ಕೊಟ್ಟಲಗಿ: ಸರ್ಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆಯುತ್ತಿದ್ದಾರೆ. ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳಬೇಕು. ಶಿಕ್ಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಬಿಆರ್‌ಸಿ ಎಸ್.ಕೆ.ಖೋತ ಹೇಳಿದ್ದಾರೆ.
ಸ್ಥಳೀಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಪ್ರಥಮ ಮೈಸೂರು ಕಲಿಕಾ ಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿಆರ್‌ಸಿ ಬಿ.ಜಿ. ಅವಟಿ ಮಾತನಾಡಿ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರಥಮ ಮೈಸೂರು ಸಂಸ್ಥೆಯ ಕನ್ನಡ ಹಾಗೂ ಗಣಿತ ಮೇಳ ಆಯೋಜಿಸಿ ಪ್ರತಿ ಮಗುವಿನ ಕಾಳಜಿವಹಿಸಿ ಸಂಸ್ಥೆಯ ಹೆಸರು ಉಳಿಸಿಕೊಂಡಿದ್ದಾರೆ ಎಂದರು.
ಸಂಸ್ಥೆಯ ಮುಖ್ಯಸ್ಥ ಜಗದೀಶ ಮತ್ತು ಮಹೇಶ, ಮುಖ್ಯಾಧ್ಯಾಪಕ ಹುಣಚಾಳ, ಸಂಪನ್ಮೂಲ ವ್ಯಕ್ತಿ ಶಿವಮೂರ್ತಿ, ರಾಚಯ್ಯ ಮಾಲಗಾವಿ, ಮುಜಾವರ, ಗುರು ದೊಡ್ಡನಿಂಗಪ್ಪಗೋಳ, ಮಲ್ಲಿಕಾರ್ಜುನ ದೊಡ್ಡನಿಂಗಪ್ಪಗೋಳ, ಸಣ್ಣಪ್ಪ ದಾನಪ್ಪಗೋಳ, ಗಿರಮಲ್ಲ ಬಡವ್ವಗೋಳ, ಗುರು ಈಶ್ವರಪ್ಪಗೋಳ, ಪಿಡಿಒ ಕಾಡೇಶ ಅಡಹಳ್ಳಿ ಹಾಗೂ ಗ್ರಾಮಸ್ಥರು ಇದ್ದರು.