಿ ಮುಖ್ಯವಾಹಿನಿಗೆ ಬಂದ ಇವರೆಲ್ಲರ ಬಗ್ಗೆ ಸಂತೋಷವಿದೆ ಎಂದ್ರು ಸಿಎಂ

ಗುವಾಹಟಿ: ಆಸ್ಸಾಂನಲ್ಲಿ ಇಂದು ಎಂಟು ಉಗ್ರ ಸಂಘಟನೆಗಳ ಒಟ್ಟು 644 ಉಗ್ರರು ಶರಣಾಗಿದ್ದಾರೆ. ತಮ್ಮ ಶಸ್ತ್ರಾಸ್ತ್ರಗಳನ್ನು ಔಪಚಾರಿಕವಾಗಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಯುಎಲ್​ಎಫ್​ಎ(ಐ), ಎನ್​ಡಿಎಫ್​ಬಿ, ಆರ್​ಎನ್​ಎಲ್​ಎಫ್​, ಕೆಎಲ್​ಒ, ಸಿಪಿಐ(ಮಾವೋವಾದಿ),...

ವಿಜಯವಾಣಿ ವಿಶೇಷ ಚಾಮರಾಜನಗರ: ಜಿಲ್ಲೆಯ 2 ವನ್ಯಜೀವಿಧಾಮಗಳು ಮತ್ತು 2 ಹುಲಿ ಸಂರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಹೊಸ ವರ್ಷದ ಪ್ರಯುಕ್ತ ಡಿ.31ರ ತಡರಾತ್ರಿ ಪ್ರವಾಸಿಗರು ಹಾಗೂ ಯುವಜನರು ಮೋಜು ಮಸ್ತಿ ಮಾಡುವುದಕ್ಕೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿದೆ.
ಕಾವೇರಿ ಮತ್ತು ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮಗಳು, ಬಿಳಿಗಿರಿರಂಗನಬೆಟ್ಟ ಮತ್ತು ಬಂಡೀಪುರ ಹುಲಿ ಸಂರಕ್ಷಿತಾರಣ್ಯಗಳ ರಸ್ತೆಗಳಲ್ಲಿ ಮತ್ತು ಒಳಗೆ ಮದ್ಯಸೇವನೆ, ಸಂಗೀತ ಕಾರ್ಯಕ್ರಮ ಹಾಗೂ ಇತರ ಪಾರ್ಟಿಗಳನ್ನು ಹಮ್ಮಿಕೊಳ್ಳಲು ಅವಕಾಶವಿಲ್ಲ.

ಹೊಸ ವರ್ಷವನ್ನು ಸಂಭ್ರಮದಿಂದ ಆಹ್ವಾನಿಸಬೇಕು ಮತ್ತು ವಿಭಿನ್ನವಾಗಿ ಆಚರಿಸಬೇಕೆಂದು ನಗರ ಹಾಗೂ ಪಟ್ಟಣದ ಯುವಜನರು ಹಾಗೂ ಅರಣ್ಯದಂಚಿನ ಗ್ರಾಮಗಳ ಜನರು ಅರಣ್ಯ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯ. ಆದರೆ, ಈ ಜಿಲ್ಲೆಯ 4 ಕಾಡುಗಳು ಸಂರಕ್ಷಿತಾರಣ್ಯಗಳಾಗಿದ್ದು, ಇಲ್ಲಿ ಮದ್ಯ ಸೇವಿಸಿ ಕೂಗಾಟ, ಕಿರುಚಾಟ, ಸಂಗೀತ ಕಾರ್ಯಕ್ರಮ ಹಾಗೂ ಇತರ ಪಾರ್ಟಿಗಳನ್ನು ಆಯೋಜಿಸಿದರೆ ವನ್ಯಜೀವಿಗಳ ಸ್ವಚ್ಛಂದ ಬದುಕಿಗೆ ತೊಂದರೆಯಾಗಲಿದೆ.

ಇದನ್ನು ತಡೆಯುವ ಉದ್ದೇಶದಿಂದ ಸಂರಕ್ಷಿತಾರಣ್ಯಗಳಲ್ಲಿ ಮೋಜು ಮಸ್ತಿಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿದೆ. ಡಿ.31ರಂದು ಅರಣ್ಯದ ಚೆಕ್‌ಪೋಸ್ಟ್‌ಗಳಲ್ಲಿ ವಾಹನಗಳನ್ನು ತಪಾಸಣೆ ಮಾಡಿ ಒಳ ಬಿಡಲಾಗುವುದು. ಅಲ್ಲದೆ ಅರಣ್ಯ ಇಲಾಖೆ ಸಿಬ್ಬಂದಿಯ 10-15 ತಂಡಗಳು ರಾತ್ರಿಯಿಡೀ ಅರಣ್ಯಗಳ ಮುಖ್ಯರಸ್ತೆಗಳಲ್ಲಿ ಮತ್ತು ಪ್ರಮುಖ ಸ್ಥಳಗಳಲ್ಲಿ ಗಸ್ತು ತಿರುಗಲಿವೆ.

ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಇಲ್ಲ: ಅರಣ್ಯ ಇಲಾಖೆಗಳ ಪ್ರವಾಸಿ ಮಂದಿರಗಳಲ್ಲಿ ಯಾರೊಬ್ಬರಿಗೂ ಉಳಿಯಲು ಅವಕಾಶವಿಲ್ಲ. ಅರಣ್ಯಗಳ ಒಳಗಿನ ರಸ್ತೆಗಳಲ್ಲಿ ಮದ್ಯ ಸೇವನೆ ಮಾಡಿ ಅರಚಾಟ ಮಾಡುವವರನ್ನು ಮತ್ತು ಪಾರ್ಟಿ ನಡೆಸುವವರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ಅರಣ್ಯದೊಳಗೆ ಇರುವ ಪ್ರವಾಸೋದ್ಯಮ ಇಲಾಖೆಯ ಜಂಗಲ್ ರೆಸಾರ್ಟ್‌ಗಳು ಮತ್ತು ಖಾಸಗಿ ರೆಸಾರ್ಟ್‌ಗಳಲ್ಲಿ ವಾಸ್ತವ್ಯ ಹೂಡುವವರು ಅರಣ್ಯದೊಳಗೆ ಸ್ವಚ್ಛಂದವಾಗಿ ವಿಹರಿಸುವಂತಿಲ್ಲ. ರೆಸಾರ್ಟ್‌ಗಳ ಆವರಣದೊಳಗೆ ಹೊಸ ವರ್ಷದ ಸಂಭ್ರಮ ಆಚರಿಸಬೇಕು. ಒಂದು ವೇಳೆ ಇದನ್ನು ಮೀರಿದರೆ ಪ್ರಕರಣ ದಾಖಲಿಸಲಾಗುತ್ತದೆ.

ಕಾಡಂಚಿನ ಪ್ರದೇಶದ ತೋಟದ ಮನೆಗಳು, ಬಿಆರ್‌ಟಿ ಅರಣ್ಯದ ಬೆಲವತ್ತ, ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಏರಿಗಳು, ಕೃಷ್ಣಯ್ಯಕಟ್ಟೆ, ಗೌಡಹಳ್ಳಿ ಕೆರೆ, ಹೋಂಸ್ಟೆಗಳಲ್ಲಿ ಯುವ ಜನರು ಗುಂಪುಗೂಡಿ ಧ್ವನಿವರ್ಧಕಗಳನ್ನು ಬಳಸಿ ನರ್ತಿಸಿ ಮೋಜು ಮಸ್ತಿ ಮಾಡುತ್ತಾರೆ. ಇದಕ್ಕೂ ಅವಕಾಶವಿಲ್ಲ.

ಕಮರಿಯು ಪ್ರಮುಖ ಅಕರ್ಷಣೆ: ಬಿಳಿಗಿರಿ ರಂಗನಬೆಟ್ಟವು ಪೂರ್ವ ಮತ್ತು ಪಶ್ಚಿಮಘಟ್ಟಗಳ ಕೊಂಡಿಯಾಗಿದ್ದು, ಸಮುದ್ರಮಟ್ಟದಿಂದ 2800 ಅಡಿಗಳ ಎತ್ತರದಲ್ಲಿದೆ. ಸುಮಾರು 675 ಚ.ಕಿ.ಮೀ ವಿಸ್ತೀರ್ಣದ ಅರಣ್ಯವನ್ನು ಹೊಂದಿದೆ. ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿರುವುದರಿಂದ, ಇಲ್ಲಿನ ನಿತ್ಯ ಹರಿದ್ವರ್ಣ ಕಾಡುಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಅದರಲ್ಲೂ ಬಿಳಿದಾದ, ಏಕಶಿಲೆಯಿಂದ ರಚನೆಯಾಗಿರುವ ಕಮರಿಯು ಇಲ್ಲಿನ ಪ್ರಮುಖ ಅಕರ್ಷಣೆಯಾಗಿದೆ. ಇಂತಹ ತಾಣದಲ್ಲಿ ಹೊಸ ವರ್ಷ ಆಚರಣೆಯನ್ನು ಮಾಡುವ ನಿಟ್ಟಿನಲ್ಲಿ ಯುವ ಸಮೂಹ ಇಷ್ಟಪಡುತ್ತದೆ.
ಪವಾಡ ಪುರುಷ ಮಹದೇಶ್ವರರು ನೆಲೆಸಿರುವ ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮವು 473 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿದೆ. ಇದೊಂದು ಪವಿತ್ರ ಯಾತ್ರಾಸ್ಥಳವಾಗಿರುವ ಜತೆಗೆ ಅಮೂಲ್ಯ ಪ್ರಾಣಿ ಮತ್ತು ಸಸ್ಯಸಂಪತ್ತನ್ನು ಹೊಂದಿದೆ. ಹನೂರಿನಿಂದ ಪ್ರಾರಂಭವಾಗುವ ಅರಣ್ಯವು ಮಹದೇಶ್ವರನ ಸನ್ನಿಧಾನದ ಸುತ್ತಲೂ ವ್ಯಾಪಿಸಿದೆ.

