ಎತ್ತಿನಭುಜಕ್ಕೆ ಪ್ರವಾಸಿಗರಿಗೆ ಬ್ರೇಕ್; ನಿರ್ಬಂಧ ತೆರವುಗೊಳಿಸದಿದ್ದರೆ ಹೋರಾಟ: ಎಂ.ಪಿ.ಕುಮಾರಸ್ವಾಮಿ ಎಚ್ಚರಿಕೆ

blank

ಮೂಡಿಗೆರೆ: ಡೋಂಗಿ ಪರಿಸರವಾದಿಗಳು ಅರಣ್ಯ ಸಚಿವರಿಗೆ ತಪ್ಪು ಮಾಹಿತಿ ನೀಡಿರುವುದೆ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲು ಕಾರಣವಾಗಿದೆ. ಚಾರಣಕ್ಕೆ ಅವಕಾಶ ನೀಡದಿದ್ದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಎತ್ತಿನಭುಜ ವ್ಯಾಪ್ತಿಯ ದೇವರುಂದ, ಮೇಕನಗದ್ದೆ, ಬೈರಾಪುರ, ಹೊಸಕೆರೆ ಸೇರಿದಂತೆ ಊರುಬಗೆ, ಬೆಟ್ಟಗೆರೆ, ತ್ರಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿವರ್ಷ ಅಧಿಕ ಮಳೆಯಾಗುತ್ತದೆ. ಅಲ್ಲದೆ ಕಾಡಾನೆ ಹಾವಳಿಯಿಂದ ಕಾಫಿ ತೋಟ, ಭತ್ತದ ಗದ್ದೆಗೆ ರೈತರು, ಕೂಲಿಕಾರ್ಮಿಕರು ಹೋಗಲು ಸಾಧ್ಯವಾಗದೆ ಜಮೀನುಗಳು ಪಾಳುಬಿದ್ದಿದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ವಾಣಿಜ್ಯ ಬೆಳೆ ನಶಿಸಿ ಹೋಗಿದೆ. ಕೆಲವರು ತಮ್ಮ ಜಮೀನಿನಲ್ಲಿ ಹೋಂ ಸ್ಟೇ, ರೆಸಾರ್ಟ್ ನಿರ್ಮಿಸಿ ಜೀವನಕ್ಕೆ ದಾರಿ ಮಾಡಿಕೊಂಡಿದ್ದಾರೆ. ಇನ್ನುಳಿದವರಿಗೆ ಜೀವನೋಪಾಯಕ್ಕೆ ದಾರಿ ಇಲ್ಲದಂತಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿವರ್ಷ ಅತಿವೃಷ್ಟಿಯಿಂದ ಜನಜೀವನ ಕಷ್ಟಕರವಾಗಿದೆ. ನಾನು ಶಾಸಕನಾಗಿದ್ದಾಗ ಆ ಭಾಗದ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ನೀಡಿದ್ದೆ. ಚಿಕ್ಕಮಗಳೂರಿಂದ ಮೂಡಿಗೆರೆ-ಬೈರಾಪುರ ಮೂಲಕ ಶಿಶಿಲಕ್ಕೆ ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿತ್ತು. ಕಾಮಗಾರಿಗೆ 900 ಕೋಟಿ ರೂ. ಅನುದಾನ ಬಿಡುಗಡೆಯಾಗಿತ್ತು. ಡೋಂಗಿ ಪರಿಸರವಾದಿಗಳು ಆ ಯೋಜನೆಯನ್ನು ನಿರ್ನಾಮ ಮಾಡಿದ್ದಾರೆ. ಹೆದ್ದಾರಿ ನಿರ್ಮಾಣವಾಗಿದ್ದರೆ ಅಲ್ಲಿನ ಜನ ಬದುಕು ಕಟ್ಟಿಕೊಳ್ಳಲು ಅನುಕೂಲವಾಗುತ್ತಿತ್ತು ಎಂದರು.
ಎತ್ತಿನ ಭುಜ ವ್ಯಾಪ್ತಿಯಲ್ಲಿರುವ ಹುಲಿಗಳಿಗೆ ತೊಂದರೆಯಾಗುತ್ತದೆ. ಕಪ್ಪೆಗಳು ಸಾಯುತ್ತವೆ ಎಂಬ ಕಾರಣ ನೀಡಿ ಚಾರಣಕ್ಕೆ ನಿರ್ಬಂಧ ವಿಧಿಸಲಾಗಿದೆ. ಪರಿಸರವಾದಿಗಳಿಗೆ ಜನರ ಬದುಕಿನ ಬಗ್ಗೆ ಕಾಳಜಿ ಇಲ್ಲವಾಗಿದೆ. ಕಪ್ಪೆಗಳ ಬಗ್ಗೆ ಕಾಳಜಿ ಹೆಚ್ಚಾಗಿದೆ. ಎತ್ತಿನಭುಜ ವ್ಯಾಪ್ತಿಯಲ್ಲಿ ಹುಲಿಗಳೇ ಇಲ್ಲ. ಚಾರಣಿಗರು ಎತ್ತಿನಭುಜಕ್ಕೆ ಪ್ಲಾಸ್ಟಿಕ್ ಕೊಂಡಯ್ಯದಂತೆ ಅರಣ್ಯ ಇಲಾಖೆ ನಿರ್ಬಂಧ ವಿಧಿಸಿ, ಮಣ್ಣಿನ ಪಾತ್ರೆ ಕೊಂಡೊಯ್ಯುವಂತೆ ಸೂಚಿಸಲಿ ಎಂದು ಹೇಳಿದರು.
ಊರುಬಗೆ, ಬೆಟ್ಟಗೆರೆ, ತ್ರಿಪುರ, ತರುವೆ, ಬಾಳೂರು, ಸುಂಕಸಾಲೆ, ಹಿರೇಬೈಲ್, ಕಳಸ, ಸಂಸೆ, ಕುದುರೆಮುಖ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು. ಪ್ರವಾಸೋದ್ಯಮದಿಂದ ಹರಿದು ಬಂದ ಸಂಪನ್ಮೂಲದಿಂದ ನಾಡಿನ ಅಭಿವೃದ್ಧಿ ಸಾಧ್ಯವಿದೆ. ಆಸ್ಟ್ರೇಲಿಯಾ ದೇಶ ಅಭಿವೃದ್ಧಿಗೊಳ್ಳಲು ಅಲ್ಲಿನ ಪ್ರವಾಸೋದ್ಯಮ ಕಾರಣ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮಲ್ಲಿ ಕೂಡ ನೈಸರ್ಗಿಕವಾದ ಪ್ರವಾಸಿ ಸ್ಥಳವಿದೆ. ಅಲ್ಲಿಗೆ ಪ್ರವಾಸಿಗರು ಹೋದರೆ ಅರಣ್ಯಕ್ಕೆ ತೊಂದರೆಯಿಲ್ಲ ಎಂದು ಹೇಳಿದರು.

ಟಿಂಬರ್ ಮರ ಕತ್ತರಿಸಲು ನಾವು ಅನುಮತಿ ಕೇಳಿಲ್ಲ. ಪ್ರವಾಸೋದ್ಯಮಕ್ಕೆ ಅನುಮತಿ ಕೇಳುತ್ತಿದ್ದೇವೆ. ನಾವು ಕೂಡ ಕಾಫಿ, ಬತ್ತ, ಬಾಳೆ, ಅಡಕೆ, ಕಾಳುಮೆಣಸು ಬೆಳೆಯುವವರು. ನಮ್ಮಷ್ಟು ಪರಿಸರ ಪ್ರೇಮಿಗಳು ಮತ್ತಾರು ಇಲ್ಲ. ಕೆಲವು ಡೋಂಗಿ ಪರಿಸರವಾದಿಗಳಿಂದ ಪರಿಸರಕ್ಕೆ ಕುತ್ತು ಬರುತ್ತಿದೆ. ಅವರನ್ನು ದೂರವಿಟ್ಟು ಎತ್ತಿನಭುಜ ಚಾರಣಕ್ಕೆ ವಿಧಿಸಿರುವ ನಿರ್ಬಂಧವನ್ನು ತೆರವುಗೊಳಿಸಬೇಕು.
ಎಂ.ಪಿ.ಕುಮಾರಸ್ವಾಮಿ, ಮಾಜಿ ಶಾಸಕ

Share This Article

ಸಾಮಾನ್ಯವಾಗಿ ಮಾಡುವ ಈ ತಪ್ಪುಗಳಿಂದಲೇ ಲೈಂಗಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ! Relationship Tips

Relationship Tips : ಪರಸ್ಪರ ತಿಳುವಳಿಕೆಯುಳ್ಳ ಉತ್ತಮ ಲೈಂಗಿಕ ಜೀವನವು ಸಂತೋಷದ ದಾಂಪತ್ಯಕ್ಕೆ ಕಾರಣವಾಗುತ್ತದೆ. ಲೈಂಗಿಕ…

ಬ್ರೆಡ್​​ ಇಲ್ಲದೆ ಮನೆಯಲ್ಲೇ ಮಾಡಿ ಸ್ಯಾಂಡ್ವಿಚ್​; ಇಲ್ಲಿದೆ ಸಿಂಪಲ್​ ವಿಧಾನ | Recipe

ತ್ವರಿತ ಉಪಹಾರಕ್ಕಾಗಿ ಸ್ಯಾಂಡ್ವಿಚ್ ಮಾಡುವುದು ಜನರ ಮೊದಲ ಆಯ್ಕೆಯಾಗಿದೆ. ಮಕ್ಕಳು ಟಿಫಿನ್ ಮುಗಿಸಿ ಅದೇ ಟಿಫಿನ್…

ಒಣದ್ರಾಕ್ಷಿಯಿಂದಾಗುವ ಆರೋಗ್ಯ ಪ್ರಯೋಜನ ಗೊತ್ತಿದೆ; ಮನೆಯಲ್ಲೇ Dry Grapes ತಯಾರಿಸುವ ವಿಧಾನ ಇಲ್ಲಿದೆ | Recipe

ಒಣದ್ರಾಕ್ಷಿ ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ ಒಣದ್ರಾಕ್ಷಿಯಲ್ಲಿ ಯಾವುದೇ ಕಲಬೆರಕೆ ಇಲ್ಲಿದಿದ್ದಾಗ ಮಾತ್ರ ಈ ಪ್ರಯೋಜನ…