ಪಾಲಾರ್, ಅರ್ಧನಾರಿಪುರ, ನಾಲ್‌ರೋಡ್ ತನಕ ರಾಜ್ಯದ ಗಡಿಗಳಿದ್ದು, ರಸ್ತೆಗಳು ಹಾದು ಹೋಗಿವೆ. ರಾಮಾಪುರ, ಅಜ್ಜೀಪುರ, ಪಡಸಲನತ್ತ, ನಾಗಮಲೆ, ಇಂಡಿಗನತ್ತ ದಂತಹ ಹಲವು ಪುಟ್ಟ ಗ್ರಾಮಗಳಿವೆ. ಇಲ್ಲೆಲ್ಲ ಯುವ ಜನರು ಪಾರ್ಟಿ ಮಾಡುವ ಸಾಧ್ಯತೆಯಿದೆ.

ಹೊಗೇನಕಲ್ ಜಲಪಾತದಲ್ಲೂ..: ಕಾವೇರಿ ವನ್ಯಜೀವಿಧಾಮವು 1027 ಚ.ಕಿ.ಮೀ.ಯಲ್ಲಿ ಹರಡಿಕೊಂಡಿದ್ದು, ಜಿಲ್ಲೆಯ ಸ್ವಲ್ಪ ಭಾಗವೂ ಸೇರಿದೆ. ಚಿಕ್ಕಲ್ಲೂರು, ಇಕ್ಕಡಹಳ್ಳಿ, ಹಾಗೆಯೇ ಆಲಂಬಾಡಿ, ಗೋಪಿನಾಥಂ, ಪಾಲಾರ್ ಗ್ರಾಮಗಳು ಹಾಗೂ ಪ್ರಸಿದ್ಧ ಹೊಗೇನಕಲ್ ಜಲಪಾತವು ಈ ವನ್ಯಜೀವಿಧಾಮಕ್ಕೆ ಸೇರಿವೆ. ಕಾವೇರಿ ನದಿಯು ಕಾವೇರಿ ವನ್ಯಜೀವಿಧಾಮದೊಳಗೆ ಹರಿದು ಪಾಲಾರ್ ಬಳಿ ತಮಿಳುನಾಡಿನತ್ತ ತೆರಳುತ್ತದೆ. ನದಿಯು ಕರ್ನಾಟಕ ಮತ್ತು ತಮಿಳುನಾಡಿನ ಅರಣ್ಯ ಪ್ರದೇಶಗಳ ಗಡಿಯಲ್ಲಿ ಹರಿದು ಮೆಟ್ಟೂರು ಜಲಾಶಯ ಸೇರುತ್ತದೆ. ಈ ನದಿ ಅಂಚಿನಲ್ಲಿಯೂ ಪಾರ್ಟಿ ಮಾಡುವ ಸಾಧ್ಯತೆಗಳಿವೆ.

ಬಂಡೀಪುರ ಹುಲಿ ಸಂರಕ್ಷಿತಾರಣ್ಯವು 874 ಚ.ಕಿ.ಮೀ. ವ್ಯಾಪ್ತಿಯಲ್ಲಿ ವಿಸ್ತರಿಸಿದೆ. ಇಲ್ಲಿಂದ ಕೇರಳ ಮತ್ತು ತಮಿಳುನಾಡಿಗೆ ರಾಷ್ಟ್ರೀಯ ಹೆದ್ದಾರಿಗಳು ಸಾಗುತ್ತವೆ. ಇವುಗಳ ಅಂಚಿನಲ್ಲಿ ಯುವಕರು ಓಡಾಡುವ ಲಕ್ಷಣಗಳಿವೆ. ಇದರ ತಡೆಗೆ ಕ್ರಮ ವಹಿಸಬೇಕಿದೆ.

ಸಂರಕ್ಷಿತಾರಣ್ಯಗಳಲ್ಲಿ ಪಾನಗೋಷ್ಠಿ ಮಾಡುವುದು ಕಾನೂನುಬಾಹಿರವಾಗಿದೆ. ಇನ್ನು ಡಿ.31ರಂದು ಅರಣ್ಯ ಪ್ರದೇಶಗಳಲ್ಲಿ ಪಾರ್ಟಿ, ಸಂಗೀತ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಯಾರಾದರೂ ಪಾರ್ಟಿ ಮಾಡುವುದು ಕಂಡುಬಂದರೆ ಅಂತಹವರ ವಿರುದ್ಧ ಮೊಕದ್ದಮೆ ದಾಖಲಿಸಲಾಗುವುದು.
ಏಡುಕೊಂಡಲು, ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮದ ಡಿಎಫ್‌ಒ

ವಿಡಿಯೋ ನ್ಯೂಸ್

VIDEO| ಇಂದಿರಾ ಜೈಸಿಂಗ್​ ಅಂತಹವರನ್ನು ನಿರ್ಭಯಾ ಅಪರಾಧಿಗಳ ಜತೆ ಜೈಲಿನ...

ನವದೆಹಲಿ: ಹಿರಿಯ ವಕೀಲೆ ಇಂದಿರಾ ಜೈಸಿಂಗ್​ ಅವರನ್ನು ನಿರ್ಭಯಾ ಪ್ರಕರಣದ ಅಪರಾಧಿಗಳ ಜತೆ ಜೈಲಿನಲ್ಲಿಡಬೇಕು ಎಂದು ನಟಿ ಕಂಗನಾ ರಣಾವತ್​ ಆಕ್ರೋಷ ವ್ಯಕ್ತಪಡಿಸಿದ್ದಾರೆ. ನಿರ್ಭಯಾ ಪ್ರಕರಣವನ್ನು ಸಂತ್ರಸ್ಥೆ ತಾಯಿ ಆಶಾದೇವಿ ಅವರು ಕ್ಷಮಿಸಬೇಕು ಎಂಬ...

VIDEO| ಪ.ಬಂಗಾಳದಲ್ಲಿ ಮೂರೇ ವರ್ಷ ಹಿಂದೆ 165 ಕೋಟಿ ರೂ....

ಬಂಕುರಾ: ಪಶ್ಚಿಮ ಬಂಗಾಳದ ಬಂಕುರಾದ ಸಾರೆಂಗಾದಲ್ಲಿ ಕೇವಲ ಮೂರೇ ವರ್ಷ ಹಿಂದ 165 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಓವರ್ ಹೆಡ್ ಟ್ಯಾಂಕ್ ಒಂದು ಬುಧವಾರ ಅಪರಾಹ್ನ ಕುಸಿದು ಬಿದ್ದಿದೆ....

VIDEO| ಗಗನಯಾನಕ್ಕೆ ವ್ಯೋಮಮಿತ್ರಾ; ಇಸ್ರೋದಿಂದ ರೋಬಾಟ್ ಅನಾವರಣ, ವರ್ಷಾಂತ್ಯಕ್ಕೆ ಪ್ರಯಾಣ

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಬಾಹ್ಯಾಕಾಶ ಕಾರ್ಯಕ್ರಮ ಗಳಲ್ಲೊಂದಾದ ಮಾನವಸಹಿತ ಗಗನಯಾನಕ್ಕೆ ಪೂರ್ವಭಾವಿಯಾಗಿ ಪ್ರಯಾಣ ಬೆಳೆಸಲಿರುವ ರೋಬಾಟ್ ‘ವ್ಯೋಮಮಿತ್ರಾ’ವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ(ಇಸ್ರೋ) ಬುಧವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದೆ. ಖಾಸಗಿ ಹೋಟೆಲ್​ನಲ್ಲಿ ‘ಮಾನವಸಹಿತ ಗಗನಯಾನ ಮತ್ತು ಅನ್ವೇಷಣೆ ಕಾರ್ಯಕ್ರಮ’...

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...